ಗದಗ: ಊರಲ್ಲಿ, ಓಣಿಯಲ್ಲಿ, ಶಾಲಾ, ಕಾಲೇಜಿನಲ್ಲಿ ನಲ್ಲಿ ಅನ್ಯ ಧರ್ಮದ ಯುವಕರ ಜೊತೆ ಪ್ರೀತಿ, ಪ್ರೇಮ, ಸ್ನೇಹದ ಬಲೆಗೆ ಬಿಳ್ಳುವುದಿಲ್ಲ, ಅನ್ಯ ಧರ್ಮದವರ ಸ್ನೇಹ, ಪ್ರೀತಿ ಒಪ್ಪಲ್ಲ, ಅನ್ಯ ಧರ್ಮದ ಯುವಕ ಪ್ರೀತಿ, ಪ್ರೇಮ ಅಂತ ಬೆನ್ನುಬಿದ್ದರೇ ತಂದೆ-ತಾಯಿ ಗಮನಕ್ಕೆ ತರುತ್ತೇನೆ ಅಥವಾ ನಾನೇ ಅಂಥವರಿಗೆ ಬುದ್ಧಿ ಕಲಿಸುತ್ತೇನೆ… ಇದು ಲವ್ ಜಿಹಾದ್‌ಗೆ (Love Jihad) ಒಳಗಾಗದಂತೆ ಗದಗದ ಎಸ್‌ಎಸ್‌ಕೆ (SSK Samaj) ಸಮಾಜದ ಜನ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಪರಿ.
Advertisement
ರಾಜ್ಯದಲ್ಲಿ ಲವ್ ಜಿಹಾದ್ ವಿಚಾರ ಮತ್ತೆ ಸದ್ದು ಮಾಡ್ತಿದ್ದು, ಮತ್ತೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಆರೋಪಗಳು ಕೇಳಿಬರುತ್ತಿವೆ. ಈ ನಡುವೆ ಲವ್ ಜಿಹಾದ್‌ಗೆ ಒಳಗಾಗದಂತೆ ದೇವರ ಹೆಸರಿನಲ್ಲಿ ಸಮಾಜದ ಜನ ಪ್ರಮಾಣ ವಚನ ಸ್ವೀಕರಿಸಿರುವುದು ಗಮನ ಸೆಳೆದಿದೆ.
Advertisement
ಸಹಸ್ರಾರ್ಜುನ ಮಹಾರಾಜ್ ಜಯಂತೋತ್ಸವದ ಅಂಗವಾಗಿ ಗದಗ ನಗರದ (Gadag City) ವಿಠಲಾರೂಢ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರು, ಪುರುಷರು ಹಾಗೂ ಮಕ್ಕಳು ಸೇರಿದಂತೆ ನೂರಾರು ಮಂದಿ ಸೇರಿ ಲವ್ ಜಿಹಾದ್ ವಿರುದ್ಧ ಪ್ರಮಾಣ ವಚನ ಸ್ವೀಕರಿಸಿದರು.
Advertisement
Advertisement
ಪ್ರಮಾಣ ವಚನ ಏನು?
