ಪುನೀತ್ ಜನ್ಮ ದಿನದಂದು ಓಟಿಟಿಯಲ್ಲಿ ‘ಗಂಧದ ಗುಡಿ’

Public TV
1 Min Read
Gandhada gudi 5

ಪುನೀತ್ ರಾಜ್ ಕುಮಾರ್ (Puneet Rajkumar) ಕನಸಿನ ಪ್ರಾಜೆಕ್ಟ್ ‘ಗಂಧದ ಗುಡಿ’ (Gandhada Gudi) ಡಾಕ್ಯುಮೆಂಟರಿ ಇದೀಗ ಓಟಿಟಿಯಲ್ಲೂ (OTT) ಬರಲು ಸಿದ್ಧತೆ ಮಾಡಿಕೊಂಡಿದೆ. ಇದೇ ಮಾರ್ಚ್ 17ರ ಅಪ್ಪು ಹುಟ್ಟು ಹಬ್ಬದ ದಿನದಂದು ಅಮೆಜಾನ್ ಪ್ರೈಂನಲ್ಲಿ ಗಂಧದ ಗುಡಿ ಸ್ಟ್ರೀಮ್ ಆಗಲಿದೆ. ಈ ಸಿನಿಮಾವನ್ನು ಜಗತ್ತಿಗೆ ತೋರಿಸಬೇಕು ಎನ್ನುವ ಮಾತುಗಳನ್ನು ಈ ಹಿಂದೆ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneet Rajkumar) ಆಡಿದ್ದರು. ಇದೀಗ ಅದನ್ನು ಸಾಧ್ಯವಾಗಿಸುತ್ತಿದ್ದಾರೆ.

gandhada gudi 1 1

ಕಳೆದ ವರ್ಷ ಗಂಧದ ಗುಡಿ ಡಾಕ್ಯುಮೆಂಟರಿ ನೂರಾರು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಅಪ್ಪು ಅಭಿಮಾನಿಗಳು ಸರದಿ ಸಾಲಿನಲ್ಲಿ ನಿಂತು ಕಣ್ತುಂಬಿಕೊಂಡಿದ್ದರು. ಅಲ್ಲಲ್ಲಿ ಈ ಸಿನಿಮಾದ ವಿಶೇಷ ಪ್ರದರ್ಶನಗಳನ್ನೂ ಆಯೋಜನೆ ಮಾಡಲಾಗಿತ್ತು. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ಇತರ ರಾಜ್ಯಗಳಲ್ಲೂ ಈ ಸಿನಿಮಾ ರಿಲೀಸ್ ಆಗಿ ಯಶಸ್ವಿ ಪ್ರದರ್ಶನಗಳನ್ನೂ ಕಂಡಿತ್ತು. ಇದನ್ನೂ ಓದಿ: ಪ್ರಭುತ್ವದ ಮೂಲಕ ಹೊಸ ಕಥೆ ಹೇಳಲಿದ್ದಾರೆ ಚೇತನ್ ಚಂದ್ರ

GANDHADA GUDI 4

ಕೋವಿಡ್ ಸಮಯದಲ್ಲಿ ಕಾಡು ಮೇಡು ಸುತ್ತುವ ಆಸೆಯನ್ನು ಹೊತ್ತುಕೊಂಡು ಅಪ್ಪು ಕಾಡಿಗೆ ನುಗ್ಗಿದ್ದರು. ಸಣ್ಣ ತಂಡದೊಂದಿಗೆ ನಾಡಿನ ವನ್ಯ ಸಂಪತ್ತನ್ನು ಪರಿಚಯಿಸಿದ್ದರು. ಕರ್ನಾಟಕದ ಕೆಲ ಪ್ರಸಿದ್ಧ ತಾಣಗಳಿಗೂ ಭೇಟಿ ಮಾಡಿ, ಅದರ ಅಂದವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದರು. ಅದಕ್ಕೆ ಗಂಧದ ಗುಡಿ ಎಂದು ಹೆಸರಿಟ್ಟು ಜನರಿಗೆ ತೋರಿಸುವ ಉತ್ಸಾಹದಲ್ಲಿ ಇರುವಾಗಲೇ ನಿಧನರಾದರು. ಅವರ ಕನಸನ್ನು ಅಪ್ಪು ಪತ್ನಿ ಅಶ್ವಿನಿ ಅವರು ನೆರವೇರಿಸಿದರು.

Share This Article