ನವದೆಹಲಿ: ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಹಲವು ನಾಯಕರು ಅನಿವಾಸಿ ಭಾರತೀಯ (ಎನ್‍ಆರ್‍ಐ) ಮೂಲದವರು. ಅಲ್ಲದೇ ನಮ್ಮ ಪಕ್ಷವು ಸ್ಥಾಪನೆಯಾಗಿದ್ದು ಎನ್‍ಆರ್‍ಐ ವ್ಯಕ್ತಿಯಿಂದ ಎಂದು ಕಾಂಗ್ರೆಸ್ ಉಪಧ್ಯಾಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಭಾರತದ ನೈಜ ಸ್ವಾತಂತ್ರ್ಯ ಹೋರಾಟ ನಡೆದದ್ದು ಎನ್‍ಆರ್‍ಐಗಳಿಂದ. ಮಹಾತ್ಮ ಗಾಂಧಿ, ಜವಾಹರ್ ಲಾಲ್ ನೆಹರು, ಅಂಬೇಡ್ಕರ್, ಅಜಾದ್, ಪಾಟೀಲ್‍ರಂತಹ ಎಲ್ಲಾ ಹೋರಾಟಗಾರರು ಬ್ರಿಟನ್ ನಿಂದ ಹಿಂದಿರುಗಿ ಭಾರತಕ್ಕೆ ಆಗಮಿಸಿದವರು ಎಂದು ಹೇಳಿದರು.
Advertisement
ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಸಭೆಯನ್ನು ಉದ್ದೇಶಿಸಿ ರಾಹುಲ್ ಮಾತಾನಾಡಿದರು. ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಸುಮಾರು ಎರಡು ಸಾವಿರಕ್ಕೂ ಅಧಿಕ ಎನ್‍ಆರ್‍ಐಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.
Advertisement
Advertisement
ಭಾರತದಿಂದ ವಿದೇಶಕ್ಕೆ ತೆರಳಿದ ಪ್ರತಿಯೊಬ್ಬ ವ್ಯಕ್ತಿಯು ವಿದೇಶದಲ್ಲಿನ ವ್ಯವಸ್ಥೆಗಳ ಕಂಡು ತಮ್ಮ ಹೊಸ ಚಿಂತನೆಗಳೊಂದಿಗೆ ಭಾರತಕ್ಕೆ ಹಿಂದಿರುಗುತ್ತಾರೆ. ಇಂತಹ ಎನ್‍ಆರ್‍ಐಗಳನ್ನು ಗುರುತಿಸುವ ಕಾರ್ಯ ನಡೆಯಬೇಕಿದೆ. ಭಾರತದಲ್ಲಿ ಕ್ಷೀರ ಕ್ರಾಂತಿಗೆ ಕಾರಣರಾದ ವರ್ಗೀಸ್ ಕುರಿಯನ್‍ರಂತವರು ಈ ಸಾಲಿನಲ್ಲಿದ್ದಾರೆ. ಕುರಿಯನ್ ಅಮೆರಿಕದಿಂದ ಹಿಂದಿರುಗಿದ ನಂತರ ಮಾಡಿದ ಕ್ರಾಂತಿಯಿಂದ ಪ್ರತಿ ಭಾರತೀಯನಿಗೂ ಇಂದು ಹಾಲು ದೊರೆಯುವಂತಾಗಿದೆ. ಇಂತಹ ಸಾವಿರಾರು ಉದಾಹರಣೆಗಳನ್ನು ನಾವು ಕಾಣಬಹುದಾಗಿದೆ. ವಿದೇಶದಲ್ಲಿ ನೆಲೆಸಿದ್ದಾರೆ ಎಂಬ ಕಾರಣದಿಂದ ಎನ್‍ಆರ್‍ಐಗಳು ದೇಶದ ಅಭಿವೃದ್ಧಿಗೆ ಯಾವುದೇ ಕೊಡುಗೆಯನ್ನು ನೀಡುತ್ತಿಲ್ಲ ಎನ್ನುವುದು ತಪ್ಪು. ನಾವು ಅವರನ್ನು ಮತ್ತೆ ಭಾರತಕ್ಕೆ ವಾಪಸ್ ಕರೆತರಬೇಕಿದೆ ಎಂದರು.
