ಕೋಲಾರ: ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆ ಮಾಡುತ್ತಿದೆ. ಎಲ್ಲರೂ ಪರಿಸರ ಸ್ನೇಹಿ, ಪಿಒಪಿ ಗಣಪತಿ ಖರೀದಿಗೆ ಮುಂದಾಗಿದ್ದಾರೆ. ಆದರೆ ಜಿಲ್ಲೆಯಲ್ಲಿ ಇಬ್ಬರು ಯುವತಿಯರು ತಮ್ಮ ಕುಂಚದಲ್ಲೇ ಮನಮೋಹಕ ಗಣಪನ ಮೂಡಿಸುತ್ತಿದ್ದಾರೆ.
ಶ್ರೀರಕ್ಷಾ ಮತ್ತು ಹರ್ಷಿತ ಗಣಪತಿ ಬಿಡಿಸಿರುವ ಯುವತಿಯರು. ಇವರು ಅಮರನಾಥ್ ಹಾಗೂ ನಾಗರೇಖಾ ಅವರ ಮಕ್ಕಳಾಗಿದ್ದು, ಇವರಿಗೆ ಚಿತ್ರಕಲೆಯಲ್ಲಿ ಆಸಕ್ತಿ ಇದೆ. ಹಾಗಾಗಿ ಇಬ್ಬರು ಕೂಡಾ ತಮ್ಮದೇ ಕಲ್ಪನೆಯಲ್ಲಿ ನೂರೆಂಟು ಗಣಪನ ಚಿತ್ರಗಳನ್ನ ಬಿಡಿಸಿದ್ದಾರೆ.
Advertisement
ಅದರಲ್ಲಿ 12 ರಾಶಿಗಳ ವಿವಿದ ಗಣಪ, ತಬಲ ಬಾರಿಸುತ್ತಿರುವ ಗಣಪ, ವೀಣೆ ನುಡಿಸುತ್ತಿರುವ ಗಣಪ, ಶಿವರೂಪಿ ಗಣಪ, ಪುರೋಹಿತ ಗಣಪ, ನೃತ್ಯ ಗಣಪ, ಹೀಗೆ ನೂರೆಂಟು ಬಗೆಯ ಊಹೆಗೂ ಸಿಲುಕದ ಕನಸಿನ ಗಣೇಶನನ್ನು ಬಿಡಿಸಿ ಅವುಗಳನ್ನು ಒಂದೆಡೆ ಇಟ್ಟು ಅದಕ್ಕೆ ಅಲಂಕಾರ ಮಾಡಿ ಈ ಬಾರಿಯ ಗಣೇಶ ಹಬ್ಬವನ್ನು ವಿಭಿನ್ನವಾಗಿ ಆಚರಣೆ ಮಾಡುತ್ತಿದ್ದಾರೆ.
Advertisement
Advertisement
ತಮ್ಮ ತಾಯಿ-ತಂದೆ ಹಾಗೂ ಗುರುಗಳ ಸಹಾಯದಿಂದ ಕಲ್ಪನಾ ಗಣಪತಿಗಳನ್ನ ಬಿಡಿಸಿರುವ ಯುವತಿಯರಿಗೆ ಈ ವರ್ಷದ ಹಬ್ಬ ತುಂಬಾ ಡಿಫರೆಂಟ್ ಆಗಿದೆ. ಈ ಇಬ್ಬರು ಯುವತಿಯರು ಅಕ್ಕ-ತಂಗಿಯರಾಗಿದ್ದು, ತಂಗಿ ಹರ್ಷಿತಾ ಎಂಬಿಬಿಎಸ್ ಮಾಡುತ್ತಿದ್ದಾರೆ. ಅಕ್ಕ ಶ್ರೀರಕ್ಷಾ ಎಂಟೆಕ್ ವಿದ್ಯಾಭ್ಯಾಸವನ್ನ ಮಾಡುತ್ತಿದ್ದಾರೆ. ಇದರ ಜೊತೆಗೆ ಅವರಿಗೆ ಚಿತ್ರಕಲೆಯಲ್ಲಿ ಎಲ್ಲಿಲ್ಲದ ಆಸಕ್ತಿ. ಹಾಗಾಗಿ ಅವರು ತಮ್ಮ ಬಿಡುವಿನ ವೇಳೆಯಲ್ಲಿ ಕಳೆದ ಒಂದು ವರ್ಷದಿಂದ ತಮ್ಮ ಇಷ್ಟದ ಚಿತ್ರಕಲೆಯನ್ನ ಬಿಡಿಸುವ ಮೂಲಕ ತಮ್ಮ ವಿಭಿನ್ನ ಅಭಿರುಚಿಯನ್ನ ಈ ರೀತಿ ತೋರ್ಪಡಿಸಿದ್ದಾರೆ.
Advertisement
ಪ್ರಾಚೀನ ಕಾಲದ ಗಣಪ ಸೇರಿದಂತೆ ಇಂಟರ್ ಸ್ಟೇಟ್ ಪೈಂಟಿಂಗ್ ಗಳನ್ನ ಸಹ ಬಿಡಿಸಲಾಗಿದೆ. ಚಿತ್ರಕಲೆಯಲ್ಲಿ ಆಸಕ್ತಿಯಿರುವ ನಮಗೆ ಮೊದಲಿಗೆ ಗಣೇಶನಿಂದ ಚಿತ್ರಕಲೆಯನ್ನ ಪ್ರಾರಂಭಿಸಿದ್ದು, ಮುಂದೆ ವಿವಿಧ ರೀತಿಯ ಚಿತ್ರಕಲೆಗಳನ್ನ ಮೂಡಿಸುವ ಆಸಕ್ತಿಯನ್ನ ಹೊಂದಿದ್ದೆವು. ಅದರ ಜೊತೆಗೆ ಗಣೇಶ ಅಂದರೆ ಪಂಚಪ್ರಾಣ ಹಾಗಾಗಿ ನಮ್ಮದೇ ಆದ ಕಲ್ಪನೆಯಲ್ಲಿ ಗಣೇಶನ ಚಿತ್ರಗಳನ್ನು ತಮ್ಮ ಚಿತ್ರಗಳಲ್ಲಿ ಬಿಡಿಸುತ್ತೇವೆ. ಈ ಮೂಲಕ ತಮ್ಮ ಏರಿಯಾದಲ್ಲಿ ವಿಭಿನ್ನವಾಗಿ ಗಣೇಶ ಹಬ್ಬವನ್ನು ಆಚರಿಸೋದಕ್ಕೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದು ಸಹೋದರಿಯರು ಹೇಳಿದ್ದಾರೆ.
ಯುವಕ-ಯುವತಿಯರಲ್ಲಿ ಉತ್ಸಾಹದ ಹಬ್ಬ, ಎಲ್ಲರ ಪ್ರೀತಿಯ ಸಂಭ್ರಮದ ಹಬ್ಬ ಗಣೇಶ ಹಬ್ಬವನ್ನು ಒಬ್ಬೊಬ್ಬರು ಒಂದೊಂದು ರೀತಿ ಆಚರಣೆ ಮಾಡುತ್ತಿದ್ದಾರೆ. ಆದರೆ ಈ ಯುವತಿಯರು ಮಾತ್ರ ತಮ್ಮ ಕಲ್ಪನೆಯಲ್ಲೇ ಗಣೇಶನನ್ನು ಚಿತ್ರಿಸಿ ಅದಕ್ಕೆ ಪೂಜಿಸುವ ವಿಭಿನ್ನ ಅಭಿರುಚಿಯನ್ನು ಹೊಂದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv