Connect with us

Bellary

ಹಿಂದೂ ವಿರೋಧಿಯಾಗಿದ್ದ ನೀವು, ದೇವರನ್ನು ನಂಬುತ್ತಿರುವುದು ಖುಷಿ ಕೊಟ್ಟಿದೆ: ಮಾಜಿ ಸಿಎಂಗೆ ರೆಡ್ಡಿ ಟಾಂಗ್

Published

on

ಬಳ್ಳಾರಿ: ನಿಮ್ಮ ಪಾಪಗಳಿಗಾಗಿ ಶಿಕ್ಷೆಯನ್ನು ನಿಮ್ಮ ಮಕ್ಕಳಿಗೆ ದೇವರು ನೀಡದಿರಲಿ ಎಂದು ದೇವರನ್ನು ಬೇಡಿಕೊಳ್ಳುತ್ತೇನೆ ಎಂದಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಯಯ್ಯಗೆ ಗಾಲಿ ಜನಾರ್ದನ ರೆಡ್ಡಿ ಟ್ವಿಟ್ಟರ್ ಮೂಲಕವೇ ತಿರುಗೇಟು ನೀಡಿದ್ದಾರೆ.

ಇಷ್ಟು ದಿನ ಹಿಂದೂ ವಿರೋಧಿ ಹಾಗೂ ನಾಸ್ತಿಕರಾಗಿದ್ದ ನೀವು, ಇತ್ತೀಚಿನ ದಿನಗಳಿಂದ ದೇವರನ್ನು ನಂಬುತ್ತಿರುವುದು ನನಗೆ ಬಹಳ ಖುಷಿ ಕೊಟ್ಟಿದೆ. ಇನ್ನಾದರೂ ದೇವರು ನಿಮಗೆ ಸದ್ಬುದ್ಧಿ ನೀಡಲಿ. ಅಲ್ಲದೇ ನಾನು ಸಹ ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ ಎನ್ನುವ ಮೂಲಕ ಜನಾರ್ದನ ರೆಡ್ಡಿ ಟಾಂಗ್ ನೀಡಿದ್ದಾರೆ.

ಜನಾರ್ದನ ರೆಡ್ಡಿ ಮೊದಲು ಹೇಳಿದ್ದೇನು?
ಸಿದ್ದರಾಮಯ್ಯ ಅವರು 4 ವರ್ಷ ನನ್ನ ಜೈಲಿನಲ್ಲಿ ಕೊಳೆಯುವಂತೆ ಮಾಡಿದ್ದಾರೆ. ಅದಕ್ಕೆ ದೇವರು ಅವರ ಹಿರಿಯ ಮಗ ರಾಕೇಶ್ ಸಾವಿನ ಮುಖಾಂತರ ಶಿಕ್ಷೆ ಕೊಟ್ಟಿದ್ದಾರೆ ಅಂತ ಪಬ್ಲಿಕ್ ಟಿವಿಯ ಸಂದರ್ಶನದ ವೇಳೆ ಹೇಳಿದ್ದರು. ಕೆಟ್ಟವರಿಗೆ ಭಗವಂತ ಬುದ್ಧಿ ಕಲಿಸುತ್ತಾನೆ. ನನ್ನನ್ನು ನನ್ನ ಮಕ್ಕಳಿಂದ 4 ವರ್ಷ ದೂರ ಇರುವಂತೆ ಮಾಡಿದ ಸಿದ್ದರಾಮಯ್ಯಗೆ ದೇವರು ಅದೇ ರೀತಿ ಸರಿಯಾಗಿ ಬುದ್ಧಿ ಕಲಿಸಿದ್ದಾನೆ. ಶ್ರವಣ ಕುಮಾರನನ್ನು ದಶರಥ ಮಹರಾಜ ಕೊಂದಾಗ ವೃದ್ಧ ತಂದೆ-ತಾಯಿ ನಿನಗೂ ಮಗನ ಅಗಲಿಕೆ ನೋವು ಗೊತ್ತಾಗಲಿ ಅಂತ ಶಾಪ ಕೊಟ್ಟಿದ್ರು. ನಾಲ್ಕು ವರ್ಷ ನನ್ನಿಂದ ದೂರಾಗಿ ನನ್ನ ಮಕ್ಕಳು ಏನೆಲ್ಲ ಕಷ್ಟ ಅನುಭವಿಸಿದ್ರು ಅದನ್ನ ಕಾರಣವಾದ ಎಲ್ಲರು ಅನುಭವಿಸ್ತಾರೆ ಎಂದಿದ್ದರು.

ಮಾಜಿ ಸಿಎಂ ಹೇಳಿದ್ದೇನು?
ನನ್ನ ಮಗನ ಸಾವು ನನಗೆ ದೇವರುಕೊಟ್ಟ ಶಿಕ್ಷೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ. ನಿಮ್ಮ ಪಾಪಗಳಿಗಾಗಿ ಶಿಕ್ಷೆಯನ್ನು ನಿಮ್ಮ ಮಕ್ಕಳಿಗೆ ದೇವರು ನೀಡದಿರಲಿ ಎಂದು ದೇವರನ್ನು ಬೇಡಿಕೊಳ್ಳುತ್ತೇನೆ ಅಂತ ಬರೆದು ಸಿದ್ದರಾಮಯ್ಯ ಟಾಂಗ್ ನೀಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *