ರಾಮ್ ಚರಣ್ ನಟನೆಯ ಗೇಮ್ ಚೇಂಜರ್ ಬಿಗ್ ಅಪ್‌ಡೇಟ್

Public TV
1 Min Read
Game Changer Ram Charan

ಆರ್‌ಆರ್‌ಆರ್ (RRR) ಸಿನಿಮಾ ನಂತರ ಗ್ಲೋಬಲ್‌ಸ್ಟಾರ್ ರಾಮ್‌ಚರಣ್ (Ram Charan )ನಟನೆಯ ಭಾರೀ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ `ಗೇಮ್ ಚೇಂಜರ್’. ಸದ್ಯ ತಮ್ಮ ಅಭಿಮಾನಿಗಳಿಗೆ ರಾಮ್‌ಚರಣ್ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಗ್ಲೋಬಲ್‌ಸ್ಟಾರ್ ಕೊಟ್ಟ ಸಿಹಿ ಸುದ್ದಿಗೆ ಫ್ಯಾನ್ಸ್ ಖುಷಿಯಿಂದ ಕುಣಿದಾಡಿದ್ದಾರೆ. ಹೌದು, ಗೇಮ್ ಚೇಂಜರ್ (Game Changer) ಸಿನಿಮಾದ ಮೊದಲ ಸಾಂಗ್ ರಿಲೀಸ್ ಆಗಿ ಫ್ಯಾನ್ಸ್ ರಣಕೇಕೆ ಹಾಕಿಯಾಗಿದೆ. ಇದೀಗ ಸೆಕೆಂಡ್ ಸಿಂಗಲ್ ಸರದಿ.

ರಾಮ್ ಚರಣ್ ಹಾಗೂ ಕಿಯಾರ ಅಡ್ವಾನಿ ಜೋಡಿ ಫಸ್ಟ್ ಸಿಂಗಲ್ `ಜರಗಂಡಿ’ ಮೂಲಕ ಗಮನ ಸೆಳೆದಿದೆ. ಇದೀಗ ಈ ಸಿನಿಮಾದ ಸೆಕೆಂಡ್ ಸಿಂಗಲ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ಸೆಪ್ಟಂಬರ್ 28ಕ್ಕೆ ಎರಡನೇ ಹಾಡು ರಿಲೀಸ್ ಆಗ್ತಿದೆ. ಈ ಬಗ್ಗೆ ಚಿತ್ರತಂಡ ಖಚಿತಪಡಿಸಿದೆ. ಡೇಟ್ ಅನೌನ್ಸ್ ಮಾಡಿರುವ ಪೋಸ್ಟರ್‌ನಲ್ಲಿ ಸಾಂಗ್ ನೇಮ್ `ರಾ ಮಚ್ಚಾ ಮಚ್ಚಾ’ ಕೂಡಾ ರಿವೀಲ್ ಮಾಡಿದೆ ಚಿತ್ರತಂಡ. ಇದನ್ನೂ ಓದಿ: `ಮನೆ ಒಳಗೆ ಬಿಟ್ಟುಕೊಳ್ತಿಲ್ಲ ಪತ್ನಿ’ – ಪೊಲೀಸರ ಮೊರೆ ಹೋದ ಜಯಂ ರವಿ

RRR 3

ಶಂಕರ್.ಎಸ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಚಿತ್ರ ಅಂದ್ರೆ ಕೇಳ್ಬೇಕಾ? ಸಹಜವಾಗಿಯೇ `ಗೇಮ್ ಚೇಂಜರ್’ ಮೇಲೆ ಮತ್ತಷ್ಟು ಕ್ಯೂರಿಯಾಸಿಟಿ ಜಾಸ್ತಿಯಾಗಿದೆ. ಹಬ್ಬಕ್ಕೆ ತಮ್ಮ ಭಕ್ತಗಣಕ್ಕೆ ರಾಮ್ ಚರಣ್ ಮಸ್ತ್ ಸ್ಟೆಪ್ ಹಾಕುವ ಹಾಡೊಂದು ಉಡುಗೊರೆಯಾಗಿ ನೀಡ್ತಿದ್ದಾರೆ ಅಂತಾ ಅವ್ರ ಅಭಿಮಾನಿಗಳು ಕುಣಿಯೋಕೆ ಕಾದು ಕುಳಿತಿದ್ದಾರೆ. ಇದನ್ನೂ ಓದಿ: ರಂಗೀಲಾ ಬೆಡಗಿ ಊರ್ಮಿಳಾ ವಿಚ್ಛೇದನ !

ಸಾಂಗ್ `ರಾ ಮಚ್ಚಾ ಮಚ್ಚಾ’ ಅನ್ನೋ ಸಾಲುಗಳಿಂದ ಸ್ಟಾರ್ಟ್ ಆಗಬಹುದೇನೋ ಆದ್ರೆ, ರಾಮ್‌ಚರಣ್ ಲುಕ್ ಮಾತ್ರ ಡಿಸೆಂಟ್ ಆಗಿ ಆಫೀಸರ್ ಥರ ಕಾಣಿಸಿಕೊಂಡಿದ್ದಾರೆ. `ತ್ರಿಪಲ್ ಆರ್’ ಸಿನಿಮಾದ ನಂತರ ಮತ್ತೊಂದು ವಿಭಿನ್ನ ರೀತಿಯ ಸಿನಿಮಾವನ್ನ ಮಾಡಿದ್ದಾರೆ ರಾಮ್ ಚರಣ್. ಜೊತೆಗೆ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆಯನ್ನಿಟ್ಟುಕೊಂಡು ಕುಳಿತಿದೆ ಟೀಮ್. ನಿರ್ದೇಶಕ ಶಂಕರ್.ಎಸ್ ಹಾಗೂ ರಾಮ್ ಚರಣ್ ಫಸ್ಟ್ ಕಾಂಬೋ ಹೇಗೆ ವರ್ಕೌಟ್ ಆಗುತ್ತೆ ಅನ್ನೋ ಮಹಾ ನಿರೀಕ್ಷೆಗಳು, ಲೆಕ್ಕಾಚಾರಗಳು ಸೌತ್‌ನಲ್ಲಿ ಚರ್ಚೆಯಾಗ್ತಿವೆ.

 

Share This Article