ನಾಳೆಯಿಂದ ಪುನೀತ್ ರಾಜ್ ಕುಮಾರ್ (Puneeth Rajkumar) ಅಭಿನಯದ ಗಂಧದ ಗುಡಿ (Gandhad Gudi) ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಅದಕ್ಕೂ ಮುನ್ನ ಇಂದು ಬೆಂಗಳೂರು ಸೇರಿದಂತೆ ಹಲವು ಕಡೆ ಪೇಯ್ಡ್ ಪ್ರೀಮಿಯರ್ ಆಯೋಜನೆ ಮಾಡಿದ್ದು, ಅಷ್ಟೂ ಟಿಕೆಟ್ ಗಳು ಖಾಲಿ ಆಗಿವೆ. ಎಲ್ಲ ಕಡೆಯೂ ತುಂಬಿದ ಪ್ರದರ್ಶನ ನಡೆಯಲಿದೆ. ಸಂಜೆಯಿಂದ ಎಲ್ಲ ಪ್ರದರ್ಶನಗಳು ನಡೆಯುತ್ತಿವೆ.
ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಪೇಯ್ಡ್ ಪ್ರೀಮಿಯರ್ (Paid Premiere) ಆಯೋಜನೆ ಮಾಡಿದ್ದು ನಲವತ್ತಕ್ಕೂ ಹೆಚ್ಚು ಪೇಯ್ಡ್ ಪ್ರೀಮಿಯರ್ ಪ್ರದರ್ಶನ ನಡೆಯುತ್ತಿರುವುದು ವಿಶೇಷ. ಪೇಯ್ಡ್ ಪ್ರೀಮಿಯರ್ ಶೋ ಆಯೋಜನೆ ಆಗುತ್ತಿದ್ದಂತೆಯೇ ಅಭಿಮಾನಿಗಳು ಟಿಕೆಟ್ ಅನ್ನು ಮುಗಿಬಿದ್ದು ಖರೀದಿಸಿದ್ದು, ಬಹುತೇಕ ಚಿತ್ರಮಂದಿರಗಳ ಮುಂದೆ ಹೌಸ್ ಫುಲ್ (House Full) ಬೋರ್ಡ್ ಕಾಣುತ್ತಿದೆ. ಪ್ರೀಮಿಯರ್ ಮೂಲಕವೇ 25 ಲಕ್ಷ ರೂಪಾಯಿಗೂ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಆಗಿದೆ ಎನ್ನುವ ಮಾಹಿತಿಯೂ ಇದೆ. ಇದನ್ನೂ ಓದಿ: ಹಿಂದುತ್ವದಲ್ಲೇ ಬ್ರಾಹ್ಮಣತ್ವವಿದೆ; ಪಬ್ಲಿಸಿಟಿಗೋಸ್ಕರ ನಟ ಚೇತನ್ ವಿವಾದಿತ ಹೇಳಿಕೆ – ಪೇಜಾವರ ಶ್ರೀ
ನಾಳೆಯು ಕೂಡ ಹತ್ತು ಗಂಟೆಯೊಳಗೆ 50ಕ್ಕೂ ಹೆಚ್ಚು ಪ್ರದರ್ಶನಗಳನ್ನು ಆಯೋಜನೆ ಮಾಡಿದ್ದು, ಬೆಳಗಿನ ಜಾವವೇ 50 ಬಾರಿ ಈ ಸಿನಿಮಾ ಬೆಂಗಳೂರಿನ ಮಲ್ಟಿಪ್ಲೆಕ್ಸ್ ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ ಎಂದು ವಿತರಕ ಕಾರ್ತಿಕ್ ಗೌಡ ಮಾಹಿತಿ ಹಂಚಿಕೊಂಡಿದ್ದಾರೆ. ಇದೊಂದು ನೂತನ ದಾಖಲೆ ಎಂದೂ ಅವರು ತಿಳಿಸಿದ್ದಾರೆ. ಬೆಳಗಿನ ಜಾವ 6 ಗಂಟೆಯಿಂದಲೇ ಸಿನಿಮಾ ಪ್ರದರ್ಶನ ಆಗಲಿದೆ.