ಬೆಳಗಾವಿ: ಬರೋಬ್ಬರಿ 38 ಗಂಟೆಗಳ ಕಾಲ ಗಣೇಶ ವಿಸರ್ಜನೆ (Ganesh Procession) ನಡೆಯವ ಮೂಲಕ ಬೆಳಗಾವಿ (Belagavi) ಹೊಸ ದಾಖಲೆ ಬರೆದಿದೆ. ಮಹಾರಾಷ್ಟ್ರದ (Maharashtra) ಮುಂಬೈ ಮಹಾನಗರಕ್ಕೂ ಮೀರಿ ಬೆಳಗಾವಿಯಲ್ಲಿ ಈ ಬಾರಿ ಗಣೇಶ ವಿಸರ್ಜನ ಮಹೋತ್ಸವ ಜರುಗಿದ್ದು ಹೊಸ ಇತಿಹಾಸ ಸೃಷ್ಟಿಯಾಗಿದೆ.
ಸಾರ್ವಕಾಲಿಕ ದಾಖಲೆಗೆ ಮಹಾನಗರ ಪಾಲಿಕೆಯ ಸದಸ್ಯರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೆ.6 ರ ಸಂಜೆ 4 ಗಂಟೆಗೆ ಶುರುವಾಗಿದ್ದ ಗಣೇಶ ಮರೆವಣಿಗೆಯು ಇಂದು (ಸೆ.8) ಬೆಳಗ್ಗೆ ಆರು ಗಂಟೆಯವರೆಗೂ ಶಾಂತಿಯುತವಾಗಿ ನಡೆಯಿತು. ಇದನ್ನೂ ಓದಿ: ಈ ಸ್ಥಳವನ್ನು ಮಿನಿ ಪಾಕಿಸ್ತಾನ ಮಾಡಲು ಹೊರಟಿದ್ದಾರೆ, ಸತ್ರೆ ತಮಟೆಯ ಶಬ್ಧ ಕೇಳಬಾರದು: ಮದ್ದೂರು ಮಹಿಳೆಯ ಆಕ್ರೋಶ
ಗಣೇಶ ಮೆರವಣಿಗೆ ಶಾಂತ ರೀತಿಯಲ್ಲಿ ನಡೆಸಿಕೊಟ್ಟ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಪೊಲೀಸರಿಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದರು. ಬೆಳಗಾವಿಯ ಕಪಿಲೇಶ್ವರ ಹೊಂಡದಲ್ಲಿ ವಿಸರ್ಜನೆಯಾಗಿರುವ ಗಣೇಶ ಮೂರ್ತಿಗಳ ವಿಲೇವಾರಿ ಕಾರ್ಯವೂ ಸಹ ಪ್ರಾರಂಭವಾಗಲಿದೆ.