ಲವ್ ಜಿಹಾದ್‌ಗೆ ಒಳಗಾಗದಂತೆ ಮಹಿಳೆಯರು, ಮಕ್ಕಳಿಗೆ ದೇವರ ಮೇಲೆ ಪ್ರಮಾಣ ಮಾಡುತ್ತಿದ್ದೇವೆ. ಜಗನ್ಮಾತೆ ದೇವಿ, ಸಹಸ್ರಾರ್ಜುನ ಮಹಾರಾಜ, ಯಲ್ಲಮ್ಮದೇವಿ, ವಿಠಲಾರೂಢ ದೇವರ ಮೇಲೆ ಪ್ರಮಾಣ ಮಾಡುತ್ತಿದ್ದೇವೆ. ಊರಲ್ಲಿ, ಓಣಿಯಲ್ಲಿ, ಶಾಲಾ, ಕಾಲೇಜ್‌ನಲ್ಲಿ ಅನ್ಯ ಧರ್ಮದ ಯುವಕರ ಜೊತೆ ಪ್ರೀತಿ, ಪ್ರೇಮ, ಸ್ನೇಹದ ಬಲೆಗೆ ಬಿಳ್ಳುವುದಿಲ್ಲ, ಅನ್ಯ ಧರ್ಮದ ಸ್ನೇಹ, ಪ್ರೀತಿ ಒಪ್ಪುವುದಿಲ್ಲ, ಧಿಕ್ಕರಿಸುತ್ತೇನೆ. ಇದನ್ನೂ ಓದಿ: ಉತ್ತರ ಪ್ರದೇಶದ ಬಳಿಕ ಕರ್ನಾಟಕದಲ್ಲೂ ಲವ್ ಜಿಹಾದ್ ನಿಯಂತ್ರಣಕ್ಕೆ ಕ್ರಮ – ಕಾನೂನಿನಲ್ಲಿ ಏನಿರಲಿದೆ?
ಅನ್ಯ ಧರ್ಮದ ಯುವಕ ಪ್ರೀತಿ, ಪ್ರೇಮ ಅಂತ ಬೆನ್ನು ಬಿದ್ದರೆ, ಫೇಸ್ ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ ಮೆಸೇಜ್ ಮಾಡಿದ್ರೆ, ತಂದೆ-ತಾಯಿ ಗಮನಕ್ಕೆ ತರುತ್ತೇನೆ. ಹಿರಿಯರ ಗಮನಕ್ಕೆ ತಂದು ತಡೆಯುವ ಪ್ರಯತ್ನ ಮಾಡುತ್ತೆನೆ ಅಥವಾ ನಾನೇ ಅವನಿಗೆ ಬುದ್ಧಿ ಕಲಿಸುವ ಕೆಲಸ ಮಾಡ್ತೀನಿ. ನನ್ನ ಸ್ನೇಹಿತರು ಲವ್ ಜಿಹಾದ್‌ಗೆ ಬಲಿಯಾಗದಂತೆ ಜಾಗೃತರನ್ನಾಗಿ ಮಾಡುತ್ತೆನೆ. ಕುಟುಂಬದ ಹಾಗೂ ಸಮಾಜದ ಗೌರವ ಕಾಪಾಡುತ್ತೆನೆ ಎಂದು ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇದನ್ನೂ ಓದಿ: ಕಟೀಲ್ ಲವ್ ಜಿಹಾದ್ ಹೇಳಿಕೆ – ಬಿಜೆಪಿ, ಕಾಂಗ್ರೆಸ್ ಮಧ್ಯೆ ಪರ ವಿರೋಧ ಜಟಾಪಟಿ
ಅಲಹಾಬಾದ್ ಹೈಕೋರ್ಟ್ ಏನು ಹೇಳಿದೆ?
2020ರ ಸೆಪ್ಟೆಂಬರ್ 23 ರಂದು ಲವ್ ಜಿಹಾದ್ ಸಂಬಂಧ ಅಲಹಾಬಾದ್ ಹೈಕೋರ್ಟ್ ತೀರ್ಪೋಂದನ್ನು ನೀಡಿತ್ತು. ಖುರಾನ್‍ನಲ್ಲಿನ ಒಂದು ಅಂಶವನ್ನು ಉಲ್ಲೇಖಿಸಿ, ಮದುವೆಯ ಉದ್ಧೇಶಕ್ಕಾಗಿ ಮತಾಂತರವಾದರೆ ಅದು ಸ್ವೀಕೃತವಲ್ಲ ಎಂದು ಹೇಳಿತ್ತು. ಈ ಆದೇಶವನ್ನೇ ಮುಂದಿಟ್ಟುಕೊಂಡು ಉತ್ತರಪ್ರದೇಶ ಸರ್ಕಾರ ಹೊಸ ಕಾನೂನಿಗೆ ಮುಂದಾಗಿತ್ತು.