ವಿವಾಹಿತ ವ್ಯಕ್ತಿಯ ಶವ ಪತ್ತೆ – ಪತ್ನಿಯೇ ಕೊಲೆಗೈದು ಬಾವಿಗೆ ಹಾಕಿದ್ಳಾ?

Public TV
1 Min Read
Gadag Murder

ಗದಗ: ವಿವಾಹಿತ ವ್ಯಕ್ತಿಯ ಶವ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಗದಗ(Gadag) ಜಿಲ್ಲೆಯ ರೋಣ ತಾಲೂಕಿನ ಮುಗಳಿ ಗ್ರಾಮದಲ್ಲಿ ನಡೆದಿದ್ದು, ಪತ್ನಿ ಹಾಗೂ ಪ್ರಿಯಕರನ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ.

ರೋಣದ(Rona) ಹಕಾರಿ ಕಾಲೋನಿ ನಿವಾಸಿ ಶಂಕ್ರಪ್ಪ ಅಲಿಯಾಸ್ ಮುತ್ತು ಕೊಳ್ಳಿ(30) ಮೃತ ದುರ್ದೈವಿ. ಇದನ್ನೂ ಓದಿ: ವಿಚಾರಣೆ ಮುಗಿಸಿ ದರ್ಶನ್‌ ಕೈ ಹಿಡಿದುಕೊಂಡು ಹೊರ ಬಂದ ಪವಿತ್ರಾ ಗೌಡ

ಶಂಕ್ರಪ್ಪ ಪ್ರೀತಿಸಿ ಮದುವೆಯಾಗಿದ್ದರೂ, ಪತ್ನಿ ಬೇರೊಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಅಲ್ಲದೇ ಪತ್ನಿ, ಪ್ರಿಯಕರ ಶಿವಕುಮಾರ್‌ನೊಂದಿಗೆ ಸೇರಿ ಪತಿ ಶಂಕ್ರಪ್ಪನನ್ನು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಆಪರೇಷನ್ ಸಿಂಧೂರದ ಬಗ್ಗೆ ಟೀಕೆ ಮಾಡುವವರಿಗೆ ಗುಂಡು ಹೊಡಿಬೇಕು: ಕೆ.ಎಸ್ ಈಶ್ವರಪ್ಪ

ಹಂತಕರು ಕೊಲೆ ಮಾಡಿ ಬಟ್ಟೆಯಿಂದ ಕೈಕಾಲು ಕಟ್ಟಿ, ಮೃತದೇಹಕ್ಕೆ ಹಾಸಿಗೆ ಸುತ್ತಿ ಬಾವಿಗೆ ಬಿಸಾಕಿದ್ದಾರೆ. ಮಂಗಳವಾರ ಮುಂಜಾನೆ ಮುಗಳಿ ಗ್ರಾಮದ ಜಮೀನೊಂದರ ಬಾವಿಯಲ್ಲಿ ಶಂಕ್ರಪ್ಪನ ಶವ ಪತ್ತೆಯಾಗಿದೆ. ಇದನ್ನೂ ಓದಿ: ಭಾರತ ವಿರೋಧಿ ಚಟುವಟಿಕೆ – ಬ್ರಿಟಿಷ್‌ ಕಾಶ್ಮೀರಿ ಪ್ರೊಫೆಸರ್‌ ಸಾಗರೋತ್ತರ ಪೌರತ್ವ ರದ್ದು

ಸ್ಥಳಕ್ಕೆ ರೋಣ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ರೋಣ ಪೊಲೀಸ್ ಠಾಣೆಯಲ್ಲಿ(Rona Police Station) ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Share This Article