ಗದಗ: ಕೊರೊನಾ ವೈರಸ್ ತಡೆಗೆ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಗದಗ ಜಿಲ್ಲೆಯಲ್ಲಿ ಬಡವರು ಆಹಾರಕ್ಕಾಗಿ ಪರದಾಡುತ್ತಿರುವುದು ಬೆಳಕಿಗೆ ಬಂದಿದೆ.
Advertisement
ಗದಗನ ಹೊಂಬಳ ನಾಕಾ ಜನತಾ ಕಾಲೋನಿ ಜನ ಆಹಾರಕ್ಕಾಗಿ ಗೋಳಾಡುತ್ತಿದ್ದಾರೆ. ಜಿಲ್ಲಾಧಿಕಾರಿ, ನಗರಸಭೆ ಅಧಿಕಾರಿಗಳಿಗೆ ಕೈಮುಗಿದು ಪರಿ ಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ. ಉಚಿತ ಹಾಲು ಇಲ್ಲ, ದಿನಸಿ, ಪಡಿತರ ಧಾನ್ಯವೂ ನೀಡಿಲ್ಲ ಅಂತ ವಿಡಿಯೋ ಮಾಡುವ ಮೂಲಕ ತಮ್ಮ ಅಳಲು ತೋಡಿಕೊಂಡಿದ್ದಾರೆ.
Advertisement
Advertisement
ಲಾಕ್ ಡೌನ್ ಗೆ ನಮ್ಮ ಬೆಂಬಲವಿದೆ. ಆದರೆ ನಮ್ಮ ಹೊಟ್ಟೆಗೂ ಏನಾದ್ರೂ ಕೊಡಿ ಎಂದು ಊಟ, ಉಪಹಾರಕ್ಕಾಗಿ ಮಕ್ಕಳು, ವೃದ್ಧರು, ಮಹಿಳೆಯರ ಪರದಾಡುತ್ತಿದ್ದಾರೆ. ಅಲ್ಲದೆ ಈ ಬಗ್ಗೆ ತಾವೇ ವಿಡಿಯೋ ಮಾಡಿ ಅಧಿಕಾರಿಗಳಿಗೆ ಕಳುಹಿಸಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement