ಯಾದಗಿರಿ: ಮೈಕ್ರೋ ಫೈನಾನ್ಸ್‌ನಿಂದ ಕಿರುಕುಳ ಸಂಬಂಧ ಮೊನ್ನೆ ಅಷ್ಟೇ ಸಿಎಂ ಜೊತೆಗೆ ಮೀಟಿಂಗ್ ಮಾಡಿದ್ದೇವೆ. ಕಿರುಕುಳ ಸಂಬಂಧ ಯಾವುದೇ ದೂರು ಬಂದರೂ ಅಂಥವರನ್ನ ತಕ್ಷಣ ಹಿಡಿದು ಒಳಗೆ ಹಾಕುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ (G.Parameshwar) ಹೇಳಿದರು.
ಯಾದಗಿರಿಯಲ್ಲಿ (Yadagiri) ನಗರ ಠಾಣಾ ಉದ್ಘಾಟನೆ ಬಳಿಕ ಸಚಿವರು ಮಾತನಾಡಿ, ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಎಂಬ ಕಂಪನಿಗಳು ಹುಟ್ಟಿಕೊಂಡಿವೆ. ಐವತ್ತು ಲಕ್ಷ ರೂ. ಕೊಟ್ಟು ಗೂಂಡಾಗಳನ್ನು ಬಿಟ್ಟು ಗಲಾಟೆ ಮಾಡಿ, ಸಾಲ ತೆಗೆದುಕೊಂಡವರ ಮರ್ಯಾದೆಯನ್ನು ಹರಾಜು ಹಾಕುತ್ತಿದ್ದಾರೆ. ಮೊನ್ನೆ ಅಷ್ಟೇ ನಾವು ಸಿದ್ದರಾಮಯ್ಯ ಅವರು ಈ ಬಗ್ಗೆ ಮೀಟಿಂಗ್ ಮಾಡಿದ್ದೇವೆ. ಕಿರುಕುಳ ನೀಡುವ ಸಿಬ್ಬಂದಿಯನ್ನು ತಕ್ಷಣ ಹಿಡಿದು ಒಳಗೆ ಹಾಕುವಂತೆ ಪೊಲೀಸರಿಗೆ ಸೂಚನೆ ಕೊಟ್ಟಿದ್ದೇವೆ. ಹೊಸದಾಗಿ ಕಾನೂನು ಮಾಡುವ ಅವಶ್ಯಕತೆ ಇದ್ದರೆ ಅದನ್ನು ಮಾಡುತ್ತೇವೆ. ಸಾಲಗಾರರು ದೂರು ಕೊಟ್ಟರೆ ಕಂಪ್ಲೆಂಟ್ ತೆಗೆದುಕೊಳ್ಳಿ, ಇಲ್ಲದಿದ್ದರೆ ನೀವೇ ಸುಮೋಟೋ ಕೇಸ್ ದಾಖಲಿಸಿಕೊಳ್ಳುವಂತೆ ಸೂಚನೆ ನೀಡಿದ್ದೇವೆ ಎಂದು ಹೇಳಿದರು.ಇದನ್ನೂ ಓದಿ: ಗೃಹ ಮಂಡಳಿ ಫ್ಲ್ಯಾಟ್ ಬೇಕಾ? – ಕೋಟಿ ಕೋಟಿ ಹಣ ಇರಬೇಕು!
Advertisement
Advertisement
ಬಳಿಕ ಸಿಎಂ ಪತ್ನಿ ಹಾಗೂ ಸಚಿವ ಬೈರತಿ ಸುರೇಶ್‌ಗೆ ಇಡಿ ನೋಟಿಸ್ ನೀಡಿದ ವಿಚಾರವಾಗಿ ಮಾತನಾಡಿದ ಸಚಿವರು, ಅದಕ್ಕೆ ತಕ್ಕ ಉತ್ತರ ಅವರು ಕೊಡ್ತಾರೆ. ಇಡಿ ನೋಟಿಸ್‌ಗೆ ಏನು ಉತ್ತರ ಬೇಕೋ ಅದನ್ನು ಕೊಡ್ತಾರೆ. ಇಡಿ ಅವರು ಅಪೇಕ್ಷೆ ಪಟ್ಟಂತೆ ಉತ್ತರ ಕೊಡುತ್ತಾರೆ ಎಂದು ಅಸಮಾಧಾನ ಹೊರಹಾಕಿದರು.
