ನವದೆಹಲಿ: ಭಾರೀ ಗದ್ದಲದ ನಡುವೆ ಲೋಕಸಭೆಯಲ್ಲಿ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (ವಿಬಿ-ಜಿ RAM ಜಿ) ಮಸೂದೆ, 2025 ಅನ್ನು (G Ram G Bill) ಅಂಗೀಕರಿಸಲಾಯಿತು.
ಇದರಿಂದ ಕೋಪಗೊಂಡ ವಿಪಕ್ಷ ಸಂಸದರು, ಕೇಂದ್ರ ಸರ್ಕಾರ ರಾಷ್ಟ್ರಪಿತನನ್ನ ಅವಮಾನಿಸಿದೆ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ (MGNAREGA) ನಿಬಂಧನೆಗಳನ್ನು ದುರ್ಬಲಗೊಳಿಸಿದೆ ಎಂದು ಆಕ್ರೋಶ ಹೊರಹಾಕಿ ಪ್ರತಿಭಟನೆ ನಡೆಸಿದವು. ಈ ಆರೋಪಗಳ ನಡುವೆ ಸರ್ಕಾರ ಹೊಸ ಮಸೂದೆಯನ್ನ ಸಮರ್ಥಿಸಿಕೊಂಡಿತು. ಇದನ್ನೂ ಓದಿ: ಭಾರತೀಯ ಪೌರತ್ವ ತ್ಯಜಿಸುವವರ ಸಂಖ್ಯೆಯಲ್ಲಿ ಹೆಚ್ಚಳ

ಸದನದಲ್ಲಿ ಮಾತನಾಡಿದ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan), 2009ರ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಮಹಾತ್ಮ ಗಾಂಧಿಯವರ ಹೆಸರನ್ನು ನರೇಗಾಗೆ ಸೇರಿಸಲಾಗಿದೆ ಎಂದು ತಿರುಗೇಟು ನೀಡಿದರು. ಆರಂಭದಲ್ಲಿ ಅದು ನರೇಗಾ ಆಗಿತ್ತು, ಮಹಾತ್ಮ ಗಾಂಧಿಯವರ ಹೆಸರನ್ನ ಮಸೂದೆಯಲ್ಲಿ ಸೇರಿಸಿರಲಿಲ್ಲ. 2009ರ ಚುನಾವಣೆ ಹತ್ತಿರ ಬಂದಾಗ ಮತಗಳನ್ನ ಪಡೆಯಲು ಕಾಂಗ್ರೆಸ್ ಬಾಪು ಅವರನ್ನ ನೆನಪಿಸಿಕೊಂಡಿತು. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಎಂಜಿಎನ್‌ಇಜಿಎ ಅನ್ನು ಸರಿಯಾಗಿ ಮತ್ತು ಬಲವಾಗಿ ಜಾರಿಗೆ ತಂದರು ಎಂದು ನಾನು ಹೇಳಲು ಬಯಸುತ್ತೇನೆ ಎಂದು ಪ್ರತಿಪಾದಿಸಿದರು.
ಬಾಪು ಆದರ್ಶಗಳನ್ನ ಕೊಂದಿದ್ದು ಕಾಂಗ್ರೆಸ್
ಕಾಂಗ್ರೆಸ್ ಬಾಪು ಅವರ ಆದರ್ಶಗಳನ್ನ ಹತ್ಯೆ ಮಾಡಿತು. ಆದ್ರೆ ಎನ್‌ಡಿಎ ಪ್ರಧಾನ ಮಂತ್ರಿ ಆವಾಸ್ ಯೋಜನೆ, ಉಜ್ವಲ ಯೋಜನೆ, ಸ್ವಚ್ಛ ಭಾರತ ಮಿಷನ್, ಆಯುಷ್ಮಾನ್ ಭಾರತ್ ಅಡಿಯಲ್ಲಿ ಪಕ್ಕಾ ಮನೆಗಳನ್ನ ನಿರ್ಮಿಸಿ ಬಾಪು ಅವರ ಆದರ್ಶಗಳನ್ನ ಪುನರುಜ್ಜೀವನಗೊಳಿಸಿತು ಎಂದು ಹೇಳುತ್ತಾ, ದಿ ಸರ್ಕಾರವು ಜವಾಹರಲಾಲ್ ನೆಹರು ಮತ್ತು ಮಹಾತ್ಮಾ ಗಾಂಧಿಯವರ ಹೆಸರಿನ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನ ಪಟ್ಟಿ ಮಾಡಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರ ಟೀಕೆಗೆ ತಿರುಗೇಟು ನೀಡಿದರು.

ಸದನದ ಬಾವಿಗಿಳಿದು ಪ್ರತಿಭಟನೆ
ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕಿದ್ದಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಪ್ರತಿಪಕ್ಷದ ಶಾಸಕರು ಸದನದ ಬಾವಿಗಿಳಿದು, ಮಸೂದೆಯ ಪ್ರತಿಗಳನ್ನ ಹರಿದು ಸ್ಪೀಕರ್ ಕುರ್ಚಿಯ ಕಡೆಗೆ ಎಸೆದರು. ಮಸೂದೆ ಅಂಗೀಕಾರವಾದ ನಂತರ ಸ್ಪೀಕರ್ ಓಂ ಬಿರ್ಲಾ ಕಲಾಪವನ್ನ ದಿನದ ಮಟ್ಟಿಗೆ ಮುಂದೂಡಿದರು. ಇದನ್ನೂ ಓದಿ: 2026ರ ಅಂತ್ಯಕ್ಕೆ ದೇಶಾದ್ಯಂತ ಉಪಗ್ರಹ ಆಧಾರಿತ ಟೋಲ್: ಗಡ್ಕರಿ ಘೋಷಣೆ
ಗಾಂಧಿಗೆ ಮಾಡಿದ ಅಪಮಾನ; ಖರ್ಗೆ ಟೀಕೆ
ಇದಕ್ಕೂ ಮುನ್ನ, ಮಸೂದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಸಂಕೀರ್ಣದೊಳಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಈ ಶಾಸನ ಗಾಂಧಿಯವರಿಗೆ ಮಾಡಿದ ಅವಮಾನ ಮತ್ತು ಗ್ರಾಮೀಣ ಭಾರತದಲ್ಲಿ ಸಾಮಾಜಿಕ-ಆರ್ಥಿಕ ಪರಿವರ್ತನೆಗೆ ಕಾರಣವಾದ ಕೆಲಸ ಮಾಡುವ ಹಕ್ಕಿಗೆ ಒಂದು ಹೊಡೆತ ಎಂದು ಕರೆದರು. ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರು ಮಕರ ದ್ವಾರದಲ್ಲಿ ನಡೆದ ಪ್ರದರ್ಶನಗಳಲ್ಲಿ ಸಂಸದರೊಂದಿಗೆ ಭಾಗಿಯಾಗಿದ್ದರು. ಇದನ್ನೂ ಓದಿ: ಲ್ಯಾಂಡಿಂಗ್ ಗೇರ್ ಸಮಸ್ಯೆ, ಟೈರ್ ಸ್ಫೋಟ – ಕೊಚ್ಚಿಯಲ್ಲಿ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

