– ಅದ್ಧೂರಿ ಗಣೋತ್ಸವಕ್ಕೆ ಸರ್ಕಾರ ತಡೆ
ಬೆಂಗಳೂರು: ಷರತ್ತುಬದ್ಧ ನಿಯಮಗಳೊಂದಿಗೆ ಗಣೇಶೋತ್ಸವ ಆಚರಣೆಗೆ 5 ದಿನಗಳ ಅನುಮತಿ ನೀಡಿಲಾಗಿದೆ. ಷರತ್ತಿನ ಅನುಮತಿಯೊಂದಿಗೆ ರಾಜ್ಯದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಈ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್, ಮೂರು ದಿನದ ಗಣೇಶ ಹಬ್ಬಕ್ಕೆ ಅನುಮತಿ ನೀಡಲಾಗಿದೆ. ಮೆರವಣಿಗೆ, ಮನರಂಜನಾ ಕಾರ್ಯಕ್ರಮಕ್ಕೆ ಅವಕಾಶ ಇಲ್ಲ. ಬೀದಿ ಬೀದಿಗಳಲ್ಲಿ ಗಣೇಶ ಕೂರಿಸಲು ಅನುಮತಿ ಇಲ್ಲ. ಕೆರೆಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡುವಂತಿಲ್ಲ. ನಿಗದಿ ಮಾಡಿದ ಸ್ಥಳ, ಟ್ಯಾಂಕ್‍ಗಳಲ್ಲಿ ಮೂರ್ತಿ ವಿಸರ್ಜನೆ ಗುಂಪು ಸೇರದಂತೆ ನಿರ್ಬಂಧ ಹೇರಲಾಗಿದೆ. ಬೆಂಗಳೂರಿನಲ್ಲಿ ಬಿಬಿಎಂಪಿಗೆ ಹಬ್ಬದಲ್ಲಿ ನಿಯಮ ಪಾಲನೆಯ ಉಸ್ತುವಾರಿ ಜಿಲ್ಲಾಡಳಿತಗಳಿಂದ ಖಡಕ್ ಕಣ್ಗಾವಲಿಗೆ ಸೂಚನೆ ನೀಡಲಾಗಿದೆ.
Advertisement
Advertisement
ಅನುಮತಿ ಕೊಟ್ಟ ಸ್ಥಳಗಳು, ಸರ್ಕಾರಿ, ಖಾಸಗಿ ಖಾಲಿ ಜಾಗ, ಮೈದಾನಗಳಲ್ಲಿ ಮಾತ್ರ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿದೆ. ದೇವಸ್ಥಾನಗಳಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಆದ್ಯತೆ ನೀಡಲಾಗಿದೆ. ದೇವಸ್ಥಾನ ಮತ್ತು ಮನೆಗಳಲ್ಲಿ ಹೊರತುಪಡಿಸಿ ಸಾರ್ವಜನಿಕವಾಗಿ ಆಚರಣೆಗೆ ಹಲವು ಷರತ್ತುಗಳನ್ನು ಸರ್ಕಾರ ಹಾಕಿದೆ.
Advertisement
Advertisement
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಅಶೋಕ್, ಗಣೇಶ ಮೂರ್ತಿಯನ್ನು ಐದು ದಿನದೊಳಗೆ ವಿಸರ್ಜನೆ ಮಾಡಬೇಕು. ನಗರಗಳಲ್ಲಿ ವಾರ್ಡ್ ಗೆ ಒಂದು ಮಾತ್ರ ಗಣೇಶ ಮೂರ್ತಿ ಇಡಬಹುದು. ಹಳ್ಳಿಗಳಲ್ಲಿ ಸ್ಥಳೀಯಾಡಳಿತದ ಅನುಮತಿಯ ಮೇರೆಗೆ ಮೂರ್ತಿ ಪ್ರತಿಷ್ಠೆ ಮಾಡಬೇಕು ಎಂದರು. ಕೋವಿಡ್ ಪಾಸಿಟಿವಿಟಿ ರೇಟ್ ಶೇ.2ಕ್ಕಿಂತ ಕಡಿಮೆ ಇದ್ದಲ್ಲಿ ಮಾತ್ರ ಅವಕಾಶ ನೀಡಲಾಗುವುದು. ಪಾಸಿಟಿವಿಟಿ ದರ ಶೇ.2ಕ್ಕಿಂತ ಹೆಚ್ಚಿರುವ ಕಡೆಗಳಲ್ಲಿ ಗಣೇಶೋತ್ಸವ ನಡೆಸಲು ಅವಕಾಶ ನೀಡುವುದಲ್ಲ. ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸ್ಥಳಗಳಲ್ಲಿ ಕೋವಿಡ್ ಲಸಿಕಾ ಕ್ಯಾಂಪ್ ನಡೆಸಲಾಗುವುದು. 50 ಅಡಿಗಿಂತ ಹೆಚ್ಚು ಪೆಂಡಾಲ್ ಹಾಕುವಂತಿಲ್ಲ ಎಂದು ಸಚಿವ ಅಶೋಕ್ ಹೇಳಿದರು. ಇದನ್ನೂ ಓದಿ: ಗಣೇಶೋತ್ಸವಕ್ಕೆ 5 ದಿನ ಅವಕಾಶ ಕೊಟ್ಟ ಸರ್ಕಾರ
ಗಣೇಶೋತ್ಸವಕ್ಕೆ ಸರ್ಕಾರದ ಷರತ್ತುಗಳು ಹೀಗಿವೆ
– ದೇವಸ್ಥಾನ, ಮನೆಗಳಲ್ಲಿ ಅಥವಾ ಸರ್ಕಾರಿ, ಖಾಸಗಿ ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ ವಿಗ್ರಹ ಪ್ರತಿಷ್ಠಾಪನೆ
– ಸಾರ್ವಜನಿಕ ಸ್ಥಳಗಳಲ್ಲಿ ನಾಲ್ಕು ಅಡಿ ಎತ್ತರ ಹಾಗೂ ಮನೆಯೊಳಗೆ ಎರಡು ಅಡಿ ಎತ್ತರದ ಗಣೇಶ ಮೂರ್ತಿಗಳಿಗೆ ಅನುಮತಿ ನೀಡಲಾಗಿದೆ.
