ಗದಗ: ಕೊರೊನಾ ಲಾಕ್‍ಡೌನ್ ವೇಳೆ ಅನ್ಯಕೋಮಿನ ಅನಾಮಧೇಯ ವ್ಯಕ್ತಿಗಳು ದಿನಸಿ ಕಿಟ್ ವಿತರಿಸಿದ್ದು, ಗ್ರಾಮಸ್ಥರು ಆತಂಕಕ್ಕೊಳಗಾಗಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರ ಗ್ರಾಮದಲ್ಲಿ ನಡೆದಿದೆ.
ಗುರುವಾರ ರಾತ್ರಿ 3 ಜನರ ಯುವಕರು, ಗ್ರಾಮದ ಹತ್ತಾರು ಮನೆಗಳಿಗೆ ಅಕ್ಕಿ, ಗೋಧಿ, ಬೆಳೆ, ಸಕ್ಕರೆ, ಎಣ್ಣೆ ಪ್ಯಾಕೆಟ್ ಹೀಗೆ ಅನೇಕ ವಸ್ತುವಿನ ದಿನಸಿ ಕಿಟ್ ವಿತರಿಸಿದ್ದಾರೆ. ನಮಗೆ ಬೇಡ ಅಂದರೂ ಕೊಟ್ಟು ಹೋಗಿದ್ದಾರೆ ಎಂದು ಸ್ಥಳೀಯ ಅಜ್ಜಿಯರಿಬ್ಬರು ಹೇಳುತ್ತಿದ್ದಾರೆ. ಇವರು ವಯಸ್ಸಾದವರು ಹಾಗೂ ಹೆಚ್ಚು ಮಕ್ಕಳಿದ್ದ ಮನೆಯೇ ಟಾರ್ಗೆಟ್ ಮಾಡಿ ಕೇವಲ ಬೆರಳೆಣಿಕೆಯಷ್ಟು ಮನೆಗಳಿಗೆ ಮಾತ್ರ ಹಂಚಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
Advertisement
Advertisement
ತಾಲೂಕಾಡಳಿತ ಅನುಮತಿ ಇಲ್ಲದೇ ಯಾರು ಎಲ್ಲಿಂದ ಬಂದರು ಏನು ಎಂಬುದನ್ನು ತಿಳಿಸದೇ ಕಿಟ್ ನೀಡಿ ಪರಾರಿಯಾಗಿದ್ದಾರೆ. ಇದು ಈ ಸಂದರ್ಭದಲ್ಲಿ ಗ್ರಾಮದ ಜನರಲ್ಲಿ ಮತ್ತಷ್ಟು ಆತಂಕ ಹುಟ್ಟಿಸಿದೆ. ಸುದ್ದಿ ತಿಳಿದು ಸ್ಥಳಕ್ಕೆ ಗದಗ ಎಸ್.ಪಿ ಯತೀಶ್ ಎನ್, ರೋಣ ತಹಶೀಲ್ದಾರ್ ಜಕ್ಕನಗೌಡ ತಾಲೂಕ ಆಹಾರ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಅನುಮಾನಸ್ಪದ ವ್ಯಕ್ತಿಗಳು ಗುರುತು ಸಿಕ್ಕಿದ್ದು, ಈ ಕುರಿತು ಪೊಲೀಸರ ತನಿಖೆ ನಂತರ ಸತ್ಯಾಸತ್ಯತೆ ಗೊತ್ತಾಗಲಿದೆ.