ನವದೆಹಲಿ: ಬರೋಬ್ಬರಿ 100 ಕೆಜಿ ಬೆಲ್ಜಿಯಂ ಚಾಕ್ಲೇಟ್ ನಿಂದ ಗಣೇಶ ಮೂರ್ತಿಯನ್ನು ತಯಾರಿಸಲಾಗಿದ್ದು, ಈ ಚಾಕ್ಲೇಟ್ ಗಣೇಶ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಫೇಮಸ್ ಆಗಿದ್ದಾನೆ.
ರೆಸ್ಟೋರೆಂಟ್ ಮಾಲೀಕ ಹಾಗೂ ಚಾಕ್ಲೇಟ್ ತಯಾರಕರಾದ ಹರ್ಜಿಂದರ್ ಸಿಂಗ್ ಕುಕ್ರೇಜಾ ಅವರು ಟ್ವಿಟ್ಟರ್‍ನಲ್ಲಿ ಈ ಚಾಕ್ಲೇಟ್ ಗಣೇಶನ ಮೂರ್ತಿಯ ಫೋಟೋವನ್ನು ಅಪ್ಲೋಡ್ ಮಾಡಿದ್ದರು. ಈ ವಿಶೇಷ ಗಣಪ ಸದ್ಯ ಎಲ್ಲರ ಮನ ಗೆದ್ದಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ತರಹದ ಗಣಪನ ಮೂರ್ತಿಗಳು ಹರಿದಾಡುತ್ತಿರುತ್ತದೆ. ಹಲವು ಡಿಫರೆಂಟ್ ಸ್ಟೈಲ್‍ನಲ್ಲಿ ಗಣಪ ಮಿಂಚುತ್ತಿರುವ ಫೋಟೋಗಳು ಸಾಮಾಜಿಕ ಜಾಕತಾಣಗಳಲ್ಲಿ ವೈರಲ್ ಆಗುತ್ತಲೇ ಇದೆ. ಈ ಸಾಲಿಗೆ ಈಗ ಚಾಕ್ಲೇಟ್ ಗಣಪ ಕೂಡ ಸೇರಿದ್ದಾನೆ. ಇದನ್ನೂ ಓದಿ:ಬರೋಬ್ಬರಿ 65 ಕೆ.ಜಿ ಚಾಕಲೇಟ್‍ನಲ್ಲಿ ಮೂಡಿದ ಗಣೇಶ
Advertisement
This is our 4th consecutive year of the Chocolate Ganesha! It took a team of 20 chefs, 10 days and 100+ Kgs Belgian Chocolate to make this eco-friendly Ganesha. pic.twitter.com/EN85okaNx8
— Harjinder Singh Kukreja (@SinghLions) September 2, 2019
Advertisement
ಈ ವಿಶೇಷ ಚಾಕ್ಲೇಟ್ ಗಣಪನ ಮೂರ್ತಿಯನ್ನು ತಯಾರಿಸಲು 20 ಚೆಫ್‍ಗಳು ಸತತ 10 ದಿನಗಳ ಕಾಲ ಶ್ರಮಪಟ್ಟಿದ್ದಾರೆ. ಅಲ್ಲದೆ ಈ ಗಣಪನನ್ನು ತಯಾರಿಸಲು ಬರೋಬ್ಬರಿ 100 ಕೆಜಿಯಷ್ಟು ಬೆಲ್ಜಿಯಂ ಚಾಕ್ಲೇಟ್ ಬಳಸಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.
Advertisement
ಇದು ಪರಿಸರ ಸ್ನೇಹಿ ಗಣಪ ಇದರಿಂದ ಪರಿಸರಕ್ಕೆ ಯಾವುದೇ ಹಾನಿಯಾಗಲ್ಲ. ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಉದ್ದೇಶದಿಂದ ಈ ಚಾಕ್ಲೇಟ್ ಗಣಪನನ್ನು ತಯಾರಿಸಿದ್ದೇವೆ ಎಂದು ಸಿಂಗ್ ಟ್ವೀಟ್‍ನಲ್ಲಿ ಹೇಳಿಕೊಂಡಿದ್ದಾರೆ. ಸಿಂಗ್ ಅವರು ಕಳೆದ ವರ್ಷ ಕೂಡ ಚಾಕ್ಲೇಟ್ ಗಣಪನನ್ನು ತಯಾರಿಸಿ ಗಣೇಶ ಚತುರ್ಥಿಯನ್ನು ಆಚರಿಸಿದ್ದರು. ಆಗಲೂ ಕೂಡ ಅವರ ಚಾಕ್ಲೇಟ್ ಗಣಪ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಸದ್ದು ಮಾಡಿದ್ದ.
Advertisement
This is our 3rd year of making Chocolate Lord Ganesha. It took 10 days, 20 chefs & 65 kgs of chocolate for the #ChocolateGanpati to be made. The intention is to inspire people to celebrate #GaneshChaturthi in Eco-friendly ways! #गणेशचतुर्थी #GanpatiBappaMorya #GaneshUtsav pic.twitter.com/7ohIr6kHuw
— Harjinder Singh Kukreja (@SinghLions) September 13, 2018
ಈ ವಿಶೇಷ ಪ್ರಯತ್ನಕ್ಕೆ ಹಾಗೂ ಪರಿಸರ ಬಗ್ಗೆ ಕಾಳಜಿ ವಹಿಸಿದ್ದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಫೋಟೋವನ್ನು ಸಾವಿರಾರು ಮಂದಿ ಶೇರ್ ಮಾಡಿಕೊಂಡು ಖುಷಿಪಟ್ಟಿದ್ದಾರೆ. ಕಳೆದ ವರ್ಷ ಸಿಂಗ್ ಅವರು 65 ಕೆ.ಜಿ ಚಾಕ್ಲೇಟ್ ಬಳಸಿ ಗಣೇಶ ಮೂರ್ತಿಯನ್ನು ತಯಾರಿಸಿದ್ದರು. ಆ ಗಣಪನನ್ನು ತಯಾರಿಸಲು 20 ಶೇಫ್‍ಗಳು 10 ದಿನಗಳ ಸಮಯ ತೆಗೆದುಕೊಂಡಿದ್ದರು.