ಬೆಂಗಳೂರು: ಮನೆ, ಟ್ಯಾಕ್ಸಿ, ಸೈಕಲ್, ಬೈಕ್ ಬಾಡಿಗೆಗೆ ಸಿಗೋದು ಕಾಮನ್. ಆದರೆ ದೇವರ ಮೂರ್ತಿಗಳು ಬಾಡಿಗೆಗೆ ಸಿಗುತ್ತಿದೆ. ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿ ಬಾಡಿಗೆ ಗಣೇಶನ ಟ್ರೆಂಡ್ ಸ್ಟಾರ್ಟ್ ಆಗಿದೆ.
ಈಗಾಗಲೇ ಗಣೇಶ ಹಬ್ಬಕ್ಕೆ ಕೌಂಟ್ ಡೌನ್ ಶುರು ಆಗಿದೆ. ಎಲ್ಲೆಡೆ ಸಿದ್ಧತೆ ಸಹ ಜೋರಾಗಿದೆ. ಈ ಬಾರಿಯೂ ಪ್ರತಿ ವರ್ಷದಂತೆ ಬಿಬಿಎಂಪಿ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪಿಒಪಿ ಗಣೇಶಗಳನ್ನು ಬ್ಯಾನ್ ಮಾಡಿದೆ. ಕೆಲವಡೆ ಪಿಒಪಿ ಹಾಗೂ ಪ್ಲಾಸ್ಟಿಕ್ ಗಣೇಶ ವಿಗ್ರಹಗಳನ್ನು ಮಾರಾಟ ಮಾಡಲಾಗುತ್ತಿದೆ. ಅದು ಸಹ ಬಾಡಿಗೆಗೆ ನೀಡುವ ಟ್ರೆಂಡ್ ಸಿಲಿಕಾನ್ ಸಿಟಿಯಲ್ಲಿ ಆರಂಭಗೊಂಡಿದ್ದು, ಮುಂಗಡ ಬುಕಿಂಗ್ ಸಹ ನಡೆಯುತ್ತಿದೆ.
Advertisement
Advertisement
ಬಾಡಿಗೆ ಗಣೇಶ ವಿಗ್ರಹಗಳ ದರ: 6 ಅಡಿಯ ಚಿಕ್ಕ ಗಣೇಶ ವಿಗ್ರಹಗಳಿಗೆ 1 ಸಾವಿರ ರೂಪಾಯಿ, 10 ಅಡಿಯ ಮೂರ್ತಿಗೆ 5 ಸಾವಿರ ಹಾಗೂ 30 ಅಡಿಯ ಗಣೇಶ ಮೂರ್ತಿಗೆ, 50 ಸಾವಿರ ರೂಪಾಯಿ ಇದೆ.
Advertisement
Advertisement
ಈ ಗಣೇಶ ಮೂರ್ತಿಗಳನ್ನು ಬಾಡಿಗೆ ಪಡೆಯಬೇಕಾದ್ರೆ ಎರಡಷ್ಟು ಹಣವನ್ನು ಡೆಪಾಜಿಟ್ ಮಾಡಬೇಕು. ನಂತರ ಬೇಕಾದಷ್ಟು ದಿನ ಇಟ್ಟುಕೊಂಡು, ಮಾಲೀಕರಿಗೆ ವಾಪಾಸ್ ಮಾಡಬೇಕು. ಪ್ರವಾಹದಿಂದಾಗಿ ಮಣ್ಣು ಕೊಚ್ಚಿಕೊಂಡು ಹೋಗಿರುವುದರಿಂದ ಮಣ್ಣಿನ ಗಣೇಶ ಈ ಬಾರಿ ಅಷ್ಟು ತಯಾರಾಗಿಲ್ಲ. ಹೀಗಾಗಿ ಬಾಡಿಗೆ ಗಣೇಶಗಳಿಗೆ ಸಾರ್ವಜನಿಕರು ಮೊರೆ ಹೋಗಿದ್ದಾರೆ ಎಂದು ವ್ಯಾಪಾರಿಗಳು ಹೇಳುತ್ತಾರೆ.