Connect with us

Chamarajanagar

ಮಲೆ ಮಹದೇಶ್ವರನ ಸನ್ನಿಧಿಯಲ್ಲಿ ಗಣಪತಿ ಹೆಸರಲ್ಲಿ ತುಂಡುಡುಗೆ ಡ್ಯಾನ್ಸ್!

Published

on

ಚಾಮರಾಜನಗರ: ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ ಯುವತಿಯರು ತುಂಡು ಬಟ್ಟೆಯನ್ನು ಹಾಕಿ ನೃತ್ಯ ಮಾಡಿದ್ದರಿಂದ ಭಕ್ತರು ಮುಜುಗರಕ್ಕೆ ಒಳಗಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಮಲೆ ಮಾದೇಶ್ವರ ಬೆಟ್ಟದಲ್ಲಿ ಜರುಗಿದೆ.

ಸೋಮವಾರ ರಾತ್ರಿ ಮಾದೇಶ್ವರ ಬೆಟ್ಟದಲ್ಲಿ ಗಣಪತಿ ಹಬ್ಬದ ಹಿನ್ನೆಲೆಯಲ್ಲಿ ಆರ್ಕೆಸ್ಟ್ರಾವನ್ನು ಆಯೋಜಿಸಲಾಗಿತ್ತು. ಈ ವೇಳೆ ‘ಮೂರೇ ಮೂರು ಪೆಗ್ಗಿಗೆ ತಲೆ ಗಿರಿ ಗಿರ ಎಂದಿದೆ’ ಎಂಬ ಹಾಡು ಸೇರಿದಂತೆ ಇನ್ನೂ ಅನೇಕ ಹಾಡುಗಳಿಗೆ ಯುವತಿಯರು ತುಂಡು ಬಟ್ಟೆ ಧರಿಸಿ ನೃತ್ಯ ಮಾಡಿದ್ದಾರೆ.

ಧಾರ್ಮಿಕ ನಂಬಿಕೆಗೆ ಹೆಸರುವಾಸಿಯಾಗಿರುವ ಮಹದೇಶ್ವರ ಬೆಟ್ಟದಲ್ಲಿ ಈ ರೀತಿಯ ಕಾರ್ಯಕ್ರಮ ನಡೆದಿರುವುದು ಭಕ್ತರಿಗೆ ಮುಜುಗರ ಉಂಟು ಮಾಡಿದೆ. ಅಷ್ಟೇ ಅಲ್ಲದೇ ಸೋಮವಾರ ಬೆಟ್ಟಕ್ಕೆ ಬಂದ ಭಕ್ತರು ಈ ದೃಶ್ಯವನ್ನು ಕಂಡು ಮಾದಪ್ಪನ ದರ್ಶನವನ್ನು ಪಡೆಯದೇ ಹೊರಟು ಹೋಗಿದ್ದಾರೆ.

ಮಾದಪ್ಪನ ಸನ್ನಿಧಿಯಲ್ಲಿ ಇಂತಹ ಕಾರ್ಯಕ್ರಮಗಳಿಗೆ ಅನುಮತಿ ನೀಡಿರುವ ಮಲೆ ಮಹದೇಶ್ವರ ಬೆಟ್ಟ ಪ್ರಾಧಿಕಾರ ಇದೀಗ ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ.

Click to comment

Leave a Reply

Your email address will not be published. Required fields are marked *

www.publictv.in