ಗದಗ: ನೆರೆ ಸಂತ್ರಸ್ತರಿಗೆ ಪೊಲೀಸರು ಲಾಠಿ ಚಾರ್ಜ್ ಮಾಡಿದ ಘಟನೆಯೊಂದು ಗದಗದಲ್ಲಿ ನಡೆದಿದೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆಯ ಬಳಿಕ ಇಂದು ಗದಗದ ಕೊಣ್ಣೂರಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಆಗಮಿಸಿದ್ದರು. ಪ್ರಾಕೃತಿಕ ವಿಕೋಪದಿಂದಾದ ಪ್ರದೇಶಗಳನ್ನು ವೀಕ್ಷಿಸಿ, ಸಿಎಂ ಅವರು ತೆರಳುತ್ತಿದ್ದಂತೆಯೇ ಸಂತ್ರಸ್ತರು ಅವರ ಕಾರಿನ ಬಳಿ ಬಂದು ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಈ ವೇಳೆ ಪೊಲೀಸರು ಸಂತ್ರಸ್ತರ ಮೇಲೆ ಲಾಠಿ ಚಾರ್ಜ್ ಮಾಡುವ ಮೂಲಕ ಕ್ರೌರ್ಯ ಮೆರೆದಿದ್ದಾರೆ.
4 ದಿನದಿಂದ ಮನೆ ಮಠ ಕಳೆದುಕೊಂಡು ಜನ ತತ್ತರಿಸಿ ಹೋಗಿದ್ದು, ಮಾನವೀಯತೆ ತೋರಬೇಕಾದ ಪೊಲೀಸರು ಮುಖ್ಯಮಂತ್ರಿಗಳ ಎದುರಲ್ಲೇ ಈ ರೀತಿ ವರ್ತನೆ ತೋರಿರುವುದು ವಿಷಾದನೀಯವಾಗಿದೆ. ಪೊಲೀಸರ ಈ ವರ್ತನೆ ಇದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಪ್ರವಾಹದಿಂದ ಕಂಗೆಟ್ಟಿದ್ದ ಜನರ ಮೇಲೆ ಲಾಠಿ ಚಾರ್ಜ್ ಮಾಡಿರುವುದು ಇದೇನಾ ನಿಮ್ಮ ಜನಮೆಚ್ಚಿದ ಆಡಳಿತ ಎಂದು ಜನ ಪ್ರಶ್ನಿಸಿ ಆಕ್ರೋಶ ಹೊರಹಾಕಿದ್ದಾರೆ.