– ಸಂವಿಧಾನ ರಕ್ಷಣೆ ಮಾಡುವ ಬದ್ಧತೆ ಕಾಂಗ್ರೆಸ್ ಗೆ ಮಾತ್ರ ಇದೆ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರನ್ನು ಉಳಿಯಲು ಬಿಟ್ಟರೆ ಜನ ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಹಾತ್ಮಾ ಗಾಂಧೀಜಿ ಹಾಗೂ ಲಾಕ್ ಬಹದ್ದೂರ್ ಶಾಸ್ತ್ರಿ ದಿನಾಚಣೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಬರೀ ಸುಳ್ಳು ಹೇಳುತ್ತಾರೆ. ಅವರು ಏನು ಹೇಳಿದರೂ ನಾವು ಉಲ್ಟಾ ಅರ್ಥ ಮಾಡಿಕೊಳ್ಳಬೇಕು. ಅದಾನಿ, ಅಂಬಾನಿ ಆಸ್ತಿ ದುಪ್ಪಟ್ಟು ಆಗಿದೆ. ಗಾಂಧಿ ಕೊಂದವನನ್ನು ದೇಶಭಕ್ತರು ಎಂದು ಕರೆಯುತ್ತಾರೆ. ಇವರಿಗೆ ನಾಚಿಕೆ ಆಗಬೇಕು. ಇವರು ಎಮರ್ಜೆನ್ಸಿ ಘೋಷಣೆ ಮಾಡಿಲ್ಲ ಅಷ್ಟೇ ಆದರೆ ಅದು ಜಾರಿಯಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Advertisement
Advertisement
ದೇಶದಲ್ಲಿ ಪ್ರಜಾಪ್ರಭುತ್ವ ನಾಶ ಆಗುತ್ತಿದೆ. ಸಂವಿಧಾನಕ್ಕೆ ಗೌರವ ಇಲ್ಲದಂತೆ ಆಗಿದೆ. ಹತ್ತು ತಿಂಗಳಿಂದ ರೈತರು ಹೋರಾಟ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ದೇಶದಲ್ಲಿ ಏನೂ ಆಗಿಲ್ಲ ಅನ್ನೋ ರೀತಿ ನಡೆದುಕೊಳ್ಳುತ್ತಿದ್ದಾರೆ. ಸಿಎಂ ರೈತರ ಹೋರಾಟವನ್ನು ಕಾಂಗ್ರೆಸ್ ಪ್ರೇರಿತ ಪ್ರತಿಭಟನೆ ಎಂದು ಕರೆದಿದ್ದಾರೆ. ಪ್ರಧಾನಿ ಮೋದಿಯವರನ್ನು ಉಳಿಯಲು ಬಿಟ್ಟರೆ ಜನ ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ರೈತರಿಗೆ ದಾಖಲೆ ನೀಡಲು ಸತಾಯಿಸುತ್ತಿದ್ದ ಅಧಿಕಾರಿಗಳಿಗೆ ತರಾಟೆ- ಸೂ….ಮಕ್ಕಳು ಎಂದ ರಮೇಶ್ ಕುಮಾರ್
Advertisement
ಸಂವಿಧಾನ ಉಳಿಸುತ್ತೇವೆ, ಇಂತಹ ಸರ್ಕಾರ ಕಿತ್ತು ಹಾಕುತ್ತೇವೆಂದು ನಾವು ಇಂದು ಪ್ರತಿಜ್ಞೆ ಮಾಡಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಸಿದ್ದರಾಮಯ್ಯ ಕರೆ ನೀಡಿದರು. ನಮ್ಮದು ಶ್ರೇಷ್ಠ ಸಂವಿಧಾನ ಎಂದು ಅಂಬೇಡ್ಕರ್ ಹೇಳಿದ್ದರು. ಆದರೆ ಶ್ರೇಷ್ಠತೆ ಅಳ್ವಿಕೆ ಮಾಡುವವರ ಕೈಯಲ್ಲಿ ಇರುತ್ತೆ. ಈಗ ಕೆಟ್ಟವರ ಕೈಯ್ಯಲ್ಲಿ ಸಂವಿಧಾನ ಸಿಕ್ಕಿದೆ. ಇದನ್ನು ರಕ್ಷಣೆ ಮಾಡುವ ಜವಾಬ್ದಾರಿ ಕಾಂಗ್ರೆಸ್ ನಾಯಕರ ಮೇಲಿದೆ. ಕಾಂಗ್ರೆಸ್ ಗೆ ಮಾತ್ರ ಈ ಬದ್ಧತೆ ಇರುವುದು ಎಂದು ಹೇಳಿದರು.
