ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಗಗನಯಾನಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಇಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ 10 ಸಾವಿರ ಕೋಟಿ ವೆಚ್ಚದಿಂದ ಭಾರತದ ಮೂವರು ಗಗನಯಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಕೇಂದ್ರ ಮುದ್ರೆಯನ್ನು ಒತ್ತಿದೆ.
ಗಗನಯಾನದಲ್ಲಿ ಮೂವರು ಚಾಲಕ ಸಿಬ್ಬಂದಿ ಒಟ್ಟು ಏಳು ದಿನಗಳ ಕಾಲ ಬಾಹ್ಯಾಕಾಶದಲ್ಲಿ ಇರಲಿದ್ದಾರೆ. ಗಗನಯಾನಕ್ಕೆ ಮಾನವ ಕ್ರಮಾಂಕದ ಜಿಎಸ್‍ಎಲ್‍ವಿ ಎಂಕೆ-111 ಬಳಕೆ ಮಾಡಲಾಗುತ್ತಿದೆ. ಈ ಬಾಹ್ಯಾಕಾಶ ನೌಕೆಯಲ್ಲಿ ಏಳು ದಿನ ಮೂವರು ಯಾನಿಗಳಿಗೆ ವಿಹರಿಸಲು ಅವಕಾಶವಿದೆ. ಈ ಯೋಜನೆಗಾಗಿ ಸರ್ಕಾರ 10 ಸಾವಿರ ಕೋಟಿ ರೂ. ಹಣವನು ಮೀಸಲಿರಿಸಿದೆ. ಯೋಜನೆಯ ತಂತ್ರಜ್ಞಾನ ಅಭಿವೃದ್ಧಿ, ಹಾರ್ಡ್ ವೇರ್ ಅಳವಡಿಕೆ, ಅವಶ್ಯಕ ಮೂಲಸೌಕರ್ಯ ಸೇರಿದಂತೆ ಎಲ್ಲ ವೆಚ್ಚಕ್ಕಾಗಿ 10 ಸಾವಿರ ಕೋಟಿ ಬಳಕೆಯಾಗಲಿದೆ.
Advertisement
Advertisement
ಎರಡು ಮಾನವ ರಹಿತ ಹಾರಾಟ ಮತ್ತು ಮಾನವ ಸಹಿತ ಹಾರಟವನ್ನು ಗಗನಯಾನ ಭಾಗವಾಗಿ ಕೈಗೊಳ್ಳಲಾಗುತ್ತಿದೆ. ಗಗನಯಾನ ಕಾರ್ಯಕ್ರಮವನ್ನು ಕೆಲಸವನ್ನು ಇಸ್ರೋ, ಅಕ್ಯಾಡೆಮಿಯಾ, ನ್ಯಾಶನಲ್ ಏಜೆನ್ಸಿ, ಕೈಗಾರಿಗೆಗಳು ಒಳಗೊಂಡಂತೆ ವೈಜ್ಞಾನಿಕ ಸಂಘ, ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಿದ್ಧಪಡಿಸಲಾಗುತ್ತಿದೆ.
Advertisement
ಈ ವಿಶೇಷ ಯೋಜನೆ ಉದ್ಯೋಗ ಸೃಷ್ಟಿಸಲಿದ್ದು, ಹೊಸ ಹೊಸ ತಂತ್ರಜ್ಞಾನ, ಯುವ ವಿಜ್ಞಾನಿಗಳ ಸಾಧನೆಗೆ ನಾಂದಿಯಾಲಿದೆ ಎಂದು ಹೇಳಲಾಗುತ್ತಿದೆ. ಸಂಶೋಧನಾ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ. ಈ ಒಂದು ಯೋಜನೆ ಮುಂಬರುವ ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯಗಳಲ್ಲಿ ತೊಡಗಿಕೊಳ್ಳಲು ಪ್ರೇರಣೆಯಾಗಲಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv