ನೆಲಮಂಗಲ: ಹಾಲಿನ ದರ ಏರಿಕೆಗೆ ಪಟ್ಟು ಇಲ್ಲದಿದ್ದಲ್ಲಿ ಪಂಜಾಬ್ ರೀತಿ ಹೋರಾಟದ ಹಾದಿ ತುಳಿಯುವ ದಿನ ಹತ್ತಿರಲ್ಲೆ ಇದೇ ಎಂದು ಬಮೂಲ್ ಶಿಬಿರದ ನಿದೇರ್ಶಕ ಜಿ.ಆರ್. ಭಾಸ್ಕರ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
Advertisement
ಈ ಕುರಿತು ಕಾಸರಘಟ್ಟದಲ್ಲಿ 183ನೇ ತಾಲೂಕಿನ ನೂತನ ಸಂಘಕ್ಕೆ ಚಾಲನೆ ನೀಡಿ ವೇದಿಕೆಯಲ್ಲಿ ಮಾತನಾಡಿದ ಅವರು, ಹೈನುಗಾರಿಕೆ ಅವಲಂಬಿಸಿರುವ ರೈತಾಪಿ ವರ್ಗದವರ ದೈನಂದಿನ ಜೀವನ ಇಂದು ಬಹಳ ಕಷ್ಟವಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಹಾಲಿನ ದರ ಹೆಚ್ಚಳವಾಗಿಲ್ಲ. ಇಂದು ಬೇರೆ-ಬೇರೆ ರಾಜ್ಯಗಳಲ್ಲಿ ಹಾಲಿನ ದರ ಹೆಚ್ಚಿದೆ. ನಮ್ಮ ರಾಜ್ಯದಲ್ಲಿ ಮೂರು ವರ್ಷಗಳಿಂದ ದರ ಏರಿಕೆಯಾಗಿಲ್ಲ. ಸರ್ಕಾರ ಕೂಡಲೇ ದರ ಹೆಚ್ಚಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ವಿಎಲ್‍ಸಿ ಮೀಡಿಯಾ ಪ್ಲೇಯರ್ ಬಳಸಿ ಚೀನಾ ಸೈಬರ್ ದಾಳಿ
Advertisement
Advertisement
ಹಾಲು ಉತ್ಪಾದಕರಿಗೆ ಯಾವುದೇ ಲಾಭಾಂಶ ಉಳಿಯುತ್ತಿಲ್ಲ. ಕಳೆದ ವರ್ಷ 56 ಕೋಟಿ ನಷ್ಟ ಸರಿದೂಗಿಸಿದ್ದೇವೆ. ಕೂಡಲೇ ದರ ಏರಿಕೆ ಮಾಡದಿದ್ದರೆ. ನಮ್ಮ ರಾಜ್ಯದ ರೈತರು ಪಂಜಾಬ್ ರೀತಿ ಹೋರಾಟದ ಹಾದಿ ತುಳಿಯುವ ದಿನ ಹತ್ತಿರದಲ್ಲೇ ಇದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 1,033 ಪಾಸಿಟಿವ್, 43 ಸಾವು