ನವದೆಹಲಿ: ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ (Virat Kohli) ಹಾಗೂ ನವೀನ್ ಉಲ್ ಹಕ್ (Naveen-ul-Haq) ಮೈದಾನದಲ್ಲಿ ಮುಖಾಮುಖಿಯಾಗುವ ಬಗ್ಗೆ ಸಾಕಷ್ಟು ಕುತೂಹಲವಿತ್ತು. 2023ರ ಐಪಿಎಲ್ ಬಳಿಕ ಇದೇ ಮೊದಲಬಾರಿಗೆ ಮುಖಾಮುಖಿಯಾಗಿದ್ದು, ಮತ್ತೆ ಕಿರಿಕ್ ಆಗಬಹುದೇ? ಕೊಹ್ಲಿ ಕಣಕ್ಕಿಳಿದ್ರೆ ಬ್ಯಾಟಿಂಗ್‌ನಲ್ಲಿ ಹೇಗೆ ಅಬ್ಬರಿಸುತ್ತಾರೆ? ಅನ್ನೋದನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾದುಕುಳಿತಿದ್ದರು. ಆದ್ರೆ ಮೈದಾನದಲ್ಲಿ ನಡೆದಿದ್ದೇ ಬೇರೆ.
Everyone waited for 6 months to see Virat Kohli Vs Naveen Ul Haq, but they’re now smiling together.
Our beautiful sport, cricket! ❤️
Kohli Kohli
It’s #ViratKohli and #NaveenUlHaq ????#INDvAFG #WorldCup2023#ICCMensCricketWorldCup2023 pic.twitter.com/YhpSC5EwMX
— VINEETH???????? (@sololoveee) October 11, 2023
Advertisement
ಇಲ್ಲಿನ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ (Afghanistan) ನೀಡಿದ 273 ರನ್‌ಗಳ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ ಪರ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಜೋಡಿ ಮೊದಲ ವಿಕೆಟ್‌ಗೆ 156 ರನ್‌ಗಳ ಜೊತೆಯಾಟ ನೀಡಿತ್ತು. ಸ್ಫೋಟಕ ಇನ್ನಿಂಗ್ಸ್ ಆರಂಭಿಸಿದ್ದ ರೋಹಿತ್ ಶರ್ಮಾಗೆ ಸಾಥ್ ನೀಡುತ್ತಿದ್ದ ಇಶಾನ್ ಕಿಶನ್ 47 ರನ್‌ಗಳಿಗೆ ಔಟಾಗಿ ಪೆವಿಲಿಯನ್‌ಗೆ ಮರಳಿದರು. ಬಳಿಕ 3ನೇ ಕ್ರಮಾಂಕದಲ್ಲಿ ಕೊಹ್ಲಿ ಕ್ರೀಸ್‌ಗೆ ಇಳಿಯುತ್ತಿದ್ದಂತೆ ಅಭಿಮಾನಿಗಳು ಜೈಕಾರ ಹಾಕುವ ಮೂಲಕ ಸ್ವಾಗತ ಕೋರಿದರು. ಕೊಹ್ಲಿ ಕ್ರೀಸ್‌ಗೆ ಬಂದು ನವೀನ್ ಉಲ್ ಹಕ್ ಬೌಲಿಂಗ್‌ನಲ್ಲಿ ಎದುರಾದ ಕೊಹ್ಲಿ ಅಬ್ಬರಿಸುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದ್ರೆ ಅಭಿಮಾನಿಗಳ ನಿರೀಕ್ಷೆ ಹುಸಿಯಾಯಿತು.
