ಗದಗ: ಬಾಗಲಕೋಟೆ ಜಿಲ್ಲೆಯ ಡಾಣಕಶಿರೂರನಲ್ಲಿ ಪಿ-607ರ ಗರ್ಭಿಣಿ ಜೊತೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗದಗ ಜಿಲ್ಲೆ ಗಡಿ ಭಾಗದ ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಮಾಡುತ್ತಿದ್ದಾರೆ.
ರೋಣ ತಾಲೂಕಿನ ಹುನಗುಂಡಿ ಗ್ರಾಮಕ್ಕೆ ಯಾರೂ ಬರದಂತೆ ರಸ್ತೆ ಮಧ್ಯೆ ಗುಂಡಿ ತೆಗೆದು ಗ್ರಾಮಕ್ಕೆ ದಿಗ್ಭಂಧನ ಹಾಕಲಾಗಿದೆ. ಬದಾಮಿ ತಾಲೂಕಿನ ಡಾಣಕಶಿರೂರ ಗ್ರಾಮ ಹಾಗೂ ಗದಗ ಜಿಲ್ಲೆ ಹುನಗುಂಡಿ ಗ್ರಾಮಕ್ಕೆ ಕೇವಲ 5 ಕಿಲೋಮೀಟರ್ ಅಂತರವಿದೆ. ಆದ್ದರಿಂದ ಜನರ ಒಡನಾಟ ಹೆಚ್ಚಿದ್ದರಿಂದ ಈ ತೀರ್ಮಾನ ಮಾಡಲಾಗಿದೆ.
ಈ ಕಾರಣದಿಂದ ಈ ಕೊರೊನಾ ಸಂದರ್ಭದಲ್ಲಿ ಬದಾಮಿ ತಾಲೂಕಿನ ಜನರು ಬರದಂತೆ ಜಿಲ್ಲೆಯ ಹುನಗುಂಡಿ ಸಂಪರ್ಕಿಸುವ ಬಸರಕೋಡ, ಹೊಳೆಆಲೂರ, ನೈನಾಪೂರ, ಮಾಡಲಗೇರಿ ಸಂಪರ್ಕಿಸುವ ರಸ್ತೆ ಬಂದ್ ಮಾಡಲಾಗಿದೆ. ಬದಾಮಿ ತಾಲೂಕಿನ ಜನರು ಊರಿನ ಒಳಗೆ ಬರದಂತೆ, ಜೊತೆಗೆ ಈ ಹುನಗುಂಡಿ ಗ್ರಾಮಸ್ಥರು ಬದಾಮಿ ತಾಲೂಕಿಗೆ ಹೋಗದಂತೆ ನಿರ್ಬಂಧ ಹೇರಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಗ್ರಾಮದ ಯುವಕರು, ಹಿರಿಯರು ಒಟ್ಟಾಗಿ ರಸ್ತೆ ಬಂದ್ ಮಾಡಿ, ತಮ್ಮ ಊರಿಗೆ ಕೊರೊನಾ ಬರದಂತೆ ತಡೆಯಲು ಪಣತೊಟ್ಟಿದ್ದಾರೆ.