Connect with us

Bollywood

ದಾಖಲೆ ನಿರ್ಮಿಸಿದ ಕೆಜಿಎಫ್ ಗಲಿ ಗಲಿ ಹಾಡು- ಈಗ ಕನ್ನಡದ ಜೋಕೆ ಹಾಡು ರಿಲೀಸ್

Published

on

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾದ ಮತ್ತೊಂದು ಲಿರಿಕಲ್ ಹಾಡು ರಿಲೀಸ್ ಆಗಿದೆ.

ನಟಿ ತಮನ್ನಾ ಭಾಟಿಯಾ ಈ ಚಿತ್ರದ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಹಾಡಿನ ಮಧ್ಯೆ ಯಶ್ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಾರೆ. `ಪರೋಪಕಾರಿ’ ಕನ್ನಡ ಚಿತ್ರದ ಜೋಕೆ ನಾನು ಬಳ್ಳಿಯ ಮಿಂಚು’ ಐಟಂ ಸಾಂಗನ್ನು ರಿಮಿಕ್ಸ್ ಮಾಡಲಾಗಿರುವ ಹಾಡು ಇದಾಗಿದ್ದು ಇದೀಗ `ಕೆಜಿಎಫ್’ ಚಿತ್ರಕ್ಕಾಗಿ ರವಿ ಬಸ್ರೂರ್ ರೀ-ಕ್ರಿಯೇಟ್ ಮಾಡಿದ್ದಾರೆ.

ಹಿಂದಿನ ಹಾಡಿಗೆ ಎಲ್.ಆರ್ ಈಶ್ವರಿ ಧ್ವನಿಯಾಗಿದ್ದರು. ಇದೀಗ ಐರಾ ಉಡುಪಿ ಹಿನ್ನೆಲೆ ಗಾಯನದಲ್ಲಿ ಹೊಸ ಜೋಕೆ ರಿಮಿಕ್ಸ್ ಹಾಡು ಮೂಡಿ ಬಂದಿದೆ. ಪ್ರತಿಷ್ಠಿತ ಲಹರಿ ಸಂಸ್ಥೆ ಈ ಹಾಡನ್ನು ರಿಲೀಸ್ ಮಾಡಿದೆ. ಕೆಜಿಎಫ್ ಚಿತ್ರ ಒಟ್ಟು 5 ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಇದನ್ನೂ ಓದಿ: ಕೆಜಿಎಫ್ ಚಿತ್ರದ ‘ಗಲಿ ಗಲಿ’ ಸಾಂಗ್ ರಿಲೀಸ್- ಯಶ್, ಮೌನಿ ಡ್ಯಾನ್ಸ್ ಗೆ ಎಲ್ಲರೂ ಫಿದಾ

ಇತ್ತೀಚೆಗೆ ಹಿಂದಿ ಕೆಜಿಎಫ್ ಚಿತ್ರದ ಸ್ಪೆಷಲ್ ಹಾಡೊಂದನ್ನು ರಿಲೀಸ್ ಮಾಡಿತ್ತು. ಮೌನಿ ರಾಯ್ ಹಾಗೂ ಯಶ್ ಹೆಜ್ಜೆ ಹಾಕಿದ ‘ಗಲಿ ಗಲಿ’ ಹಾಡು ಈಗಾಗಲೇ ರಿಲೀಸ್ ಆಗಿದ್ದು, ಈಗ ಈ ಹಾಡು ಹೊಸ ದಾಖಲೆಯನ್ನು ಮಾಡಿದೆ. ಕಳೆದ ಬುಧವಾರ ಕೆಜಿಎಫ್ ಸಿನಿಮಾದ ‘ಗಲಿ ಗಲಿ’ ಹಾಡು ಬಿಡುಗಡೆಯಾಗಿತ್ತು. ಬಿಡುಗಡೆಯಾದ ಮೊದಲ ದಿನವೇ ಈ ಹಾಡು 13 ಮಿಲಿಯನ್ ವ್ಯೂ ಪಡೆದುಕೊಂಡಿದೆ. ವಿಶ್ವದ ಯಾವ ಸಿನಿಮಾ ಹಾಡು ಕೂಡ ಒಂದು ದಿನಕ್ಕೆ ಈ ಮಟ್ಟಿನ ಹಿಟ್ ಪಡೆದುಕೊಂಡಿಲ್ಲ. ಈಗ ಕೆಜಿಎಫ್ ಚಿತ್ರದ ಈ ಹಾಡು ಬಿಡುಗಡೆಯಾಗಿ ಹೊಸ ದಾಖಲೆ ಸೃಷ್ಟಿಸಿದೆ.

ಕೆಜಿಎಫ್ ಚಿತ್ರದಲ್ಲಿ ಮೌನಿ ರಾಯ್ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಹಾಡಿಗಾಗಿ ಬಾರ್ ಸೆಟ್ ನಿರ್ಮಿಸಲಾಗಿದ್ದು, 1989ರಲ್ಲಿ ಬಿಡುಗಡೆಯಾಗಿದ್ದ `ತ್ರಿದೇವ್’ ಚಿತ್ರದ `ಗಲಿ ಗಲಿ ಮೈ’ ರಿಮಿಕ್ಸ್ ಹಾಡಿಗೆ ಮೌನಿ ರಾಯ್ ಸೊಂಟ ಬಳುಕಿಸಿದ್ದಾರೆ. 1989ರಲ್ಲಿ ಬಿಡುಗಡೆಯಾಗಿದ್ದ ಈ ಹಾಡನ್ನು ಅಲ್ಕಾ ಯಾಗ್ನಿಕ್ ಹಾಡಿದ್ದರು. ನಟ ಜಾಕಿ ಶ್ರಾಫ್ ಹಾಗೂ ನಟಿ ಸಂಗೀತಾ ಬಿಜಲಾನಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈಗ ಈ ರಿಮಿಕ್ಸ್ ಹಾಡಿಗೆ ಗಾಯಕಿ ನೇಹಾ ಕಕ್ಕರ್ ಧ್ವನಿ ನೀಡಿದ್ದಾರೆ. ಈ ಹಾಡನ್ನು ತನಿಷ್ಕ್ ಬಗ್ಚಿ ರೀ-ಕಂಪೋಸ್ ಮಾಡಿದ್ದಾರೆ.

ಕೆಜಿಎಫ್ ಚಿತ್ರವನ್ನು ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಒಟ್ಟು 5 ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಕೆಜಿಎಫ್ ಚಿತ್ರ ಡಿ. 21ರಂದು ದೇಶಾದ್ಯಂತ ಬಿಡುಗಡೆ ಆಗಲಿದೆ. ಇದೇ ದಿನ ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ನಟನೆಯ `ಝೀರೋ’ ಚಿತ್ರ ಬಿಡುಗಡೆಯಾಗಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *