ಬೆಂಗಳೂರು: ದೇಶಾದ್ಯಂತ ಗಣೇಶೋತ್ಸವ ಆಚರಣೆಗೆ (Celebration) ದಿನಗಣನೆ ಶುರುವಾಗಿದೆ. ಇದರ ಮಧ್ಯೆ ಗಣೇಶೋತ್ಸವ (Ganesh Chaturthi) ಎರಡೆರಡು ದಿನದ ಬಗ್ಗೆ ಗೊಂದಲ ಏರ್ಪಟ್ಟಿದೆ. ಕ್ಯಾಲೆಂಡರ್‌ನಲ್ಲಿ ಸೆಪ್ಟೆಂಬರ್ 18 ಅಂತಾ ಕೆಲವೆಡೆ ಇದ್ದರೆ ಇನ್ನೂ ಕೆಲವು ಕ್ಯಾಲೆಂಡರ್‌ನಲ್ಲಿ ಸೆಪ್ಟೆಂಬರ್ 19 ಅಂತಾ ಇದೆ. ಹಾಗಿದ್ದರೆ ಪಂಚಾಂಗದ ಪ್ರಕಾರ ಯಾವಾಗ ಗಣೇಶ ಹಬ್ಬ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಾಮಾನ್ಯವಾಗಿ ಗೌರಿ ಹಬ್ಬದ ಬಳಿಕ ಗಣೇಶನ ಮೆರವಣಿಗೆ ಹಬ್ಬ ಆಚರಿಸುವುದು ರೂಢಿ. ಆದರೆ ಈ ಬಾರಿ ಗೌರಿ ಹಬ್ಬ ಮತ್ತು ಗಣೇಶನ ಹಬ್ಬ ಒಂದೇ ದಿನ ಬಂದಿದೆ. ಹೀಗಾಗಿ ಹಬ್ಬ ಸೆಪ್ಟೆಂಬರ್ 18ಕ್ಕಾ ಅಥವಾ 19ಕ್ಕಾ ಎಂಬ ಗೊಂದಲ ಇದೆ. ಕ್ಯಾಲೆಂಡರ್‌ನಲ್ಲಿಯೂ ಈ ಬಗ್ಗೆ ಗೊಂದಲ ಇದೆ. ಸೆಪ್ಟೆಂಬರ್ 18ರಂದು ತದಿಗೆ ಚತುರ್ಥಿ ಹಾಗೂ ಸೆಪ್ಟೆಂಬರ್ 19ರಂದು ಪಂಚಮಿ ಚತುರ್ಥಿ ಇದೆ. ತದಿಗೆ ಚತುರ್ಥಿಯಂದೇ ಗೌರಿ ಗಣೇಶ ಹಬ್ಬ ಆಚರಣೆಗೆ ಸೂಕ್ತ. ಒಟ್ಟಿಗೆ ಗೌರಿ ಗಣೇಶ ಪ್ರತಿಷ್ಟಾಪನೆ ಮಾಡಬಹುದು ಎಂಬುದು ಕೆಲವರ ವಾದ. ಇದನ್ನೂ ಓದಿ: ವರ್ಗಾವಣೆ ಮಾಡಿದರೂ ಜಾಗ ಖಾಲಿ ಮಾಡದ ಮುಕ್ತ ವಿವಿ ಹಣಕಾಸು ಅಧಿಕಾರಿ!
Advertisement
Advertisement
ಜೋತಿಷ್ಯರ (Astrologer) ಪ್ರಕಾರ ಚಂದ್ರಮಾನವನ್ನು ಉತ್ತರ ಕರ್ನಾಟಕ, ಆಂಧ್ರದವರು ಚಂದ್ರಮಾನ ರೀತಿ ಆಚರಿಸುತ್ತಾರೆ. ಚಂದ್ರಮಾನ ರೀತಿ ಆಚರಣೆ ಮಾಡುವವರು ಗೌರಿ ಗಣೇಶ ಒಂದೇ ದಿನ ಆಚರಣೆ ಮಾಡುತ್ತಾರೆ. ಸೆಪ್ಟೆಂಬರ್ 18ರ ಸೋಮವಾರವೇ ಗೌರಿ, ಗಣೇಶ ಹಬ್ಬ ಆಚರಣೆ ಮಾಡುವುದು ಸೂಕ್ತ. ಇದನ್ನೂ ಓದಿ: ಚೈತ್ರಾ ಗ್ಯಾಂಗ್ ವಂಚನೆ ಪ್ರಕರಣ – ಸಿಸಿಬಿಯಿಂದ ಸ್ಥಳ ಮಹಜರು
Advertisement
Advertisement
ಸೋಮವಾರ ಬೆಳಗ್ಗೆ 9:56ರಿಂದ ಮಂಗಳವಾರ ಬೆಳಗ್ಗೆ 10:20 ನಿಮಿಷದವರಿಗೆ ಹಬ್ಬ ಆಚರಿಸಬಹುದು. ಸೌರಮಾನ ಪದ್ಧತಿ ಪ್ರಕಾರ ಹಬ್ಬ ಆಚರಿಸುವವರು ಮಂಗಳವಾರ ಆಚರಣೆ ಮಾಡುವುದು ಸೂಕ್ತ. ಚಂದ್ರಮಾನ ಪದ್ಧತಿಯಲ್ಲಿ ಆಚರಿಸುವವರು ಸೋಮವಾರವೇ ಗೌರಿ ಗಣೇಶ ಹಬ್ಬ ಮಾಡಬಹುದು. ಇದನ್ನೂ ಓದಿ: ಚೈತ್ರಾ ಗ್ಯಾಂಗ್ ಮಾದರಿಯಲ್ಲೇ ಮತ್ತೊಂದು ಪ್ರಕರಣ – ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಲಕ್ಷ ಲಕ್ಷ ವಂಚನೆ
Web Stories