ನಟ, ನಿರ್ದೇಶಕ ಉಪೇಂದ್ರ ನಿವಾಸದಲ್ಲಿ ಪ್ರತಿ ವರ್ಷವೂ ಗಣೇಶ ಚತುರ್ಥಿ (Ganesha Chaturthi) ಹಬ್ಬ ಬಹಳ ಜೋರಾಗಿರುತ್ತೆ. ಕುಟುಂಬಸ್ಥರು ಇಂಡಸ್ಟ್ರಿಯ ಆಪ್ತರನ್ನ ಕರೆದು ಹಬ್ಬ ಮಾಡ್ತಾರೆ ಉಪೇಂದ್ರ (Upendra). ಈ ಬಾರಿಯೂ ಅಷ್ಟೇ ಜೋರಾಗಿ ಹಬ್ಬ ನಡೆದಿದೆ.
ಮನೆಯ ಮೇಲ್ಛಾವಣಿಯ ಕೊಠಡಿಯಲ್ಲಿ ಗಣೇಶ ಮೂರ್ತಿ ಕೂರಿಸಿ ಅದ್ಧೂರಿ ಮತ್ತು ಶಾಸ್ತ್ರೋಕ್ತವಾಗಿ ಪೂಜಾ ಕೈಂಕರ್ಯ ನೆರವೇರಿಸಿದ್ದಾರೆ. ಈ ಬಾರಿಯೂ ಹಬ್ಬ ವಿಜೃಂಭಣೆಯಿಂದ ನಡೆದಿದೆ. ಈ ಸಂಭ್ರಮದ ಫೋಟೋಗಳನ್ನ ಉಪೇಂದ್ರ ಪತ್ನಿ ಪ್ರಿಯಾಂಕ ಉಪೇಂದ್ರ ಇನ್‌ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಪ್ರತಿ ವರ್ಷ ಉಪೇಂದ್ರ-ಪ್ರಿಯಾಂಕ ದಂಪತಿ ಸಮೇತ ಕುಳಿತು ಗಣೇಶ ಪೂಜೆ ಮಾಡ್ತಾರೆ. ಗಣಪತಿ ಹೋಮ ಮಾಡ್ತಾರೆ. ತಂದೆ ತಾಯಿ, ಅಣ್ಣ ಅತ್ತಿಗೆ ಅಣ್ಣನ ಮಕ್ಕಳು ಹಾಗೂ ತಮ್ಮ ಕುಟುಂಬದ ಜೊತೆ ರಿಯಲ್ ಸ್ಟಾರ್ ಉಪ್ಪಿ ಅದ್ಧೂರಿಯಾಗಿ ಹಬ್ಬ ಮಾಡಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ `ಕೂಲಿ’ ಚಿತ್ರದ ವಿಶೇಷ ಪಾತ್ರದಲ್ಲಿ ಮಿಂಚಿರುವ ಉಪ್ಪಿ ಸಖತ್ ಟ್ರೆಂಡಿಂಗ್‌ನಲ್ಲಿದ್ದಾರೆ. ಇದೀಗ ಉಪ್ಪಿ ಮನೆಯ ಅದ್ದೂರಿ ಸಡಗರ ವೈರಲ್ ಆಗಿದೆ.