Advertisement
Advertisement
ನವೀನ್ ಉಲ್ ಹಕ್ ಅವರ ಹಲವು ಎಸೆತಗಳನ್ನು ಕೊಹ್ಲಿ ಡಾಟ್ ಮಾಡಿಸಿದರು. ಜೊತೆಗೆ ಕೊಹ್ಲಿ… ಕೊಹ್ಲಿ… ಎಂದು ಜೈಕಾರ ಕೂಗುತ್ತಾ ನವೀನ್ ಉಲ್ ಹಕ್ ನನ್ನ ರೇಗಿಸುತ್ತಿದ್ದ ಅಭಿಮಾನಿಗಳನ್ನ ಕೈಸನ್ನೆಯಲ್ಲೇ ಸುಮ್ಮನಿರುವಂತೆ ಮನವಿ ಮಾಡಿದರು. ಅಷ್ಟೇ ಅಲ್ಲದೇ ಪಂದ್ಯದ ವೇಳೆ ನವೀನ್ ಉಲ್ ಹಕ್‌ನನ್ನ ಆತ್ಮೀಯವಾಗಿ ಅಪ್ಪಿಕೊಂಡು ಮಾತನಾಡಿಸಿದರು. ನವೀನ್ ಹೆಗಲಮೇಲೆ ಕೈಯಿಟ್ಟು ಪ್ರೀತಿಯಿಂದ ಮಾತನಾಡಿಸಿದರು. ವಿರಾಟ್ ಕೊಹ್ಲಿ ನಡೆಗೆ ಅಭಿಮಾನಿಗಳೂ ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: World Cup 2023: ಗುಡ್‌ನ್ಯೂಸ್ – ಪಾಕ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಸೇರಲಿದ್ದಾರೆ ಗಿಲ್
Advertisement
ಕೊಹ್ಲಿ ಫ್ಯಾನ್ಸ್ ವಿರುದ್ಧ ಗಂಭೀರ್ ಗರಂ:
ಇನ್ನೂ ಕೊಹ್ಲಿ-ನವೀನ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ (Gautam Gambhir), ಕೊಹ್ಲಿಯನ್ನು ಹೊಗಳುತ್ತಲೇ ಅಭಿಮಾನಿಗಳ ವಿರುದ್ಧ ಕಿಡಿ ಕಾರಿದ್ದಾರೆ. ಪ್ರತಿಯೊಬ್ಬ ಆಟಗಾರನೂ ತನ್ನ ತಂಡಕ್ಕಾಗಿ ಹೋರಾಡುತ್ತಾನೆ ಅನ್ನೋದಕ್ಕೆ ಕೊಹ್ಲಿ ಸಾಕ್ಷಿಯಾಗಿದ್ದಾರೆ. ಯಾರು ಯಾವ ದೇಶದವರು ಅನ್ನೋದಕ್ಕಿಂತ ಕ್ರೀಡೆಯಲ್ಲಿ ಎಷ್ಟು ಉತ್ತಮವಾಗಿ ಆಡುತ್ತಾರೆ ಎಂಬುದು ಮುಖ್ಯವಾಗುತ್ತದೆ. ಕೊಹ್ಲಿ ಮತ್ತು ನವೀನ್ ಅವರನ್ನು ಕ್ರೀಡೆಯ ಉದ್ದೇಶದಿಂದಲೇ ನೋಡಿದ್ರೆ ಒಳ್ಳೆಯದು. ಅಭಿಮಾನಿಗಳು ಭಾವೋದ್ವೇಗಕ್ಕೆ ಒಳಗಾಗಿ ಆಟಗಾರರನ್ನ ಟ್ರೋಲ್ ಮಾಡುವುದನ್ನು ನಿಲ್ಲಿಸಬೇಕು ಎಂದು ಕೊಹ್ಲಿ ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ.
ನವೀನ್ ಉಲ್ ಹಕ್ ರಿಯಾಕ್ಷನ್ ಏನು?
