ನವದೆಹಲಿ: ಸನಾತನ ಧರ್ಮದಂಗಲ್ ನಡುವೆ ಶಿವಲಿಂಗ (Shivaling) ಫೈಟ್ ಕೂಡಾ ಶುರುವಾಗಿದೆ. ದೆಹಲಿಯಲ್ಲಿ ಜಿ20 ಶೃಂಗಸಭೆ (G20 Summit) ಪ್ರಯುಕ್ತ ಅಲಂಕಾರದ ಭಾಗವಾಗಿ ಶಿವಲಿಂಗ ಆಕಾರದ ಕಾರಂಜಿಗಳನ್ನು (Fountain) ದೆಹಲಿಯ 21ಕ್ಕೂ ಹೆಚ್ಚು ಕಡೆ ಸ್ಥಾಪನೆ ಮಾಡಲಾಗಿದೆ. ಇದಕ್ಕೆ ದೆಹಲಿ ಆಡಳಿತ ಪಕ್ಷ ಆಮ್ ಆದ್ಮಿ ಪಾರ್ಟಿ (AAP) ತಕರಾರು ತೆಗೆದಿದೆ.
ಶಿವಲಿಂಗವನ್ನು ಅಲಂಕಾರದ ವಸ್ತುವಾಗಿ ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ಆಪ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೆನಾ ವಿರುದ್ಧ ದೂರು ನೀಡಿದೆ. ಇದು ಶಿವಲಿಂಗಕ್ಕೆ ಮಾಡಿದ ಅವಮಾನ, ಈ ಮೂಲಕ ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದೆ.
ಆದರೆ ಈ ಆರೋಪಗಳನ್ನು ಬಿಜೆಪಿ (BJP) ತಳ್ಳಿಹಾಕಿದೆ. ಪ್ರತಿಯೊಂದು ವಿಚಾರವನ್ನು ರಾಜಕೀಯ ಮಾಡಲಾಗುತ್ತಿದೆ ಎಂದು ತಿರುಗೇಟು ನೀಡಿದೆ. ಇದನ್ನೂ ಓದಿ: ಇಂಡಿಯಾ ಹೆಸರಿನ ಮೇಲೆ ಪಾಕಿಸ್ತಾನ ಹಕ್ಕು ಸಾಧಿಸುತ್ತಾ?
ಶಿವಲಿಂಗದ ಬಳಿ ಕೈ ತೊಳೆದ ಸಚಿವ:
ಈ ನಡುವೆ ದೇಗುಲವೊಂದರಲ್ಲಿ ಶಿವಲಿಂಗದ ಪಕ್ಕದಲ್ಲೇ ಉತ್ತರ ಪ್ರದೇಶದ ಸಚಿವ ಸತೀಶ್ ಶರ್ಮಾ ಕೈತೊಳೆಯತ್ತಿರುವ ವೀಡಿಯೋ ಹಂಚಿಕೊಂಡ ರಾಜ್ಯ ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ. ದೇವಾಲಯವನ್ನು, ದೇವರ ಸನ್ನಿಧಾನವನ್ನು ಬಿಜೆಪಿಗರು ಬಚ್ಚಲು ಮಾಡಿಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದೆ. ಇಂದು ಕೈತೊಳೆದವರು, ಮುಂದೆ ದೇವರ ಗುಡಿಯಲ್ಲಿ ಸ್ನಾನ ಮಾಡಿದರೂ ಅಚ್ಚರಿ ಇಲ್ಲ. ಇದು ಬಿಜೆಪಿಗರ ಅಸಲಿ ಧರ್ಮ ಎಂದು ಕಿಡಿಕಾರಿದೆ. ಇದನ್ನೂ ಓದಿ: ಧಾರ್ಮಿಕ ಮತಾಂತರಗಳನ್ನು ತಡೆಯಲು ಕೇಂದ್ರಕ್ಕೆ ನಿರ್ದೇಶನ ನೀಡಿ – ಪಿಐಎಲ್ ವಜಾ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]