ಬೆಂಗಳೂರು: ಇಂಜಿನಿಯರ್ಸ್ ಸಿನಿಮಾ ಮೂಲಕ ನಾಯಕ ನಟ ಹಾಗೂ ನಿರ್ದೇಶಕನಾಗಿ ಸ್ಯಾಂಡಲ್‍ವುಡ್‍ನಲ್ಲಿ ಗುರುತಿಸಿಕೊಂಡಿದ್ದ ಪ್ರತಿಭೆ ವಿನಯ್ ರತ್ನಸಿದ್ದಿ. ಒಂದಷ್ಟು ವರ್ಷ ಗ್ಯಾಪ್ ತೆಗೆದುಕೊಂಡು ಹೊಸ ಭರವಸೆಯೊಂದಿಗೆ ಹೊಸ ಸ್ಕ್ರಿಪ್ಟ್ ನೊಂದಿಗೆ ಬಂದಿದ್ದಾರೆ.
Advertisement
ಗಂಡುಲಿ ಎಂಬ ಸಿನಿಮಾ ಮೂಲಕ ನಟನಾಗಿ ನಿರ್ದೇಶಕನಾಗಿ ತಮ್ಮ ಪ್ರತಿಭೆಯನ್ನು ಮತ್ತೊಮ್ಮೆ ಸಾಭೀತು ಪಡಿಸಲು ವಿನಯ್ ರತ್ನಸಿದ್ದಿ ಸಜ್ಜಾಗಿದ್ದಾರೆ. ಚಿತ್ರದ ಆಡಿಯೋ ಬಿಡುಗಡೆಯಾಗಿದ್ದು ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಚಿತ್ರದ ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಟಾಪ್ ದುಬಾರಿ ಬಜೆಟ್ ಸಿನಿಮಾಗಳಿಗೆ ಕೋವಿಡ್ ಶಾಕ್ – ರಿಲೀಸ್ ಡೇಟ್ ಮುಂದಕ್ಕೆ
Advertisement
ಗಂಡುಲಿ ಹಳ್ಳಿಯೊಂದರಲ್ಲಿ ನಡೆಯುವ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವನ್ನೊಳಗೊಂಡ ಸಿನಿಮಾ. ದೇವಸ್ಥಾನದ ಕುರಿತು ಸರ್ವೆಗೆಂದು ಬರುವ ಪುರಾತತ್ವ ಇಲಾಖೆಯ ಅಧಿಕಾರಿಗಳು ನಿಗೂಢವಾಗಿ ಕೊಲೆಯಾಗುತ್ತಾರೆ, ಈ ಕೊಲೆಗೆ ಕಾರಣವೇನು ಅದರ ಹಿಂದಿರುವ ರಸಹಸ್ಯವೇನು ಎನ್ನುವುದೇ ಸಿನಿಮಾದ ಒನ್ ಲೈನ್ ಕಹಾನಿ. ಇದನ್ನು ಅಷ್ಟೇ ರೋಚಕವಾಗಿ ಕಥೆ ಬರೆದು ತೆರೆ ಮೇಲೆ ಕಟ್ಟಿಕೊಟ್ಟಿದ್ದಾರೆ ನಟ, ಕಂ ನಿರ್ದೇಶಕ ವಿನಯ್ ರತ್ನಸಿದ್ದಿ. ಸಸ್ಸನ್ಸ್ ಥ್ರಿಲ್ಲರ್ ಜೊತೆಗೆ ತಾಯಿ ಮಗನ ಸೆಂಟಿಮೆಂಟ್ ಎಳೆ, ಒಂದೊಳ್ಳೆ ಲವ್ ಕಹಾನಿ ಒಳಗೊಂಡಂತೆ ಮಾಸ್, ಕ್ಲಾಸ್, ಸೆಂಟಿಮೆಂಟ್, ಆಕ್ಷನ್ ಎಲ್ಲಾ ಎಲಿಮೆಂಟ್ ಸಿನಿಮಾದಲ್ಲಿದೆ ಎನ್ನುತ್ತದೆ ಗಂಡುಲಿ ಚಿತ್ರತಂಡ. ಸದ್ಯ ಸಿನಿಮಾದ ಎಲ್ಲಾ ಕೆಲಸ ಕಾರ್ಯಗಳನ್ನು ಮುಗಿಸಿ ಪ್ರಚಾರ ಕಾರ್ಯದಲ್ಲಿ ನಿರತವಾಗಿರುವ ಚಿತ್ರತಂಡ ಆಡಿಯೋ ಹಾಗೂ ಟ್ರೇಲರ್ ಬಿಡುಗಡೆ ಮಾಡಿ ಗಮನ ಸೆಳೆಯುತ್ತಿದೆ.
Advertisement
Advertisement
ಚಿತ್ರದಲ್ಲಿ ನಾಯಕಿಯಾಗಿ ಛಾಯಾ ತೆರೆಹಂಚಿಕೊಂಡಿದ್ದು, ಸುಧಾ ನರಸಿಂಹರಾಜು ನಾಯಕನ ತಾಯಿ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಧಮೇರ್ಂದ್ರ ಅರಸ್, ಸುಬ್ಬೇಗೌಡ್ರು, ರಾಮಣ್ಣ, ರಂಜಿತ್, ಪುನೀತ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಒಂದಕ್ಕಿಂತ ಒಂದು ವಿಭಿನ್ನವಾದ ಮೂರು ಹಾಡುಗಳಿದ್ದು, ಅಜಯ್ ಮತ್ತು ರವಿದೇವ್ ಸಂಗೀತ ನಿರ್ದೇಶನ, ರಾಜು ಶಿವಶಂಕರ್ ಮತ್ತು ಶ್ಯಾಮ್ ಛಾಯಾಗ್ರಹಣ, ಸತೀಶ್ ಚಂದ್ರಯ್ಯ ಸಂಕಲನ, ಸುರೇಶ್ ಸಾಹಸ ನಿರ್ದೇಶನವಿದೆ. ಇದನ್ನೂ ಓದಿ: ಆಡಿಯೋ ಮತ್ತು ಟ್ರೇಲರ್‌ನೊಂದಿಗೆ ಪ್ರೇಕ್ಷಕರೆದುರು ಬಂದ ‘ಗರುಡಾಕ್ಷ’ ಚಿತ್ರತಂಡ
ವಿ. ಆರ್ ಫಿಲ್ಮಂಸ್ ಬ್ಯಾನರ್‍ನಡಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಅಮರೇಂದ್ರ, ಪುನೀತ್, ಲೋಕೇಶ್ ರಾಜಣ್ಣ ಹಾಗೂ ಚಂದನ ಸೇರಿ ನಾಲ್ಕು ಜನ ನಿರ್ಮಾಪಕರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಟ್ರೇಲರ್ ಹಾಗೂ ಚಿತ್ರದ ಆಡಿಯೋಗೆ ಪಾಸಿಟಿವ್ ರೆಸ್ಪಾನ್ಸ್ ಸಿಗುತ್ತಿದ್ದು ಸಂಕ್ರಾತಿ ಹಬ್ಬಕ್ಕೆ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.