ಬಳ್ಳಾರಿ: ದರ್ಶನ್ ಇರುವ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ (Ballari Jail) ಗಣೇಶ ಚತುರ್ಥಿ ಆಚರಿಸಲಾಗುತ್ತಿದೆ. ಆದರೆ ಆರೋಪಿ ದರ್ಶನ್‌ಗೆ (Darshan) ಗಣೇಶನ ದರ್ಶನ ಭಾಗ್ಯ ಇಲ್ಲದಂತಾಗಿದೆ.
ಗಣೇಶ ಮೂರ್ತಿ ಕೂರಿಸಲು ಜೈಲು ಒಳಭಾಗದಲ್ಲಿ ಪೂರ್ತಿ ಅಲಂಕಾರ ಮಾಡಲಾಗಿದೆ. ಬಾಳೆ ಕಂಬ, ಬಲೂನ್, ಲೈಟಿಂಗ್, ಹಣ್ಣು, ಚಿತ್ತಾರದ ಹಾಳೆ ಅಲಂಕಾರದ ಮಧ್ಯೆ ಗಣೇಶನನ್ನು ಕೂರಿಸಲಾಗಿದೆ. ಗಣೇಶ ಚತುರ್ಥಿ (Ganesh Chaturthi) ಹಿನ್ನೆಲೆ ಕೈದಿಗಳಿಗಾಗಿ ಸಿಹಿ ತಿಂಡಿಗಳು ಸಿದ್ಧವಾಗಿವೆ. ಮೋದಕ, ಬೆಲ್ಲದ ಕಡುಬು, ರವೆ ಪಾಯಿಸ ಸಿಹಿ. ಒಂಬತ್ತು ಗಂಟೆಗೆ ಗಣೇಶ ಪೂಜೆ ನಡೆದಿದೆ. ಇದನ್ನೂ ಓದಿ: ಕೊಲೆ ಪ್ರಕರಣದ ಆರೋಪಿ ದರ್ಶನ್‌ಗೆ ಕೊನೆಗೂ ಸಿಕ್ತು ಟಿವಿ ಭಾಗ್ಯ
Advertisement
Advertisement
ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಆರೋಪಿ ನಟ ದರ್ಶನ್ ಇರುವ ಕಾರಣದಿಂದ ಹಬ್ಬವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಕೇವಲ ಜೈಲು ಸಿಬ್ಬಂದಿ ಮಾತ್ರ ಗಣೇಶ ಮಂಟಪ ಅಲಂಕಾರ ಮಾಡಿದ್ದಾರೆ. ಗಣೇಶ ಕೂರಿಸುವುದು ಜೈಲು ಸಿಬ್ಬಂದಿ ಮಾತ್ರ. ಆದರೆ, ಪ್ರತಿ ವರ್ಷ ಎಲ್ಲಾ ಕೈದಿಗಳು ಸೇರಿ ಅದ್ದೂರಿಯಾಗಿ ಅಲಂಕಾರ ಮಾಡಿ ಹಬ್ಬ ಮಾಡುತ್ತಿದ್ದರು. ಈ ವರ್ಷ ದರ್ಶನ್ ಜೈಲಿನಲ್ಲಿರುವ ಹಿನ್ನೆಲೆ ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಗಣೇಶನ ದರ್ಶನ, ಕೈ ಮುಗಿದು ಪ್ರಾರ್ಥನೆ ಮಾಡಲು ಮಾತ್ರ ಅವಕಾಶ ನೀಡಲಾಗಿದೆ. ಜೈಲಿನಲ್ಲಿ ಯಾವುದೇ ಸಾಂಸ್ಕೃತಿಕ ಚಟುವಟಿಕೆಗೆ ಅವಕಾಶ ನೀಡಿಲ್ಲ.
Advertisement
Advertisement
ಜೈಲಿನಲ್ಲಿ 3 ಅಡಿ ಎತ್ತರದ ಗಣೇಶನ ಮೂರ್ತಿ ಕೂರಿಸಲಾಗಿದೆ. ಇಲಿಯ ಮೇಲೆ ಕುಳಿತಿರುವ ವಿಘ್ನೇಶ್ವರನ ಮಣ್ಣಿನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಬಳಿಕ ವಿಶೇಷ ಪೂಜೆ ಸಲ್ಲಿಸಲಾಯಿತು. ಗಣೇಶನ ದರ್ಶನಕ್ಕೆ ನಟ ದರ್ಶನ್‌ಗೆ ಅವಕಾಶ ಕೊಟ್ಟಿಲ್ಲ ಎನ್ನಲಾಗುತ್ತಿದೆ. ಹೈ ಸೆಕ್ಯುರಿಟಿ ಸೆಲ್‌ನಲ್ಲಿ ಆರೋಪಿ ದರ್ಶನ್ ಸೇರಿದಂತೆ ಇತರೆ ಮೂರು ಕೈದಿಗಳಿದ್ದಾರೆ. ಹೈ ಸೆಕ್ಯೂರಿಟಿ ಸೆಲ್‌ನಲ್ಲಿರುವ ಯಾವೊಬ್ಬ ಕೈದಿಗೂ ಗಣೇಶ ಪೂಜೆಗೆ ಅವಕಾಶ ಇಲ್ಲ ಎನ್ನಲಾಗಿದೆ. ಇದನ್ನೂ ಓದಿ: ಕೊಲೆಗೂ ಮುನ್ನ ರೇಣುಕಾಸ್ವಾಮಿಯನ್ನು ದರೋಡೆ ಮಾಡಿತ್ತು ‘ಡಿ’ಗ್ಯಾಂಗ್!