ಇನ್ನೂ ಪಂದ್ಯ ಮುಗಿದ ಬಳಿಕ ಕೊಹ್ಲಿ ಜೊತೆಗಿನ ಮಾತುಗಳನ್ನ ರಿವೀಲ್ ಮಾಡಿರುವ ನವೀನ್ ಉಲ್ ಹಕ್, ಕೊಹ್ಲಿ ತುಂಬಾ ಒಳ್ಳೆಯ ವ್ಯಕ್ತಿ, ಉತ್ತಮ ಆಟಗಾರ ಕೂಡ ಹೌದು. ಪಂದ್ಯದ ವೇಳೆ ಪರಸ್ಪರ ಕೈಕುಲುಕಿದೆವು. ಆದ್ರೆ ಅಭಿಮಾನಿಗಳೇ ಅದನ್ನ ದೊಡ್ಡದು ಮಾಡ್ತಿದ್ದಾರೆ. ಅಂದು ನಡೆದ ಘಟನೆಯನ್ನ ನಾವು ಅಲ್ಲಿಗೆ ಬಿಟ್ಟಿದ್ದೇವೆ. ಅಭಿಮಾನಿಗಳು ಅದನ್ನ ಮುಂದುವರಿಸಿದ್ದಾರೆ ಎಂದು ಬೇಸರದಿಂದ ಹೇಳಿಕೊಂಡಿದ್ದಾರೆ.
ಒಟ್ಟಿನಲ್ಲಿ ವಿರಾಟ್ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ನಡುವಣ ಕದನ ಅಂತ್ಯವಾಗಿದೆ ಎಂದೆಲ್ಲಾ ನೆಟ್ಟಿಗರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರೋಹಿತ್ ಶರ್ಮಾ ಸ್ಫೋಟಕ ಶತಕ – 8 ವಿಕೆಟ್‌ಗಳ ಜಯದೊಂದಿಗೆ ಪಾಕ್ ಹಿಂದಿಕ್ಕಿದ ಭಾರತ
2023ರ ಐಪಿಎಲ್‌ನಲ್ಲಿ ಏನಾಗಿತ್ತು?
2023ರ ಐಪಿಎಲ್ ಟೂರ್ನಿವೇಳೆ ಏಕನಾ ಕ್ರೀಡಾಂಗಣದಲ್ಲಿ ನಡೆದ 43ನೇ ಪಂದ್ಯದಲ್ಲಿ ಆರ್‌ಸಿಬಿ, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 18 ರನ್‌ಗಳ ಜಯ ಸಾಧಿಸಿತು. ಈ ಹಿಂದೆ ಆರ್‌ಸಿಬಿ ತವರಿನಲ್ಲಿ ಲಕ್ನೋ ವಿರುದ್ಧದ ವಿರೋಚಿತ ಸೋಲಿಗೆ ಸೇಡು ತೀರಿಸಿಕೊಂಡಿತು. ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆ ಈ ಹಿಂದೆಯೂ ಹಲವು ಬಾರಿ ಜಗಳ ನಡೆದಿವೆ. ಆ ನಂತರ ಇಬ್ಬರ ನಡುವೆ ಉತ್ತಮ ಬಾಂಧವ್ಯವಿತ್ತು. ಆದರೆ ಅಂದು ನಡೆದ ಪಂದ್ಯದ ಬಳಿಕ ಇವರಿಬ್ಬರ ನಡುವಿನ ಜಗಳ ಅತಿರೇಕಕ್ಕೆ ತಲುಪಿತ್ತು. ಒಂದು ವೇಳೆ ಸಹ ಆಟಗಾರರು ಮಧ್ಯ ಬಾರದೇ ಇದ್ದಿದ್ದರೆ ಕೈಕೈ ಮಿಲಾಯಿಸುವುದಕ್ಕೂ ಕಾರಣವಾಗುತ್ತಿತ್ತು.
ಅಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಮತ್ತು ಎಲ್‌ಎಸ್‌ಜಿ ನಡುವಣ ಪಂದ್ಯದಲ್ಲಿ ಲಕ್ನೋ ತಂಡ 1 ವಿಕೆಟ್‌ಗಳ ಜಯ ದಾಖಲಿಸಿತ್ತು. ಆ ಪಂದ್ಯದ ಬಳಿಕ ಗಂಭೀರ್ ಬಾಯ್ಮೇಲೆ ಬೆರೆಳಿಟ್ಟು ಆರ್‌ಸಿಬಿ ಪ್ರೇಕ್ಷಕರು ಸುಮ್ಮನಿರುವಂತೆ ಸೂಚಿಸಿ ಸಂಭ್ರಮಿಸಿದ್ದರು. ಲಕ್ನೋ ತಂಡದ ಅವೇಶ್ ಖಾನ್ ಹೆಲ್ಮೆಟ್ ಕಿತ್ತೆಸೆದು ಅತಿರೇಖದ ವರ್ತನೆ ತೋರಿಸಿದ್ದರು. ಇದಕ್ಕೆ ಪ್ರತಿಯಾಗಿ ತವರಿನಲ್ಲಿ ಬುದ್ಧಿ ಕಲಿಸಲು ನಿರ್ಧರಿಸಿದ್ದ ಕೊಹ್ಲಿ ಪಂದ್ಯದ ನಡುವೆ ಅಭಿಮಾನಿಗಳು ಸುಮ್ಮನಿರಬಾರದು? ಹೃದಯತುಂಬಿ ಸಂಭ್ರಮಿಸಬೇಕು ಎಂದು ಸನ್ನೆ ಮೂಲಕ ತೋರಿಸಿದ್ದರು. ಇದನ್ನೂ ಓದಿ: ಲಂಕಾ ವಿರುದ್ಧ ಮೋಸದಾಟವಾಡಿತಾ ಪಾಕ್? – ಮತ್ತೆ ಮತ್ತೆ ಟೀಕೆಗೆ ಗುರಿಯಾಗ್ತಿರೋದೇಕೆ?
127 ರನ್ ಗುರಿ ಬೆನ್ನತ್ತಿದ್ದ ಲಕ್ನೋ ತಂಡ ಸತತ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇನಿಂಗ್ಸ್ ಅಂತ್ಯದಲ್ಲಿ ಅಮಿತ್ ಮಿಶ್ರಾ 19 ರನ್ ಮತ್ತು ವೇಗಿ ನವೀನ್ ಉಲ್ ಹಕ್ 13 ನಡುವೆ ಸಣ್ಣ ಜೊತೆಯಾಟವೊಂದು ಮೂಡಿಬಂದಿತ್ತು. ಕವರ್ಸ್ ವಿಭಾಗದಲ್ಲಿ ಒಂದು ಫೋರ್ ಕೂಡ ಬಾರಿಸಿದ್ದ ನವೀನ್ ಉಲ್‌ಹಕ್ ಆರ್‌ಸಿಬಿ ಸ್ಟಾರ್ ವಿರಾಟ್ ಕೊಹ್ಲಿ ಅವರನ್ನ ದುರುಗುಟ್ಟಿ ನೋಡಿ, ದೊಡ್ಡ ಜಗಳಕ್ಕೆ ಸಣ್ಣ ಕಿಡಿ ಹಚ್ಚಿದ್ದರು. ಪಂದ್ಯ ಮುಗಿದ ಬಳಿಕ ನವೀನ್ ಮತ್ತು ಕೊಹ್ಲಿ ಕೈ ಕುಲುಕುವಾಗಲೂ ಮಾತಿನ ಚಕಮಕಿ ನಡೆದಿತ್ತು. ಕೈ-ಕೈ ಮಿಲಾಯಿಸುವುದಕ್ಕೂ ಮುಂದಾಗಿದ್ದರು. ಆದ್ರೆ ಮ್ಯಾಕ್ಸ್ವೆಲ್ ಹಾಗೂ ಹರ್ಷಲ್ ಪಟೇಲ್ ಸಮಾಧಾನಪಡಿಸಿ ಕಳುಹಿಸಿದ್ದರು.
Web Stories