Advertisement
ಅಮೆರಿಕದ ಯಾವುದೇ ಕಂಪನಿಯನ್ನು ತೆಗೆದುಕೊಂಡರು ಅಲ್ಲಿ ಒಬ್ಬ ಭಾರತೀಯ ಕಾರ್ಯನಿರ್ವಹಿಸುತ್ತಿದ್ದಾನೆ. ಹಾಗೆಯೇ ಭಾರತದ ಅಭಿವೃದ್ಧಿಯಲ್ಲಿ ಭಾಗಿಯಾಗುತ್ತಿದ್ದಾನೆ. ಎನ್‍ಆರ್‍ಐಗಳು ದೇಶದ ಬೆನ್ನೆಲುಬು ಇದ್ದಂತೆ. ಕೆಲವರು ಭಾರತವನ್ನು ಭೌಗೋಳಿಕ ಅಂಶಗಳ ಮೂಲಕ ಮಾತ್ರ ನೋಡುತ್ತಾರೆ, ಆದರೆ ನಾನು ಹೊಸ ಕಲ್ಪನೆಗಳ ಆಗರವಾಗಿ ನೋಡುತ್ತೇನೆ ಎಂದು ವಿವರಿಸಿದರು.
ಭಾರತದಲ್ಲಿ ಹೆಚ್ಚಾಗುತ್ತಿರುವ ಮತೀಯ ಸಮಸ್ಯೆಗಳು ಹಾಗೂ ಕೋಮುಭಾವನೆಗಳ ಹಿನ್ನಲೆಯಲ್ಲಿ ದೇಶವನ್ನು ವಿಭಜಿಸುತ್ತಿರುವುದರ ಕುರಿತು ಎನ್‍ಆರ್‍ಐಗಳ ಸಭೆಯಲ್ಲಿ ಪ್ರಸ್ತಾಪಿಸಿದರು.
ರಾಹುಲ್ ತಮ್ಮ ಅಮೆರಿಕ ಪ್ರವಾಸದ ಅವಧಿಯಲ್ಲಿ ವಿದ್ಯಾರ್ಥಿಗಳು, ಹಲವು ಉದ್ಯಮಿಗಳು, ರಾಜಕೀಯ ನಾಯಕರು ಸೇರಿದಂತೆ ಜೀವನದ ಎಲ್ಲಾ ಹಂತದ ಜನರ ನಡುವೆ ಸಂವಹನವನ್ನು ನಡೆಸಿದರು. ಈ ಭೇಟಿಯ ವೇಳೆ ದೇಶದಲ್ಲಿ ಉಂಟಾಗುತ್ತಿರುವ ಹಿಂಸಾಚಾರ, ಕೋಮು ಘರ್ಷಣೆಗಳ ಕುರಿತು ನನ್ನೊಂದಿಗೆ ಅತಂಕವನ್ನು ವ್ಯಕ್ತಪಡಿಸಿದರು. ಅದರಲ್ಲಿಯು ದೇಶದಲ್ಲಿ ಸಹಿಷ್ಣುತೆ, ಸಾಮರಸ್ಯ ಕೊರತೆ ಉಂಟಾಗುವಂತೆ ಮಾಡುತ್ತಿರುವ ರಾಜಕೀಯ ನಾಯಕರ ಕುರಿತಾಗಿ ಹೆಚ್ಚು ಪ್ರಶ್ನಿಸಿದ್ದಾರೆ ಎಂದು ರಾಹುಲ್ ಹೇಳಿದರು.
ದೇಶದಲ್ಲಿ ಅಧಿಕಾರದಲ್ಲಿರುವ ಪಕ್ಷವು ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ವಿಫಲವಾಗಿದೆ. ಪ್ರಸ್ತುತ ದೇಶದಲ್ಲಿ 30 ಸಾವಿರ ಯುವಕರು ಉದ್ಯೋಗಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದರೆ, ಕೇವಲ 450 ಯುವಕರು ಮಾತ್ರ ಉದ್ಯೋಗವನ್ನು ಪಡೆಯುತ್ತಿದ್ದಾರೆ. ಇಂತಹ ಕೆಟ್ಟ ಪರಿಸ್ಥಿತಿ ಭಾರತದಲ್ಲಿ ಈಗ ನಿರ್ಮಾಣವಾಗಿದೆ. ಯುವ ಜನಾಂಗಕ್ಕೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಲು ಸಾಧ್ಯವಾಗದಿದ್ದಾರೆ ಭಾರತದ ಭವಿಷ್ಯವನ್ನು ಬದಲಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
I had many conversations during my trip. Most people were worried about what has happened to the tolerance that used to prevail in India pic.twitter.com/tB8RfHte8t
— Rahul Gandhi (@RahulGandhi) September 21, 2017