ಗದಗ: ಜಿಲ್ಲೆಯ ಪಡಿತರ ಫಲಾನುಭವಿಗಳು ನಿತ್ಯ ಪರದಾಡ್ತಿದ್ದಾರೆ. ಕಳೆದ 3 ತಿಂಗಳಿಂದ ಅನ್ನಭಾಗ್ಯ ಅಕ್ಕಿಗೆ ಕೊಕ್ಕೆ ಬಿದ್ದಿದ್ದು, ನ್ಯಾಯ ಬೆಲೆ ಅಂಗಡಿಯವರು ಅನ್ಯಾಯ ಮಾಡ್ತಿದ್ದಾರೆ. ಸರ್ವರ್ ಪ್ರಾಬ್ಲಮ್ ಎಂಬ ಹಾರಿಕೆಯ ಉತ್ತರ ಮಾತ್ರ ಸಿಗ್ತಿದೆ.
ಕಳೆದ 3 ತಿಂಗಳಿಂದ ರೇಷನ್ ನೀಡದೇ ನ್ಯಾಯಬೆಲೆ ಅಂಗಡಿಯವರು ಫಲಾನುಭವಿಗಳನ್ನು ಸತಾಯಿಸುತ್ತಿದ್ದಾರೆ. ಗದಗ ಜಿಲ್ಲೆಯ ಅನೇಕ ಕಡೆಗಳಲ್ಲಿ ಕಳೆದ 3 ತಿಂಗಳಿಂದ ಸರ್ವರ್ ಸಮಸ್ಯೆ ಎಂದೇಳಿ ಫಲಾನುಭವಿಗಳಿಗೆ ನಾಳೆ ಬಾ, ನಾಡಿದ್ದು ಬಾ ಅಂತ ಮರಳಿ ಕಳಿಸುತ್ತಿದ್ದಾರೆ ಎಂದು ಫಲಾನುಭವಿ ಬಸವರಾಜ್ ಅರೋಪಿಸಿದ್ದಾರೆ.
Advertisement
Advertisement
ಸರ್ವರ್ ನೆಪದಲ್ಲಿ ಬಡವರ ಅನ್ನಕ್ಕೆ ಕನ್ನ ಹಾಕಲಾಗ್ತಿದೆ ಅಂತ ಅಕ್ಕಿ ಫಲಾನುಭವಿಗಳಿಗೆ ನೀಡದೇ ಕಾಳಸಂತೆಯಲ್ಲಿ ಮಾರಾಟವಾಗುತ್ತೆ ಎಂಬ ಆರೋಪ ಕೇಳಿಬರುತ್ತಿದೆ. ಸರ್ವರ್ ಸಮಸ್ಯೆ ಇರೋದು ನಿಜ. ಈ ವಿಷಯ ಸರ್ಕಾರಕ್ಕೆ ಹಾಗೂ ಸಂಬಂಧಿಸಿದ ಮೇಲಾಧಿಕಾರಿಗಳಿಗೂ ತಿಳಿಸಿದ್ದೇವೆ ಎಂದು ಸಿಟಿ ಆಹಾರ ಸರಬರಾಜು ಇಲಾಖೆ ಅಧಿಕಾರಿ ಎಸ್. ಹಿರೇಮಠ್ ಹೇಳುತ್ತಾರೆ.
Advertisement
ಒಟ್ಟಿನಲ್ಲಿ ಗದಗ ಜಿಲ್ಲೆಯ ಪಡಿತರಚೀಟಿ ಫಲಾನುಭವಿಗಳು ಅನ್ನಭಾಗ್ಯದ ಅಕ್ಕಿಗಾಗಿ ಹಗಲು-ರಾತ್ರಿ ಪರಿತಪಿಸಬೇಕಾಗಿದೆ. ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿ ಎಂದು ಫಲಾನುಭವಿಗಳು ಮನವಿ ಮಾಡಿಕೊಳುತ್ತಿದ್ದಾರೆ.