ಮುಂಬೈನಿಂದ ಗದಗ ನಗರಕ್ಕೆ ತರುತ್ತಿದ್ದ 4 ಕೆಜಿ ಬಂಗಾರ ಸೀಜ್

Public TV
1 Min Read
Gold Seized

ಗದಗ: ಚುನಾವಣೆ (Election) ಹೊತ್ತಿನಲ್ಲಿ ಗದಗ ಜಿಲ್ಲಾ ಪೊಲೀಸರು (Gadag District Police) ಭರ್ಜರಿ ಕಾರ್ಯಾಚರಣೆಗೆ ಇಳಿದಿದ್ದು, ಚಿನ್ನದ ಬೇಟೆಯಾಡಿದ್ದಾರೆ. ಮುಂಬೈನಿಂದ (Mumbai) ಗದಗ ನಗರಕ್ಕೆ ತರುತ್ತಿದ್ದ 4 ಕೆಜಿ ತೂಕದ ಚಿನ್ನಾಭರಣಗಳನ್ನು ನಗರದ ಹೊರವಲಯದ ಚೆಕ್‌ಪೋಸ್ಟ್ ನಲ್ಲಿ ಪೊಲೀಸರು ಜಪ್ತಿ ಮಾಡಿದ್ದಾರೆ.

ಜಿಲ್ಲಾಧಿಕಾರಿ ಎಮ್.ಎಲ್ ವೈಶಾಲಿ, ಎಸ್ಪಿ ಬಿ.ಎಸ್ ನೇಮಗೌಡ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದ್ದು, ಸೂಕ್ತ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ ಚಿನ್ನಾಭರಣಗಳನ್ನ ವಶಕ್ಕೆ (Gold Seized) ಪಡೆಯಲಾಗಿದೆ. ಇದನ್ನೂ ಓದಿ: ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ನಂತೆ ಅಮೆರಿಕದ 186 ಬ್ಯಾಂಕ್‌ಗಳು ಅಪಾಯದಲ್ಲಿ – ಅಧ್ಯಯನ

CheckPost

ಮಹಿಪಾಲ್ ಜೈನ್, ಅಭಿಷೇಕ್ ಜೈನ್ ಎಂಬವರಿಗೆ ಸೇರಿದ ಚಿನ್ನಾಭರಣಗಳು ಇದಾಗಿದ್ದು, ಸುಮಾರು 1.75 ಕೋಟಿ ರೂ. ಮೌಲ್ಯದ್ದಾಗಿದೆ. ಸದ್ಯ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಚನ್ನಪಟ್ಟಣ ಬಿಟ್ಟು ಬೇರೆ ಕಡೆ ಸ್ಪರ್ಧಿಸಲ್ಲ: ಹೆಚ್‍ಡಿಕೆ

Gold Seized 1

ಮಂಗಳವಾರ ಬೆಳಗ್ಗೆಯಷ್ಟೇ ಅಕ್ರಮವಾಗಿ ಸಾಗಿಸುತ್ತಿದ್ದ 24.50 ಲಕ್ಷ ರೂ. ಹಣವನ್ನು ಮುಳಗುಂದದ ಬಸಾಪೂರ ಬಳಿಯ ಚೆಕ್ ಪೋಸ್ಟ್ ನಲ್ಲಿ ಸೀಜ್ ಮಾಡಲಾಗಿತ್ತು. ಈ ಬೆನ್ನಲ್ಲೇ ಇದು 2ನೇ ದಾಳಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *