ಗದಗ: ಪೊಲೀಸ್ ಅಫೀಸರ್ ವಿಶ್ವನಾಥ್ ಸಜ್ಜನರ್ ಬೃಹತ್ ಫೋಟೋ ಇಟ್ಟು ಅವರ ಸ್ವಗ್ರಾಮ ಅಸೂತಿಯಲ್ಲಿ ಮಧ್ಯರಾತ್ರಿಯಲ್ಲಿ ಬೃಹತ್ ಮೆರವಣಿಗೆ ಮಾಡಲಾಗಿದೆ.
ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಹೈದರಾಬಾದ್ ಪಶುವೈದ್ಯೆ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಹುಬ್ಬಳ್ಳಿ ಮೂಲದ ಪೊಲೀಸ್ ಅಧಿಕಾರಿ ವಿಶ್ವನಾಥ್ ಸಜ್ಜನರ್ ಅವರು ಎನ್‍ಕೌಂಟರ್ ಮಾಡಿದ್ದರು. ಕಾಮುಕರನ್ನು ಹುಟ್ಟಡಗಿಸಿದ್ದು ವೀರ ಕನ್ನಡಿಗ ಅನ್ನೋದು ಗೊತ್ತಾಗುತ್ತಿದ್ದಂತೆ ಕರ್ನಾಟಕದ ಮೂಲೆ ಮೂಲೆಯಿಂದಲೂ ಪ್ರಶಂಸೆ ವ್ಯಕ್ತವಾಗಿ ಎಲ್ಲೆಡೆ ಸಂಭ್ರಮಾಚರಣೆ ಜೋರಾಗಿತ್ತು.
Advertisement
Advertisement
ಶನಿವಾರ ಮಧ್ಯರಾತ್ರಿ ವಿಶ್ವನಾಥ್ ಸಜ್ಜನರ ಅವರ ಸ್ವಗ್ರಾಮ ಅಸೂತಿ ಗ್ರಾಮದಲ್ಲಿ ಸಂಭ್ರಮಾಚರಣೆ ಮನೆ ಮಾಡಿತ್ತು. ಗದಗ ಜಿಲ್ಲೆಯ ರೋಣ ತಾಲೂಕಿನ ಅಸೂತಿ ಗ್ರಾಮದಲ್ಲಿ ವಿಶ್ವನಾಥ್ ಸಜ್ಜನರ್ ಅವರ ತಂದೆ ಚನ್ನಬಸಪ್ಪ ವಾಸವಿದ್ದಾರೆ. ವಿಶ್ವನಾಥ್ ಸಜ್ಜನರ್ ಅವರು ಕೂಡ ಹುಟ್ಟಿ ಬೆಳೆದ ಊರು ಇದಾಗಿದ್ದು, ನಮ್ಮ ಮನೆ ಮಗ ಎಂದು ಜನ ಮಧ್ಯೆ ರಾತ್ರಿ ಸಂಭ್ರಮಾಚರಣೆ ಮಾಡಿದ್ದಾರೆ.
Advertisement
Advertisement
ಟ್ಯಾಕ್ಟರ್ ನಲ್ಲಿ ಪೊಲೀಸ್ ಆಫೀಸರ್ ವಿಶ್ವನಾಥ್ ಸಜ್ಜನರ್ ಅವರ ಬೃಹತ್ ಫೋಟೋ ಮೆರವಣಿಗೆ ಮಾಡಿದ್ದಾರೆ. ದಾರಿಯದ್ದಕ್ಕೂ ಡೋಲು, ಮೇಳ ಬಾರಿಸುತ್ತಾ ಪಟಾಕಿ ಸಿಡಿಸಿ ಮೆರವಣಿಗೆ ಮಾಡಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ನಮ್ಮೂರ ಹೆಮ್ಮೆಯ ನಾಯಕ ಎಂದು ಓಕುಳಿ ಆಡಿ, ಪಟಾಕಿ ಸಿಡಿಸಿ, ಮನೆ ಮನೆಯಲ್ಲೂ ಹಬ್ಬ ಆಚರಿಸಿದ್ದಾರೆ. ಶನಿವಾರ ಸಂಜೆ 6.39 ರಿಂದ ಮೆರವಣಿಗೆ ಆರಂಭವಾಗಿದ್ದು, ಮಧ್ಯರಾತ್ರಿ 1 ಗಂಟೆಯವರೆಗೂ ಗ್ರಾಮ ಕೇರಿ ಕೇರಿಯಲ್ಲೂ ಮೆರವಣಿಗೆ ಮಾಡಿ ಸಂಭ್ರಮಿಸಿದ್ದಾರೆ.