Connect with us

ಮಗನ ಜೊತೆ ಗದಾಯುದ್ಧ ಮಾಡಿದ ಗೋಲ್ಡನ್ ಸ್ಟಾರ್- ವಿಡಿಯೋ

ಮಗನ ಜೊತೆ ಗದಾಯುದ್ಧ ಮಾಡಿದ ಗೋಲ್ಡನ್ ಸ್ಟಾರ್- ವಿಡಿಯೋ

ಬೆಂಗಳೂರು: ನಟ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಮಕ್ಕಳ ಜೊತೆ ಹೆಚ್ಚು ಕಾಲ ಕಳೆಯುತ್ತಾರೆ. ಆ ಸಂತೋಷದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಗಣೇಶ್ ತಮ್ಮ ಮಗ ವಿಹಾನ್ ಜೊತೆ ಗದಾಯುದ್ಧ ಮಾಡಿರುವ ವಿಡಿಯೋ ವೈರಲ್ ಆಗಿದೆ.

ಗಣೇಶ್ ಹಾಗೂ ವಿಹಾನ್ ಇಬ್ಬರು ಕೈಯಲ್ಲಿ ಬಲೂನ್ ರೀತಿಯಲ್ಲಿ ಬರುವ ಗದೆಯನ್ನು ಹಿಡಿದು ಯುದ್ಧ ಮಾಡುವ ವಿಡಿಯೋವನ್ನು ಗಣೇಶ್ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ತಂದೆ- ಮಗ ಇಬ್ಬರೂ ಮುದ್ದಾಗಿ ಜಗಳವಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ವಿಡಿಯೋದಲ್ಲಿ ತಂದೆ- ಮಗ ಜಗಳಾಡುತ್ತಿದ್ದು, ಮಗಳು ಚಾರಿತ್ರ್ಯ ಈ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ಗದಾಯುದ್ಧ ವಿತ್ ವಿಹಾನ್, ಕ್ಯಾಮರಾ ಗರ್ಲ್ ಬೈ ಚಾರಿತ್ರ್ಯ ಎಂದು ವಿಡಿಯೋ ಹಾಕಿ ಸ್ವತಃ ಗಣೇಶ್ ಟ್ವೀಟ್ ಮಾಡಿದ್ದಾರೆ.

ಈ ವಿಡಿಯೋ ಇದೀಗ ವೈರಲ್ ಆಗಿದ್ದು, 716 ಲೈಕ್ಸ್, 58 ರೀ-ಟ್ವೀಟ್ ಹಾಗೂ 57 ರಿಪ್ಲೈ ಬಂದಿದೆ. ಸದ್ಯ ಗಣೇಶ್ ಆರೆಂಜ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಹಿಂದೆ ಅವರು ನಟಿಸಿದ ಚಮಕ್ ಚಿತ್ರ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.

Advertisement
Advertisement