ಮೈಸೂರು: (Mysuru) ಅಂತೂ ಇಂತು ಕೊನೆಗೂ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರ (G.T.Deve Gowda) ಮುಂದಿನ ರಾಜಕೀಯ ನಡೆ ನಿರ್ಧಾರವಾಗಿದೆ. ಜೆಡಿಎಸ್ (JDS) ವರಿಷ್ಠರ ಸಂಧಾನ ಫಲಪ್ರದವಾಗಿದ್ದು ತಾನು ಮಾತ್ರವಲ್ಲಾ ಇಡೀ ಕುಟುಂಬ ಜೆಡಿಎಸ್‌ಗೆ ದುಡಿಯುದಾಗಿ ಜಿ.ಟಿ.ದೇವೇಗೌಡ ಘೋಷಿಸಿದ್ದಾರೆ.
ದೊಡ್ಡಗೌಡ್ರು ಭಾವನಾತ್ಮಕವಾಗಿ ಮಾತನಾಡಿದರು. ಚಿಕ್ಕ ಗೌಡ್ರು ಗದ್ಗದಿತರಾದರು. ಮೈಸೂರಿನ ವಿವಿ ಮೊಹಲ್ಲಾದ ಜಿ.ಡಿ.ದೇವೇಗೌಡರ ನಿವಾಸ ಈ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯ್ತು. ಕಳೆದ ಮೂರು ವರ್ಷಗಳಿಂದ ಜೆಡಿಎಸ್ ಪಕ್ಷ ಚಟುವಟಿಕೆಗಳಿಂದ ದೂರವಿದ್ದ ಜಿ.ಟಿ.ದೇವೇಗೌಡರ ಮನವೊಲಿಸಲು ಖುದ್ದು ಹೆಚ್.ಡಿ.ದೇವೇಗೌಡರೇ (H.D.Deve Gowda) ಬಂದಿದ್ದರು. ಹೆಚ್.ಡಿ.ದೇವೇಗೌಡರ ಜೊತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy), ಮಾಜಿ ಸಚಿವ ಸಾ.ರಾ.ಮಹೇಶ್ (Sa.Ra.Mahesh), ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ (C.M.Ibrahim) ಈ ವೇಳೆ ದೇವೇಗೌಡರ ಜೊತೆ ಇದ್ದರು. ಇದನ್ನೂ ಓದಿ: ಜೆಡಿಎಸ್‍ನಲ್ಲೇ ಉಳೀತಾರಾ ಜಿ.ಟಿ. ದೇವೇಗೌಡ? – ಗುರುವಾರ ಹೆಚ್‌ಡಿಡಿ ಭೇಟಿ
ಜೆಡಿಎಸ್ ನಾಯಕರ ದಂಡೇ ಜಿ.ಟಿ.ದೇವೇಗೌಡರ ಮನೆಗೆ ಬಂದ ಕಾರಣ ಜಿಟಿಡಿ ಮನೆ ಇವತ್ತಿನ ಮಟ್ಟಿಗೆ ರಾಜಕೀಯ ಶಕ್ತಿ ಕೇಂದ್ರವಾಗಿತ್ತು. ಹೆಚ್ಚು ಕಡಿಮೆ ನಾಲ್ಕೈದು ತಾಸು ಎಲ್ಲಾ ದಳಪತಿಗಳು ಜಿಟಿಡಿ ಮನೆಯಲ್ಲಿ ಕುಳಿತು, ಜಿಟಿಡಿ ಕುಟುಂಬದ ಜೊತೆ ಮಾತನಾಡಿ ಅಲ್ಲೇ ಊಟ ಮಾಡಿ ಮುನಿಸು ಮರೆತು ಒಂದಾದರು.
