ಗದಗ: ಕಲೆ ಎನ್ನುವುದು ಆರಾಧಕನನ್ನು ಮಾತ್ರ ಕೈಬೀಸಿ ಕರೆಯುತ್ತಂತೆ. ಆದರೆ ಗದಗ ತೋಂಟದಾರ್ಯ ಶಾಲಾ ಮಕ್ಕಳ ಕೈಚಳಕದಲ್ಲಿ ವಿವಿಧ ತರನಾದ ರಂಗೋಲಿ ಎಲ್ಲರನ್ನೂ ಕೈಬಿಸಿ ಕರೆಯುವಂತಿದೆ. ಮಕ್ಕಳು ರಂಗೋಲಿ ರೂಪದಲ್ಲಿ ಬಿಡಿಸಿದ ಪಠ್ಯಕ್ರಮದ ಚಿತ್ರಗಳು ನೋಡುಗರ ಕಣ್ಮನ ಸೇಳೆಯುವಂತಿದ್ದವು.
ನಗರದ ತೋಂಟದಾರ್ಯ ಶಾಲೆಯಲ್ಲಿ 5ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ರಂಗೋಲಿ ಮೂಲಕ ಪಠ್ಯಕ್ರಮ ಆಧಾರಿತ ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರಿಂದಾಗಿ ಶಾಲಾ ಆವರಣ ಸಂಪೂರ್ಣ ಬಣ್ಣ ಬಣ್ಣದ ರಂಗೋಲಿ ಚಿತ್ತಾರದಿಂದ ಶೃಂಗಾರ ಗೊಂಡಿತ್ತು. ನಾ ಮುಂದೂ ತಾ ಮುಂದೂ ಅಂತ ಸುಮಾರು 400 ವಿದ್ಯಾರ್ಥಿಗಳು ಈ ರಂಗೋಲಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
Advertisement
Advertisement
ಪರೀಕ್ಷೆಗಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಈ ಸ್ಪರ್ಧೆ ಹಮ್ಮಿಕೊಳ್ಳಲಾಗಿದ್ದು, ಇಲ್ಲಿ ಚೆನ್ನಾಗಿ ಚಿತ್ರಬಿಡಿಸಿದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸೇರಿದಂತೆ ಸೂಕ್ತ ಬಹುಮಾನ ನೀಡಲಾಗುತ್ತದೆ. ಪ್ರಥಮ ಬಹುಮಾನ 501 ರೂಪಾಯಿ ಮೊತ್ತದ ಪುಸ್ತಕಗಳು, ಪ್ರಮಾಣಪತ್ರ, ದ್ವಿತೀಯ ಬಹುಮಾನ 301 ರೂ. ಮೊತ್ತದ ಪುಸ್ತಕ, ಪ್ರಮಾಣಪತ್ರ ಹಾಗೂ ತೃತೀಯ ಬಹುಮಾನ 101 ರೂ. ಮೊತ್ತರ ಪುಸ್ತಕ ಹಾಗೂ ಪ್ರಶಸ್ತಿ ನೀಡಿ ಗೌರವಿಲಾಗುತ್ತದೆ. ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮದ ಇಬ್ಬರು ವಿದ್ಯಾರ್ಥಿಗಳಿಗೆ ಉತ್ತಮ ಪ್ರಶಸ್ತಿ ನೀಡಲಾಗುತ್ತೆ. ಮಕ್ಕಳ ಪ್ರತಿಭೆ ಹೊರಹಾಕಲು ಇದೊಂದು ವೇದಿಕೆಯಾಗಿತ್ತು ಎಂದು ಶಾಲಾ ಮುಖೋಪಾಧ್ಯಾಯರು ತಿಳಿಸಿದ್ದಾರೆ.
Advertisement
Advertisement
ರಂಗೋಲಿ ಮೂಲಕ ಬಿಡಿಸಿದ ನರಕೋಶ, ದಾಸವಾಳ ಹೂ, ಸಸ್ಯಜೀವ ಕೋಶ, ಕಣ್ಣು, ಮೆದುಳು, ಹೃದಯ ಭಾಗ, ದೊಡ್ಡ ಕರಳು, ಸಣ್ಣ ಕರಳು, ಮಾನವನ ಜೀರ್ಣಾಂಗ, ಜೈವಿಕ ಅನಿಲ ಸ್ಥಾವರ, ವಂಶವೃಕ್ಷ, ಸೂಕ್ಷದರ್ಶಕ ಸೇರಿದಂತೆ ಗಣಿತ, ವಿಜ್ಞಾನ ಹಾಗೂ ಸಮಾಜ-ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಅನೇಕ ಚಿತ್ರಗಳನ್ನ ಬಿಡಿಸಲಾಗಿತ್ತು. ಮಕ್ಕಳ ಈ ಚಿತ್ರಗಳು ಒಂದಕ್ಕಿಂತ ಮತ್ತೊಂದು ಆಕರ್ಷಣೀಯವಾಗಿ ಕಣ್ಮನ ಸೆಳೆಯುವಂತಿದ್ದವು. ಮಕ್ಕಳ ಕೈ ಚಳಕದಲ್ಲಿ ಅರಳಿದ ಈ ಚಿತ್ರಗಳು ವರ್ಣರಂಜಿತವಾಗಿದ್ದವು. ಈ ಚಿತ್ರಗಳು ಜನರನ್ನ ತನ್ನತ್ತ ಕೈಬಿಸಿ ಕರೆಯುವಂತಿದ್ದವು.
ಕೆಲವು ಮಕ್ಕಳು ಡ್ರಾಯಿಂಗ್ ಸೀಟ್‍ನಲ್ಲಿ ಚಿತ್ರಗಳನ್ನ ಬಿಡಿಸಿದ್ದರು. ಇತರನಾಗಿ ಸ್ಪರ್ಧೆ ಹಮ್ಮಿಕೊಂಡಿರುವುದು ನಮಗೆ ತುಂಬಾನೆ ಖುಷಿ ತಂದಿದೆ. ಕಲರ್ ಕಲರ್ ರಂಗೋಲಿ ತಂದು ಚಿತ್ರ ಬಿಡಿಸಿದ್ದೇವೆ. ಇದು ಕೇವಲ ಸ್ಪರ್ಧೆಗೆ ಅಷ್ಟೇ ಅಲ್ಲ, ಮುಂಬರುವ ಪರೀಕ್ಷೆಯಲ್ಲೂ ತುಂಬಾನೆ ಅನುಕೂಲವಾಗಲಿದೆ. ಈ ಚಟುವಟಿಕೆ ನಮಗೆ ಖುಷಿ ತಂದಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಕಲರ್ ಫುಲ್ ರಂಗೋಲಿ ಮೂಲಕ ಶಾಲಾ ಮೈದಾನ ಕಣ್ಮನ ಸೆಳೆಯಿತು. ಶಾಲಾ ಮಕ್ಕಳು ರಂಗೋಲಿ ಮೂಲಕ ಪಠ್ಯಕ್ರಮ ಆಧಾರಿತ ಚಿತ್ರಗಳನ್ನ ನೋಡಿ ಪಾಲಕರು, ಹಾಗೂ ಶಿಕ್ಷಕವೃಂದ ಫಿದಾ ಆದರು. ಗದಗ ತೋಂಟದಾರ್ಯ ಶಾಲಾ ಮೈದಾನ ಬಣ್ಣ ಬಣ್ಣದ ರಂಗೋಲಿ ಚಿತ್ರಗಳ ಮೂಲಕ ಬಣ್ಣದ ಲೋಕವಾಗಿ ಮಾರ್ಪಟ್ಟಿತು. ಮಕ್ಕಳನ್ನ ಕೇವಲ ಆಟ-ಪಾಠಕ್ಕೆ ಸಿಮೀತಗೊಳಿಸದೇ ಕಲಿಕೆಯಲ್ಲಿ ಖುಷಿಪಡಿಸವ ಇಂತಹ ಕಾರ್ಯ ಇತರರು ಅಳವಡಿಸಿಕೊಳ್ಳಲಿ ಎಂಬುದು ನಮ್ಮ ಆಸೆಯ ಎಂದು ವಿದ್ಯಾರ್ಥಿಗಳ ಪೋಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.