ಬೆಂಗಳೂರು: ಅಯೋಧ್ಯೆಯಲ್ಲಿ (Ayodhya Ram Mandir) ರಾಮಲಲ್ಲಾನ ಕೆತ್ತಿದ ಗಣೇಶ್ ಭಟ್‍ರಿಗೆ (Ganesh Bhat) ಈಗ ಬೇರೆ ಬೇರೆ ರಾಜ್ಯಗಳಿಂದ ಕರೆ ಬರುತ್ತಿದೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಅಸ್ಸಾಂ, ಛತ್ತೀಸ್‍ಗಢ್ ಹಾಗೂ ಜಮ್ಮುಕಾಶ್ಮೀರ ಸೇರಿದಂತೆ ಅನೇಕ ರಾಜ್ಯಗಳಿಂದ ಅಯೋಧ್ಯೆಯಲ್ಲಿ ಕೆತ್ತಿದ ರಾಮಲಲ್ಲಾನ ಪ್ರತಿಮೆ ಕೊಡುವಂತೆ ಕರೆಗಳು ಬರುತ್ತಿದೆ. ಕೆಲವರು ಅದೇ ವಿಗ್ರಹ ನೀಡುವಂತೆ ಕೇಳುತ್ತಿದ್ದಾರೆ, ಇನ್ನೂ ಕೆಲವರು ಹೊಸ ವಿಗ್ರಹ ಕೆತ್ತನೆಗೆ ಹೇಳಿದ್ದಾರೆ ಎಂದರು. ಇದನ್ನೂ ಓದಿ: Loksabha Elections: ಬಿಜೆಪಿ ರಾಜ್ಯವಾರು ಚುನಾವಣಾ ಉಸ್ತುವಾರಿಗಳ ಪಟ್ಟಿ ಪ್ರಕಟ
ಅಯೋಧ್ಯೆಯಲ್ಲಿ ನಾನು ಕೆತ್ತಿದ ವಿಗ್ರಹ ಅದು ಅಯೋಧ್ಯೆಯ (Ayodhya) ಟ್ರಸ್ಟ್ ಸ್ವತ್ತಾಗಿದೆ. ಅವರು ರಾಮಮಂದಿರದಲ್ಲಿಯೇ ಇಡೋದಾಗಿ ಹೇಳಿದ್ದಾರೆ. ನಾನು ಕೆತ್ತಿದ ವಿಗ್ರಹವನ್ನು ಆಲಯ ಗರ್ಭಗುಡಿಯೊಳಗೆ ಇಟ್ಟರೆ ಸೂಕ್ತ ಅನ್ನೋದು ನನ್ನ ಅಭಿಪ್ರಾಯವಾಗಿದೆ. ಹೀಗಾಗಿ ಅದನ್ನು ಕರುನಾಡಿನ ಪ್ರಸಿದ್ಧ ಸ್ಥಳದಲ್ಲಿ ಪ್ರತಿಷ್ಟಾಪಿಸಿದ್ರೂ ನನಗೆ ಬಹಳ ಸಂತಸ. ಯಾಕೆಂದರೆ ಕಂಕಣ ಕಟ್ಟಿ ಸಾಕಷ್ಟು ವಿಧಿ-ವಿಧಾನ ಪೂಜೆ ಮಾಡಿ ಶಾಸ್ತ್ರೋಕ್ತವಾಗಿ ಕೆತ್ತಿರೋದು ಮ್ಯೂಸಿಯಂ ಅಥವಾ ಸರ್ಕಲ್ ನಲ್ಲಿ ಇಡೋದು ಸೂಕ್ತವು ಅಲ್ಲ. ತೀರ್ಥ ಭೂಮಿ ಟ್ರಸ್ಟ್ ನವರ ನಿರ್ಧಾರ ಏನು ಅನ್ನೋದರ ಬಗ್ಗೆ ನಾನು ಕಾಯುತ್ತಿದ್ದೇನೆ ಎಂದು ಹೇಳಿದರು.
ಈಗಾಗಲೇ ಕರ್ನಾಟಕದಲ್ಲಿಯೂ ಈ ವಿಗ್ರಹವನ್ನು ಟ್ರಸ್ಟ್ ನವರು ನೀಡಲು ಒಪ್ಪಿದ್ರೆ ರಾಮದೇವರ ಬೆಟ್ಟ ಅಥವಾ ಕಲ್ಲು ಸಿಕ್ಕ ಜಮೀನಿನಲ್ಲಿ ಪ್ರತಿಷ್ಠಾಪನೆಯ ಬಗ್ಗೆಯೂ ಜನಪ್ರತಿನಿಧಿನಿಧಿಗಳಿಗೆ ಆಸಕ್ತಿ ಇದೆ ಎಂದರು. ಇದನ್ನೂ ಓದಿ: 7 ಶಾಸಕರನ್ನ ಖರೀದಿಸಲು ಬಿಜೆಪಿಯಿಂದ ತಲಾ 25 ಕೋಟಿ ರೂ. ಆಫರ್ – ಕೇಜ್ರಿವಾಲ್ ಹೊಸ ಬಾಂಬ್