ಹೆಚ್.ಡಿ.ದೇವೇಗೌಡರು ಶಾಸಕ ಜಿ.ಟಿ.ದೇವೇಗೌಡ, ಪತ್ನಿ ಲಲಿತಾ ಹಾಗೂ ಪುತ್ರ ಹರೀಶ್ ಗೌಡ ಜೊತೆ ಮಾತುಕತೆ ನಡೆಸಿ ಮನವೊಲಿಸವಲ್ಲಿ ಯಶಸ್ವಿಯಾದರು. ದೇವೇಗೌಡರ ಭೇಟಿ ಶಾಸಕ ಜಿ.ಟಿ.ದೇವೇಗೌಡರನ್ನ ಭಾವುಕರಾನ್ನಗಿಸಿತ್ತು. ಗದ್ಗತಿತರಾಗಿ ಮಾತನಾಡಿದ ಜಿ.ಟಿ.ದೇವೇಗೌಡ, ನಾನು ಮಾತ್ರವಲ್ಲ ಇಡೀ ನನ್ನ ಕುಟುಂಬ ಜೆಡಿಎಸ್‌ಗಾಗಿ ದುಡಿಯುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ನ.1ರಂದು ನಟ ಪುನೀತ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ: ಸಿಎಂ ಬೊಮ್ಮಾಯಿ
ಹೆಚ್.ಡಿ.ಕುಮಾರಸ್ವಾಮಿ ಸಹ ಜಿ.ಟಿ.ದೇವೇಗೌಡ, ಹರೀಶ್ ಗೌಡ ಜೊತೆ ಆತ್ಮೀಯವಾಗಿ ಮಾತನಾಡಿದರು. ಈ ವೇಳೆ ನೂರಾರು ಕಾರ್ಯಕರ್ತರು ಜಿಟಿಡಿ ಮನೆಯಲ್ಲಿ ಹಾಜರಿದ್ದರು. ಭೇಟಿ ಬಳಿಕ ಮಾತನಾಡಿದ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಮುಂದೆ ಮೈಸೂರು ಜಿಲ್ಲೆಯ ಜೆಡಿಎಸ್ ನಾಯಕತ್ವವನ್ನ ಜಿ.ಟಿ.ದೇವೇಗೌಡರೇ ವಹಿಸಲಿದ್ದಾರೆ ಎಂದು ಘೋಷಿಸಿದರು. ಅಷ್ಟೇ ಅಲ್ಲ ಮುಂದಿನ ಮೈಸೂರು ಜಿಲ್ಲೆಯ ರಾಜಕೀಯ ತೀರ್ಮಾನಗಳನ್ನ ಜಿಟಿಡಿ ತೆಗೆದುಕೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಈ ಮೂಲಕ ಜಿ.ಟಿ.ದೇವೇಗೌಡರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಜಿ.ಟಿ.ದೇವೇಗೌಡ ಅವರು ಕಾಂಗ್ರೆಸ್‌ಗೆ ಹೋಗ್ತಾರಾ ಅಥವಾ ಬಿಜೆಪಿಗೆ ಹೋಗ್ತಾರಾ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ ಹಾಗೂ ಬಿಜೆಪಿಯಿಂದ ಕೆಲ ನಾಯಕರು ಜಿಟಿಡಿ ಜೊತೆ ಮಾತನಾಡಿ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ಇದೀಗ ಜೆಡಿಎಸ್‌ನಲ್ಲೇ ಉಳಿಯಲು ನಿರ್ಧರಿಸಿರುವ ಜಿ.ಟಿ.ದೇವೇಗೌಡ ಅವರು ಸಿದ್ದರಾಮಯ್ಯ ಹಾಗೂ ಬಿಜೆಪಿ ನಾಯಕರಿಗೆ ಕ್ಷಮೆಯಾಚಿಸಿದ್ದಾರೆ.
ಮೈಸೂರಿನಿಂದ ಪಕ್ಷ ಸಂಘಟನೆ ಆರಂಭಿಸಿದ ಜೆಡಿಎಸ್‌ಗೆ ಜಿಟಿಡಿ ರೀ ಎಂಟ್ರಿಯಿಂದ ಆನೆ ಬಲ ಸಿಕ್ಕಂತಾಗಿದೆ. ಇದು ಮೈಸೂರು ಭಾಗದಲ್ಲಿ ಮುಂದಿನ ದಿನಗಳಲ್ಲಿ ಯಾವೆಲ್ಲಾ ರಾಜಕಾರಣ ಬದಲಾವಣೆಗೆ ಕಾರಣವಾಗುತ್ತೆ ಕಾದು ನೋಡಬೇಕಿದೆ.