– ಹೆಲ್ಮೆಟ್ ಧರಿಸಿ, ಜೀವ ಉಳಿಸಿಕೊಳ್ಳಲು ಮನವಿ
ಹಾವೇರಿ: ಜಿಲ್ಲೆಯಲ್ಲಿ 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹವನ್ನ ಗಣೇಶ ವೇಷಧಾರಿ ಮೂಲಕ ಬೈಕ್ ಸವಾರರಿಗೆ ಗುಲಾಬಿ ಹೂ ನೀಡುವ ಮೂಲಕ ಜಾಗೃತಿ ಮೂಡಿಸಿದರು.
ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಹಾವೇರಿ ಸಂಚಾರಿ ಠಾಣೆಯ ಸಿಬ್ಬಂದಿ ಆಯೋಜನೆ ಮಾಡಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಎಸ್‍ಪಿ ದೇವರಾಜ್ ಚಾಲನೆ ನೀಡಿದರು. ಬೈಕ್ ಸವಾರರನ್ನ ನಿಲ್ಲಿಸಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಕೊಂಡು ಬೈಕ್ ಚಾಲನೆ ಮಾಡಿ ಜೀವ ಉಳಿಸಿಕೊಳ್ಳಿ. 50 ಸಾವಿರ ರೂಪಾಯಿ ಖರ್ಚು ಮಾಡಿ ವಾಹನ ಖರೀದಿ ಮಾಡಿತ್ತೀರಿ. 600 ರೂಪಾಯಿ ಖರ್ಚು ಮಾಡಿ ಹೆಲ್ಮೆಟ್ ಖರೀದಿಸಿ ಹೆಲ್ಮೆಟ್ ಧರಿಸಿ ಚಾಲನೆ ಮಾಡಿ. ಇದರಿಂದ ನೀವು ಸುರಕ್ಷಿತವಾಗಿ ಮನೆ ತಲುಪಿರಿ ಎಂದು ಜಾಗೃತಿಯ ಮಾತು ಹೇಳಿದರು.
Advertisement
Advertisement
ಗಣೇಶನ ವೇಷಭೂಷಣ ತೊಟ್ಟ ವ್ಯಕ್ತಿ ಎಲ್ಲರಿಗೂ ಗುಲಾಬಿ ನೀಡಿ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡಿ ಎಂದು ಮನವಿ ಮಾಡಿದರು. ಅಲ್ಲದೇ ಕೈಯಲ್ಲಿ ನನ್ನ ತಲೆಯನ್ನ ಪುನಃ ಜೋಡಿಸಬಹುದು. ಆದರೆ ನಿಮ್ಮ ತಲೆಯನ್ನ ಪುನಃ ಜೋಡಿಸಲು ಸಾಧ್ಯವಿಲ್ಲ. ಆದ್ದರಿಂದ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಅನ್ನೋ ನಾಮಫಲಕ ಹಿಡಿದುಕೊಂಡು ಜಾಗೃತಿ ಮೂಡಿಸಿದರು.
Advertisement
ಸಂಚಾರಿ ಠಾಣೆಯ ಪಿಎಸ್‍ಐ ಪಲ್ಲವಿ, ಸಂಚಾರಿ ಠಾಣೆ ಎಲ್ಲಾ ಸಿಬ್ಬಂದಿ ಭಾಗವಹಿಸಿ, ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಿದರು.