ಎಳ್ಳು ಅಮಾವಾಸ್ಯೆ – ಭೂತಾಯಿಗೆ ಪೂಜೆ ಸಲ್ಲಿಸಿ ಪುನೀತರಾದ ರೈತರು

Public TV
1 Min Read
Ellu Amavasya Farmers feel blessed after worshipping Earth Gadag 2

ಗದಗ: ಉತ್ತರ ಕರ್ನಾಟಕದಲ್ಲಿ (North Karnataka) ಎಳ್ಳು ಅಮಾವಾಸ್ಯೆ (Ellu Amavasya) ಬಂದರೆ ಸಾಕು, ರೈತರಿಗೆ ಸಂಭ್ರಮ. ಗದಗ ಜಿಲ್ಲೆ ಅನೇಕ ಭಾಗದಲ್ಲಿ ಎಳ್ಳು ಅಮಾವಾಸ್ಯೆಯನ್ನು ಭೂಮಿಪೂಜೆ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ವರ್ಷವಿಡಿ ಮಣ್ಣಿನಲ್ಲಿ ಬೆವರು ಸುರಿಸಿದ ಮಣ್ಣಿನ ಮಕ್ಕಳು (Farmers) ಭೂತಾಯಿಗೆ ಪೂಜೆ ಸಲ್ಲಿಸಿ ಪುನೀತರಾಗುವ ಹಬ್ಬವಿದು.

Ellu Amavasya Farmers feel blessed after worshipping Earth Gadag 1

ಅನ್ನ ನೀಡುವ ಭೂತಾಯಿಗೆ ಸಿಮಂತ ಮಾಡಿ ಊಣಬಡಿಸುವ ಸಂತಸದ ದಿನ. ಎತ್ತುಗಳಿಗೆ ಅಲಂಕರಿಸಿ ಚಕ್ಕಡಿ ಸಿದ್ಧಪಡಿಸಿ ಸಾಲು ಸಾಲಾಗಿ ಹೋಗುವುದನ್ನು ನೋಡುವುದೇ ಚೆಂದ. ಇದನ್ನೂ ಓದಿ: ನಾಲ್ಕು ತಲೆಬುರುಡೆ, ಸುಟ್ಟ ಕೂದಲು, ಎಲುಬಿಟ್ಟು ಪೂಜೆ

ಬನ್ನಿ ಮರಕ್ಕೆ ಸೀರೆ ತೊಡಿಸಿ ಉಡಿತುಂಬಿ, ಕೈಗೆ ಕಂಕಣ ಕಟ್ಟಿ ಹಾಗೂ 5 ಕಲ್ಲುಗಳನಿಟ್ಟು ಪಂಚಪಾಂಡವರೆಂದು ಪೂಜೆ ಮಾಡುತ್ತಾರೆ. ನೈವೆದ್ಯದ ಮೂಲಕ ಪೂಜೆ ಮಾಡಿ ಹುಲ್ಲಲಿಗೂ… ಸುರಾಂಬ್ಲಿಗೋ ಅಂತ ಸಿಹಿ ತಿನಿಸುಗಳನ್ನು ಸುತ್ತ ಎರಚಿ ಮಳೆ ಬೆಳೆ ಚನ್ನಾಗಿ ಆಗಲೆಂದು ಭಕ್ತಿಯಿಂದ ಬೇಡಿಕೊಳ್ಳುತ್ತಾರೆ ರೈತರು.

Ellu Amavasya Farmers feel blessed after worshipping Earth Gadag 2

ಈ ಹಬ್ಬಕ್ಕೆ ಸಜ್ಜೆ ರೋಟ್ಟಿ, ಜೋಳದ ರೋಟ್ಟಿ, ಎಳ್ಳು ಹೋಳಿಗೆ, ಶೇಂಗಾ ಹೋಳಿಗೆ, ಕರಿಗಡಬು, ಕರ್ಚಿಕಾಯಿ, ಬಜ್ಜಿ, ವಿವಿಧ ಬಗೆಯ ಚಟ್ನಿ ತಂದು ಎಲ್ಲರೂ ಒಟ್ಟಿಗೆ ಪೂಜೆಮಾಡಿ. ಊಟಮಾಡಿ ಸಂಭ್ರಮಿಸುತ್ತಾರೆ.

 

Share This Article