Advertisement
ಗಾಂಧೀಜಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಇಳಿಯುವ ಮೊದಲು ಭಾರತವನ್ನು ಸುತ್ತಿದ್ದರು. ಜನರ ಸಾಮಾಜಿಕ ಮತ್ತು ಆರ್ಥಿಕ ಜೀವನ ಬಗ್ಗೆ ತಿಳಿಯಲು ದೇಶ ಸುತ್ತಿದ್ದರು. ನನ್ನ ಜನ ಬಡತನದಲ್ಲಿ ಇದ್ದಾರೆ ಹೀಗಾಗಿ ಅವರಿಗೆ ಊಟ ಬಟ್ಟೆ ಸಿಗುವವರೆಗೂ ನಾನು ಅರೆಬಟ್ಟೆ ಧರಿಸುತ್ತೇನೆಂದು ತೀರ್ಮಾನ ಮಾಡಿದ್ದರು. ನುಡಿದಂತೆ ನಡೆದ ಮಹಾನುಭಾವ ಮಹಾತ್ಮ ಗಾಂಧಿಜೀ. ಅವರು ಏನು ಹೇಳಿದರೋ ಅದರಂತೆ ನಡೆದುಕೊಂಡರು. ನೆಲ್ಸನ್ ಮಂಡೇಲಾ, ಮಾರ್ಟಿನ್ ಲೂಥರ್, ಓಬಮಾ ಸಹ ಮಹಾತ್ಮ ಗಾಂಧಿ ತತ್ವಗಳ ಮೇಲೆ ನಡೆದರು. ಮಹಾತ್ಮ ಗಾಂಧಿಜೀ ಕೇವಲ ಭಾರತಕ್ಕೆ ನಾಯಕ ಅಲ್ಲ. ವಿಶ್ವದ ನಾಯಕ ಎಂದರು. ಇದನ್ನೂ ಓದಿ: ಟೀಕೆಗಳು ಆರೋಪಗಳಿಗೆ ಮಾತ್ರ ಸೀಮಿತವಾಗಿವೆ: ಪ್ರಧಾನಿ ಮೋದಿ
ಸಂಪೂರ್ಣವಾಗಿ ಗಾಂಧಿ ಮಾರ್ಗದಲ್ಲಿ ನಡೆಯಲು ಸಾಧ್ಯವಿಲ್ಲ. ಹೀಗೆ ಹೇಳಿದರೆ ಹಿಪೋಕ್ರೆಸಿಗಳು ಆಗುತ್ತೇವೆ. ಕುಡಿಯುವುದು ಬೇಡ ಎಂದು ಗಾಂಧಿಜೀ ಹೇಳಿದ್ದರು. ಬಿಟ್ಟಿದ್ದೇವಾ? ಸತ್ಯ ಒಪ್ಪಿಕೊಳ್ಳಬೇಕು. ಆದಷ್ಟು ಅವರ ಮಾರ್ಗದಲ್ಲಿ ನಡೆಯುವ ಪ್ರಯತ್ನ ಮಾಡೋಣ ಈ ದೇಶ ಉಳಿಸುವ ಕೆಲಸ ಮಾಡೋಣ ಎಂದು ಕರೆ ನಿಡಿದರು.
ಲಾಲ್ ಬಹಾದ್ದೂರ್ ಶಾಸ್ತ್ರಿ ತಮ್ಮ ಮಗನಿಗೆ ಉನ್ನತ ಹುದ್ದೆ ಸಿಕ್ಕಿದ್ದರೆ ರಿಸೈನ್ ಮಾಡು ಎಂದು ಹೇಳಿದರು. ತಂದೆ ಮಗನಿಗೆ ಉನ್ನತ ಹುದ್ದೆ ಕೊಡಿಸಿದ್ದಾರೆ ಎಂದು ಟೀಕಿಸುತ್ತಾರೆ. ಅದು ನಿರಾಧಾರ ರೈಲ್ವೆ ದುರಂತ ಆದಾಗ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿದ್ದರು. ಇದನ್ನು ಈಗ ನಾವು ನೋಡಲು ಸಾಧ್ಯವೇ ಎಂದು ಪ್ರಶ್ನಿಸಿದರು.