ಬೆಂಗಳೂರು: ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿದ ಸುಪ್ರೀಂ ಆದೇಶವನ್ನು ನಾನು ನಾನು ಸ್ವಾಗತಿಸುತ್ತೇನೆ. ಈ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಹೇಳಿದ್ದಾರೆ.
ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಪ್ರಕರಣದಲ್ಲಿ ಮೊದಲು ಸೆಷನ್ಸ್ ಕೋರ್ಟ್‍ನಲ್ಲಿ ಎಫ್‍ಐಆರ್ ದಾಖಲಾದಾಗ ನಾನೇ ರಾಜೀನಾಮೆ ಕೊಟ್ಟಿದ್ದೇನೆ. ನಂತರ ಸಿಐಡಿ ಬಿ ರಿಪೋರ್ಟ್ ಹಾಕಿದ್ದರು. ಈಗಲೂ ಸಿಬಿಐಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.
Advertisement
ಬಿಜೆಪಿ ನಾಯಕರ ರಾಜೀನಾಮೆ ನೀಡಬೇಕೆಂಬ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಟೇಪ್ ರೆಕಾರ್ಡ್ ಇದ್ದಂತೆ ಯಾವಾಗಲೂ ರಾಜೀನಾಮೆ ಕೇಳುತ್ತಾರೆ. ನಾನು ಯಾಕೆ ರಾಜೀನಾಮೆ ನೀಡಬೇಕು? ಕೇಂದ್ರ ಸಚಿವರ ಮೇಲೂ ಎಫ್‍ಐಆರ್ ದಾಖಲಾಗಿದೆ. ಅವರು ರಾಜೀನಾಮೆ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿ ತಿರುಗೇಟು ನೀಡಿದರು.
Advertisement
ಮೂರು ತಿಂಗಳಲ್ಲಿ ಸಿಬಿಐ ತನಿಖೆ ಮುಗಿಯುತ್ತದೆ. ಆಗ ನಾನೇ ಉತ್ತರ ನೀಡುತ್ತೇನೆ. ನನ್ನ ಹೆಸರು ಕೆ.ಜೆ. ಜಾರ್ಜ್. ನನ್ನನ್ನ ಕಂಡರೆ ಬಿಜೆಪಿ ಅವರಿಗೆ ರೆಡ್ ಫ್ಲಾಗ್ ನೋಡಿದ ಹಾಗೆ ಆಗುತ್ತೆ. ಯಾವುದೇ ಕಾರಣಕ್ಕೂ ನಾನು ರಾಜೀನಾಮೆ ನೀಡುವುದಿಲ್ಲ ಎಂದರು.
Advertisement
ಇದನ್ನೂ ಓದಿ:ಗಣಪತಿ ಕೇಸ್: ಸುಪ್ರೀಂ ನ್ಯಾಯಮೂರ್ತಿಗಳ ಪ್ರಶ್ನೆಗಳಿಗೆ ಸರ್ಕಾರಿ ವಕೀಲರು ಸುಸ್ತು: ಕಲಾಪದ ಪೂರ್ಣ ವರದಿ ಇಲ್ಲಿದೆ