Advertisement
ಕೋರ್ಟ್ ಆದೇಶ ಮತ್ತು ಇಡಿ ನೋಟಿಸ್ ತನಿಖೆ ನಡೆಯುವಾಗ ನಾವು ಏನು ಹೇಳೋಕೆ ಆಗಲ್ಲ. ಸಬ್ ಜ್ಯೂಡಿಸ್ ಆಗುತ್ತೆ ಹೀಗಾಗಿ ನಾವು ಏನು ಹೇಳೋಕೆ ಆಗಲ್ಲ. ಕೆಪಿಸಿಸಿ ಅಧ್ಯಕ್ಷರು ಸೇರಿ ಎಲ್ಲರೂ ಮೊದಲೇ ರಾಜಕೀಯ ಪ್ರೇರಿತ ಅಂತ ಹೇಳಿದ್ದಾರೆ. ಮುಡಾ ಪ್ರಕರಣ ರಾಜಕೀಯ ಪ್ರೇರಿತ ಅಂತ ಮೊದಲಿಂದ ಹೇಳಿದ್ದೇವೆ. ಈಗಲೂ ಅದನ್ನೇ ಹೇಳುತ್ತಿದ್ದೇವೆ ಎಂದರು.
Advertisement
ಉಡುಪಿಯ ಶಾಲೆಗೆ ಬಾಂಬ್ ಬೆದರಿಕೆ ವಿಚಾರವಾಗಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಸಾವಿರಾರು ಶಾಲೆಗಳಿಗೆ ಬಾಂಬ್ ಬೆದರಿಕೆ ಬರುತ್ತಿದೆ. ಕರ್ನಾಟಕದಲ್ಲೂ ಬಾಂಬ್ ಬೆದರಿಕೆ ಬಂದಿದೆ. ಹಿಂದೆನೂ ಬಂದಿದೆ. ಈಗಲೂ ಬರ್ತಿದೆ ದಿನನಿತ್ಯವೂ ಬರುತ್ತದೆ ಎಂದು ಹೇಳಿದರು.
ನಾವು ಪರಿಶೀಲನೆ ಮಾಡುತ್ತೇವೆ. ಯಾವುದೋ ದೇಶದಲ್ಲಿ ಕುಳಿತುಕೊಂಡು ಪೋಸ್ಟಿಂಗ್ ಮಾಡಿರುತ್ತಾನೆ. ನಾವು ಬ್ಯಾಕ್ ಟ್ರಾಕ್ ಮಾಡಿ ಪತ್ತೆ ಹಚ್ಚುತ್ತೇವೆ. ನಮ್ಮಲ್ಲಿ ಸೈಬರ್ ಟಿಂ ಬಹಳ ಚೆನ್ನಾಗಿದೆ. ಇಡೀ ದೇಶದಲ್ಲಿ ಸೈಬರ್‌ನಲ್ಲಿ ಪರಿಣಿತರಿರೋದು ಕರ್ನಾಟಕದಲ್ಲಿ ಮಾತ್ರ. ವೆರಿಫೈ ಮಾಡಿದಾಗ ಬೇರೆಬೇರೆ ದೇಶದ ಪೋಸ್ಟಿಂಗ್ ಇರುತ್ತವೆ. ಅವರ ಅಡ್ರೇಸ್, ಅಕೌಂಟ್ ಯಾವುದು ನಮಗೆ ಸಿಗೋದಿಲ್ಲ. ಆದ್ದರಿಂದ ನಾವು ಇದನ್ನ ಗಂಭೀರವಾಗಿ ತೆಗೆದುಕೊಳ್ತೀವೆ. ಏಕೆಂದರೆ ಒಂದು ವೇಳೆ ಇದು ನಿಜಾನೇ ಆಗಿದ್ದರೆ ಏನು ಮಾಡೋದು. ಆದ್ದರಿಂದ ಇದನ್ನು ವೆರಿಫೈ ಮಾಡ್ತೇವೆ ಎಂದು ಭರವಸೆ ನೀಡಿದರು.ಇದನ್ನೂ ಓದಿ: ಶಿವಣ್ಣ ಗಟ್ಟಿಯಾಗಿ ವಾಪಸ್ ಬಂದಿದ್ದಾರೆ: ಡಾಲಿ ಧನಂಜಯ