ನವದೆಹಲಿ: ಮಹಾತ್ಮ ಗಾಂಧೀಜಿ ಅವರ ಪುಣ್ಯತಿಥಿಯಂದು ಎಲ್ಲೆಡೆ ಅವರನ್ನು ಸ್ಮರಿಸಲಾಗುತ್ತಿದೆ. ಗಾಂಧೀಜಿಯನ್ನು ಸ್ಮರಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಒಬ್ಬ ಹಿಂದುತ್ವವಾದಿ ಗಾಂಧೀಜಿಗೆ ಗುಂಡು ಹಾರಿಸಿದ ಎಂದು ಹೇಳಿದ್ದಾರೆ.
Advertisement
ಒಬ್ಬ ಹಿಂದುತ್ವವಾದಿ ಗಾಂಧೀಜಿಗೆ ಗುಂಡು ಹಾರಿಸಿದ. ಗಾಂಧೀಜಿ ಇನ್ನಿಲ್ಲ ಎಂದು ಹಿಂದುತ್ವವಾದಿಗಳೆಲ್ಲ ಭಾವಿಸಿದ್ದಾರೆ. ಎಲ್ಲಿ ಸತ್ಯವಿದೆಯೋ ಅಲ್ಲಿ ಬಾಪು ಇನ್ನೂ ಜೀವಂತ ಎಂದು ಸ್ಮರಿಸಿ ಹಿಂದಿಯಲ್ಲಿ ಟ್ವೀಟ್ ಮಾಡಿ ರಾಹುಲ್ ಗಾಂಧಿ ಸ್ಮರಿಸಿದ್ದಾರೆ. ಇದನ್ನೂ ಓದಿ: ಗಾಂಧಿ ಕೊಂದ ಶಕ್ತಿಗಳೇ ಇಂದು ಧರ್ಮದ ಹೆಸರಲ್ಲಿ ಹತ್ಯೆ ಮಾಡುತ್ತಿದೆ: ಪಿಣರಾಯಿ ವಿಜಯನ್
Advertisement
एक हिंदुत्ववादी ने गाँधी जी को गोली मारी थी।
सब हिंदुत्ववादियों को लगता है कि गाँधी जी नहीं रहे।
जहाँ सत्य है, वहाँ आज भी बापू ज़िंदा हैं!#GandhiForever pic.twitter.com/nROySYZ6jU
— Rahul Gandhi (@RahulGandhi) January 30, 2022
Advertisement
ನಾನು ಹತಾಶೆಗೊಂಡಾಗ, ಇತಿಹಾಸದುದ್ದಕ್ಕೂ ಸತ್ಯ ಮತ್ತು ಪ್ರೀತಿಯ ಮಾರ್ಗ ಯಾವಾಗಲೂ ಗೆದ್ದಿದೆ ಎಂದು ನೆನಪಿಸಿಕೊಳ್ಳುತ್ತೇನೆ. ನಿರಂಕುಶಾಧಿಕಾರಿಗಳು ಮತ್ತು ಕೊಲೆಗಾರರೂ ಇಲ್ಲಿದ್ದಾರೆ. ಕೆಲ ಕಾಲವಷ್ಟೇ ಅವರು ಅಜೇಯರಾಗಿ ಕಾಣಬಹುದು. ಆದರೆ ಕೊನೆಯಲ್ಲಿ ಅವರಿಗೆ ಬೀಳಲೇಬೇಕು. ಇದನ್ನು ಯೋಚಿಸಿ ಎಂದು ಟ್ವೀಟ್ ಮಾಡಿದ್ದಾರೆ.
Advertisement
“When I despair, I remember that all through history the way of truth and love have always won. There have been tyrants and murderers, and for a time they can seem invincible but in the end, they always fall. Think of it always.”
– Mahatma Gandhi pic.twitter.com/3EOG59IljW
— Rahul Gandhi (@RahulGandhi) January 30, 2022
ಜ.30ರಂದು ಮಹಾತ್ಮ ಗಾಂಧೀಜಿಯವರ ಪುಣ್ಯತಿಥಿ. ಇಂದು ಬೆಳಿಗ್ಗೆ ಗಾಂಧೀಜಿಯವರ ಸಮಾಧಿ ಸ್ಥಳಕ್ಕೆ ತೆರಳಿ ರಾಹುಲ್ ಗಾಂಧಿ ನಮನ ಸಲ್ಲಿಸಿದ್ದಾರೆ. ಇದನ್ನೂ ಓದಿ: ಬಾಪು ಆದರ್ಶಗಳನ್ನು ಮತ್ತಷ್ಟು ಜನಪ್ರಿಯಗೊಳಿಸುತ್ತೇವೆ: ಮೋದಿ