ಬಾಲಿವುಡ್ ಬಹುತೇಕ ಸ್ಟಾರ್ ನಟ ನಟಿಯರು ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಬಹುತೇಕರು ಕಲಾವಿದರು ಮತ್ತು ತಂತ್ರಜ್ಞರು ಶೂಟಿಂಗ್ ಬಂದ್ ಮಾಡಿ, ತಮ್ಮ ಮನೆಯಲ್ಲಿ ಗಣೇಶ ಪೂಜೆ ಮಾಡುತ್ತಾರೆ. ಅದರಂತೆಯೇ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಮನೆಯಲ್ಲೂ ಕೂಡ ಗಣೇಶನನ್ನು ಪತ್ರಿಷ್ಠಾಪಿಸಲಾಗಿತ್ತು.
ತಮ್ಮ ನಿವಾಸ ಮನ್ನತ್ ನಲ್ಲಿ ಗಣೇಶನ ಹಬ್ಬವನ್ನು ಸಡಗರಿಂದ ಮಾಡಿದ ಫೋಟೋವನ್ನು ಶಾರುಖ್ ಹಂಚಿಕೊಂಡಿದ್ದು, ಮೋದಕ ತಿಂದು ಸಂತೃಪ್ತನಾದ ಬಗ್ಗೆ ಹೇಳಿದ್ದಾರೆ. ಎಲ್ಲರಿಗೂ ವಿಘ್ನ ವಿನಾಶಕ ಗಣಪತಿ ಒಳ್ಳೆಯದ್ದನ್ನು ಮಾಡಲಿ ಎಂದು ಕೇಳಿಕೊಂಡಿದ್ದಾರೆ. ದೇವರ ಮೇಲಿನ ನಂಬಿಕೆ ಮತ್ತು ಪರಿಶ್ರಮದಿಂದ ಮಾತ್ರ ಯಶಸ್ಸನ್ನು ಗಳಿಸಲು ಸಾಧ್ಯ ಎಂದು ಪ್ರೇರಕವಾದ ಸಾಲುಗಳನ್ನೂ ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನೂಡಲ್ಸ್ ಬಿಡಿಸು ಅಂದ್ರೆ ಮೂಲಂಗಿ ಬಿಡಿಸ್ತಾಳೆ – ಸೋನು ಪೇಂಟಿಂಗ್ಗೆ ರಾಕೇಶ್ ಫುಲ್ ಶಾಕ್..!
ಶಾರುಖ್ ಖಾನ್ ನಿವಾಸದಲ್ಲಿ ಇಡಲಾದ ಗಣೇಶನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಶಾರುಖ್ ಖಾನ್ ಅವರ ಈ ನಡೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಧಾರ್ಮಿಕ ಗಲಾಟೆಯ ಮಧ್ಯ ಶಾರುಖ್ ಖಾನ್ ಹಿಂದೂ ದೇವರನ್ನು ಪೂಜಿಸುವ ಮೂಲಕ ಉತ್ತಮ ಸಂದೇಶ ಸಾರಿದ್ದಾರೆ ಎಂದು ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ ಮಾಡಿದ್ದಾರೆ.