ಪುನೀತ್ ರಾಜ್ ಕುಮಾರ್ (Puneeth Rajkumar) ಕನಸಿನ ಗಂಧದ ಗುಡಿ (Gandhad Gudi) ಪ್ರಿ ರಿಲೀಸ್ ಇವೆಂಟ್ ಗೆ ಬೆಂಗಳೂರಿನ ಅರಮನೆ ಮೈದಾನ ಸಿಂಗಾರಗೊಳ್ಳುತ್ತಿದೆ. ಇದೊಂದು ಅಪ್ಪು ಹಬ್ಬ ಎಂದೇ ಭಾವಿಸಲಾಗಿದ್ದು, ದಕ್ಷಿಣ ಸಿನಿಮಾ ರಂಗದ ಅನೇಕ ಕಲಾವಿದರು ಇದರಲ್ಲಿ ಭಾಗಿಯಾಗಲಿದ್ದಾರೆ. ಅಭಿಮಾನಿಗಳಿಗೂ ಕೂಡ ಉಚಿತವಾಗಿ ಪ್ರವೇಶ ಕಲ್ಪಿಸಿದ್ದು, ನಾನಾ ರೀತಿಯ ಮನರಂಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್ (Raghavendra Rajkumar), ‘ಅಪ್ಪು ಇದ್ದರೆ ಎಷ್ಟು ಅದ್ಧೂರಿಯಾಗಿ ಈ ಕಾರ್ಯಕ್ರಮವನ್ನು ಮಾಡುತ್ತಿದ್ದರೋ, ಅಷ್ಟೇ ಅದ್ದೂರಿಯಾಗಿಯೇ ಪ್ಲ್ಯಾನ್ ಮಾಡಿದ್ದೇವೆ. ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Rajkumar) ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಹಾಡು, ಡಾನ್ಸ್ ಸೇರಿದಂತೆ ಇತರ ಕಾರ್ಯಕ್ರಮಗಳನ್ನೂ ಆಯೋಜನೆ ಮಾಡಲಾಗಿದೆ. ಅಭಿಮಾನಿಗಳು ಎಷ್ಟೇ ಬಂದರೂ, ಎಲ್ಲರಿಗೂ ಕಾರ್ಯಕ್ರಮವನ್ನು ತೋರಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದರು. ಇದನ್ನೂ ಓದಿ:ರಿಷಬ್ ಹೇಳಿದ ಹಿಂದೂ ಪದ ಒಪ್ಪಲ್ಲ, ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ: ಸಮರ್ಥಿಸಿದ ಚೇತನ್
ಈ ಕಾರ್ಯಕ್ರಮಕ್ಕೆ ತಮಿಳು ಸಿನಿಮಾ ರಂಗದ ಕಮಲ್ ಹಾಸ್, ಪ್ರಭುದೇವ, ಸೂರ್ಯ, ತೆಲುಗು ನಟರಾದ ರಾಣಾ ದಗ್ಗುಬಾರಿ, ನಂದಮೂರಿ ಬಾಲಕೃಷ್ಣ, ಕನ್ನಡದಿಂದ ಸುದೀಪ್, ಯಶ್, ರಮ್ಯಾ, ರವಿಚಂದ್ರನ್, ಜಗ್ಗೇಶ್ ರಮೇಶ್ ಅರವಿಂದ್, ನೀನಾಸಂ ಸತೀಶ್, ಶ್ರೀಮುರಳಿ, ಗಣೇಶ್, ಉಪೇಂದ್ರ ಸೇರಿದಂತೆ ಬಹುತೇಕ ಕಲಾವಿದರು ಹಾಜರಿರಲಿದ್ದಾರೆ. ಬಹುತೇಕ ಕಲಾವಿದರಿಗೂ ಪ್ರತ್ಯೇಕ ಆಹ್ವಾನವನ್ನು ಅಪ್ಪು ಕುಟುಂಬ ನೀಡಿದೆ.