– ಗಣೇಶೋತ್ಸವ ಸಮಿತಿಗಳು, ಮಂಡಳಿಗಳು ಮುನಿಸಿಪಲ್ ಕಾರ್ಪೋರೇಷನ್, ಸ್ಥಳೀಯ ಆಡಳಿತದಿಂದ ಪೂರ್ವಾನುಮತಿ ಪಡೆಯಬೇಕು.
– ಒಂದು ನಗರ ಪುದೇಶಗಳಲ್ಲಿ ವಾರ್ಡಿಗೆ ಒಂದರಂತೆ ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ
– ಗಣೇಶ ಆಚರಣೆಯನ್ನು ಗರಿಷ್ಠ 5 ದಿನಗಳಿಗಿಂತ ಹೆಚ್ಚಿನ ದಿನ ಆಚರಿಸುವಂತಿಲ್ಲ
– ಸ್ಥಳಗಳಲ್ಲಿ 20 ಜನಕ್ಕೆ ಸೀಮಿತವಾದ ಆವರಣ ನಿರ್ಮಿಸುವುದು, ಒಮ್ಮೆಲೆ 20 ಕ್ಕಿಂತ ಹೆಚ್ಚಿನ ಜನ ಸೇರದಂತೆ ಭಕ್ತಾಧಿಗಳಿಗೆ ಅನುವು ಮಾಡುವುದು.
– ಆಯೋಜಕರು ಕೋವಿಡ್ ನೆಗೆಟಿವ್ ರಿಪೋರ್ಟ್ ಮತ್ತು ಲಸಿಕೆ ಪಡೆದಿರುವ ಬಗ್ಗೆ ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯ
– ಗಣೇಶ ಆಚರಣೆಯ ಆಯೋಜಿತ: ಸ್ಥಳಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಆಯೋಜಕರು ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು
– ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಯಾವುದೇ ಅಡ್ಡಿಯಾಗಬಾರದು
– ಯಾವುದೇ ರೀತಿ ಸಾಂಸ್ಕøತಿಕ, ಸಂಗೀತ, ನೃತ್ಯ, ಡಿ.ಜೆಗಳಂಥ ಮನರಂಜನಾ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ
– ಗಣೇಶ ಮೂರ್ತಿಗಳನ್ನು ತರುವಾಗ ಹಾಗೂ ವಿಸರ್ಜಿಸುವಾಗ ಮೆರವಣಿಗೆಗಳಿಗೆ ಸಂಪೂರ್ಣ ನಿಬರ್ಂಧ
– ಮಹಾನಗರ ಪಾಲಿಕೆ, ಜಿಲ್ಲಾಡಳಿತ, ಹತ್ತಿರದ ಸ್ಥಳೀಯ ಸಂಸ್ಥೆಗಳ, ಕರ್ನಾಟಕ ರಾಜ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಈಗಾಗಲೇ ನಿರ್ಮಿಸಲಾದ ಹೊಂಡ ಅಥವಾ ಮೂಬೈಲ್ ಟ್ಯಾಂಕ್ ಗಳಲ್ಲಿ ಅಥವಾ ಕೃತಕ ವಿಸರ್ಜನಾ ಟ್ಯಾಂಕರ್‍ಗಳಲ್ಲಿ ಮೂರ್ತಿಗಳನ್ನು ವಿಸರ್ಜಿಸಬೇಕು.
– ದೇವಸ್ಥಾನ, ಸಾರ್ವಜನಿಕ ಸ್ಥಳಗಳಲ್ಲಿ ದಿನನಿತ್ಯ ಸ್ಯಾನಿಟೈಸೇಷನ್ ಮಾಡಬೇಕು
– ಸಾರ್ವಜನಿಕ ದರ್ಶನಕ್ಕಾಗಿ ಆಗಮಿಸುವ ಭಕ್ತಾಧಿಗಳಿಗೆ ಸ್ಯಾನಿಟೈಸರ್ ಹಾಗೂ ಥರ್ಮಲ್ ಟ್ರೈನಿಂಗ್ ವ್ಯವಸ್ಥೆ ಕಲ್ಪಿಸಬೇಕು
– ಭಕ್ತಾಧಿಗಳಿಗೆ 6 ಅಡಿ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯವಾಗಿದೆ.
– ಬೀದಿ ಬೀದಿಗಳಲ್ಲಿ ಗಣೇಶ ಕೂರಿಸಲು ಅನುಮತಿ ಇಲ್ಲ
– ವಾರ್ಡ್‍ಗೊಂದು, ಗ್ರಾಮಕ್ಕೊಂದು ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗಿದೆ
– ಕೇರಳ, ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ, ತಾಲ್ಲೂಕುಗಳಲ್ಲಿ ಪಾಸಿಟಿವಿಟಿ ದರ 2% ಕ್ಕಿಂತ ಕಮ್ಮಿ ಇದ್ರೆ ಮಾತ್ರ ಹಬ್ಬಕ್ಕೆ ಅವಕಾಶ