ಬಾಲಿವುಡ್ ನಟ ಸನ್ನಿ ಡಿಯೋಲ್- ಅಮೀಷಾ ಪಟೇಲ್ (Ameesha Patel) ನಟನೆಯ ‘ಗದರ್ 2′(Gadar 2) ಸಿನಿಮಾ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಹಿಟ್ ಆಗುತ್ತಿದ್ದಂತೆ ನಟ ಸನ್ನಿ ವರಸೆ ಬದಲಿಸಿದ್ದಾರೆ. ಇದೀಗ ಅಭಿಮಾನಿ ಜೊತೆ ನಟ ನಡೆದುಕೊಂಡಿರುವ ರೀತಿಗೆ ನೆಟ್ಟಿಗರು ಕಿಡಿಕಾರಿದ್ದಾರೆ. ಸೆಲ್ಫಿಗಾಗಿ ಬಂದ ಫ್ಯಾನ್ಸ್‌ಗೆ ಸನ್ನಿ ಗದರಿಸಿ ಸೈಡಿಗೆ ಕಳುಹಿಸಿದ್ದಾರೆ. ಅಷ್ಟಕ್ಕೂ ಆಗಿದ್ದೇನು?
ಮಹಿಳೆಯೊಬ್ಬರು ಫೋಟೋ ಕ್ಲಿಕ್ಕಿಸಲು ಸನ್ನಿ ಡಿಯೋಲ್ (Sunny Deol) ಬಳಿ ಬಂದಿದ್ದಾರೆ. ಅವರು ಮಹಿಳೆಯತ್ತ ಕೋಪದಿಂದ ನೋಡಿದ್ದಾರೆ. ಜೊತೆಗೆ ತಮ್ಮನ್ನು ಮುಟ್ಟಬೇಡಿ ಎಂದು ಮಹಿಳೆಗೆ ಸೂಚನೆ ನೀಡಿದ್ದಾರೆ. ಜೊತೆಗೆ ಬಾಯಮೇಲೆ ಕೈಬೆರಳಿಟ್ಟು ಸುಮ್ಮನಿರುವಂತೆ ಸೂಚಿಸಿದ್ದಾರೆ. ಜನರು ವಿಡಿಯೋಗೆ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಸನ್ನಿಗೆ ಸೊಕ್ಕು ಹೆಚ್ಚಾಗಿದೆ. ಎಲ್ಲಾ ಗದರ್ 2 ಚಿತ್ರ ಯಶಸ್ಸಿನ ಪ್ರಭಾವ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ಅಮೀಷಾ ಪಟೇಲ್ ಜೊತೆಗಿನ ‘ಗದರ್ 2’ ಲವ್ ರೊಮ್ಯಾನ್ಸ್ ಫ್ಯಾನ್ಸ್‌ಗೆ ಇಷ್ಟವಾಗಿದೆ. ಆಗಸ್ಟ್ 11ರಂದು ‘ಗದರ್ 2’ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡುವತ್ತ ಮುನ್ನುಗ್ಗುತ್ತಿದೆ. ಇದನ್ನೂ ಓದಿ:ಮದುವೆ ನಂತರ ನೀರು ಬಿಸಿ ಮಾಡಿದ್ದು ಬಿಟ್ಟು ಬೇರೆ ಅಡುಗೆ ಮಾಡಿಲ್ವಂತೆ- ಕಿಯಾರಾ ಅಡ್ವಾಣಿ
ಕಥಾ ನಾಯಕನ ಮಗ ಪಾಕಿಸ್ತಾನದಲ್ಲಿ ಸಿಕ್ಕಿ ಬೀಳುತ್ತಾನೆ. ಆತನ ರಕ್ಷಣೆಗೆ ಕಥಾ ನಾಯಕ ತೆರಳುತ್ತಾನೆ. ಭರ್ಜರಿ ಫೈಟ್ ನಡೆಯುತ್ತದೆ. ಅಲ್ಲಿಂದ ಮಗನ ಕರೆತರಲು ಆತ ಯಶಸ್ವಿ ಆಗುತ್ತಾನೋ ಅಥವಾ ಇಲ್ಲವೋ ಎಂಬುದೇ ‘ಗದರ್ 2’ ಸಿನಿಮಾದ ಕಥೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]