ಮೈಸೂರು: ಮೈಸೂರು ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡರು ತಾವು ಕೇವಲ ರಾಜಕಾರಣಿ ಮಾತ್ರವಲ್ಲ ಒಳ್ಳೆಯ ಗಾಯಕರು ಕೂಡ ಹೌದು ಎಂದು ತಮ್ಮಲ್ಲಿ ಅಡಗಿದ್ದ ಹಾಡುಗಾರಿಕೆಯ ನೈಪುಣ್ಯತೆಯನ್ನು ಪ್ರದರ್ಶಿಸಿದ್ದಾರೆ.
ಶನಿವಾರ ಮೈಸೂರಿನ ಕಲಾಮಂದಿರದಲ್ಲಿ `ಧರೆಗೆ ದೊಡ್ಡವರು’ ಮಾದೇಶ್ವರ ಹಾಗೂ ಮಂಟೇಸ್ವಾಮಿ ಕಾವ್ಯಗಳ ಅಹೋರಾತ್ರಿ ಕಥಾ ಗಾಯನ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ತಾವೇ ಖುದ್ದಾಗಿ ಹಾಡು ಹೇಳುವ ಮೂಲಕ ಜಿ.ಟಿ ದೇವೇಗೌಡರು ಉದ್ಘಾಟಿಸಿದ್ದಾರೆ. `ಗುರುಮೂರ್ತಿ ಗುರುವಾಗಿ ಅರವಿನೋಳ್ ಅರಿವಾಗಿ’ ಎಂಬ ಜಾನಪದ ಶೈಲಿಯ ಗೀತೆಯನ್ನು ಹಾಡುವ ಮೂಲಕ ತಾವೂ ಸಹ ಒಳ್ಳೆಯ ಗಾಯಕನೆಂದು ನಿರೂಪಿಸಿದ್ದಾರೆ.
Advertisement
Advertisement
ಕಳೆದ ದಸರಾ ವೇಳೆ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ತಾವೊಬ್ಬ ಕ್ರೀಡಾಪಟು ಎಂದು ನಿರೂಪಿಸಿದ್ದರು. ಈಗ ಹಾಡು ಹೇಳುವ ಮೂಲಕ ತಮ್ಮಲ್ಲೂ ಕಲಾವಿದನಿದ್ದಾನೆ, ತಾವು ಕೇವಲ ರಾಜಕೀಯ ಪಟುಗಳನ್ನು ಕರಗತ ಮಾಡಿಕೊಂಡು ಎದುರಾಳಿಗಳಿಗೆ ಮಣ್ಣುಮುಕ್ಕಿಸುವ ಕಲೆ ರೂಢಿಸಿಕೊಂಡಿರುವ ರಾಜಕಾರಣಿ ಮಾತ್ರವಲ್ಲ ಒಳ್ಳೆಯ ಗಾಯಕ ಹಾಗೂ ಕ್ರೀಡಾಪಟು ಎಂಬುದನ್ನು ಸಾಬೀತು ಪಡಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews