ಬೆಂಗಳೂರು: ಮೃತ ಪಿಎಸ್‌ಐ ಪರಶುರಾಮ್ (PSI Parashuram) ಪತ್ನಿಗೆ ಸರ್ಕಾರಿ ಇಲಾಖೆಯಲ್ಲಿ ಕೆಲಸ, ಪರಿಹಾರ ಕೊಡೋದಕ್ಕೆ ಸರ್ಕಾರ ತೀರ್ಮಾನ ಮಾಡಿದೆ ಎಂದು ಗೃಹಸಚಿವ ಜಿ. ಪರಮೇಶ್ವರ್ (G Parameshwara) ತಿಳಿಸಿದ್ದಾರೆ.
Advertisement
ಪಿಎಸ್‌ಐ ಪರಶುರಾಮ್ ನಿಗೂಢ ಸಾವು ಪ್ರಕರಣದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಲ್ಲಿನ ಆಡಳಿತ ಪಕ್ಷದ ಶಾಸಕ ಮೇಲೆ ಆಪಾದನೆ ಮಾಡಿದ್ದಾರೆ. ಸಿಐಡಿ ತನಿಖೆಗೆ ಪ್ರಕರಣವನ್ನು ಕೊಟ್ಟಿದ್ದೇವೆ, ತನಿಖೆ ನಡೆಯುತ್ತಿದೆ. ಇದು ಆತ್ಮಹತ್ಯೆ ಅಲ್ಲ, ಅಂತ ಇಲಾಖೆ ಹೇಳಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಾವಿಗೆ ಕಾರಣ ಗೊತ್ತಾಗುತ್ತೆ. ಪರಶುರಾಮ್ ಪತ್ನಿಗೆ ಇಲಾಖೆಯಲ್ಲಿ ಕೆಲಸ (Government Job), ಪರಿಹಾರ ಕೊಡೋಕೆ ಸರ್ಕಾರ ತೀರ್ಮಾನ ಸರ್ಕಾರ ಮಾಡಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಿಎಸ್‌ಐ ಸಾವು ಪ್ರಕರಣ; ಸಿಐಡಿ ತನಿಖೆಗೆ ವಹಿಸಿ ಸರ್ಕಾರ ಆದೇಶ
Advertisement
Advertisement
10 ತಿಂಗಳು ಸರ್ಕಾರ ಇರಲ್ಲ ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಂತಹ ಮಾತುಗಳು ಬರೋದು ಸ್ವಾಭಾವಿಕ. ಅಸ್ಥಿರವಾಗುವ ಸೂಚನೆಗಳು ನಮ್ಮಲ್ಲಿ ಕಾಣಿಸ್ತಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಸ್ರೇಲ್ v/s ಹಿಜ್ಬುಲ್ಲಾ; ಇಬ್ಬರ ನಡುವೆ ಕಿತ್ತಾಟ ಯಾಕೆ? – ಭಾರತೀಯರಿಗೆ ಎಚ್ಚರಿಕೆ!
Advertisement
ರಾಜ್ಯದಲ್ಲಿ ಸಚಿವರ ಖಾತೆ ಹಂಚಿಕೆ ವಿಚಾರ ಕುರಿತು ಮಾತನಾಡಿದ ಸಚಿವರು, ಈ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಇವತ್ತು (ಭಾನುವಾರ) ಸಂಜೆ ಕಾಂಗ್ರೆಸ್ ನಾಯಕರ ಸಭೆ ಕರೆದಿದ್ದಾರೆ. ಸಭೆಯ ಅಜೆಂಡಾ ಏನಂತ ಗೊತ್ತಿಲ್ಲ. ಎಲ್ಲ ಮಂತ್ರಿಗಳನ್ನ ಕರೆದಿದ್ದಾರೆ. ರಾಜ್ಯಪಾಲರು ಸಿಎಂಗೆ ಶೋಕಾಸ್ ನೀಡಿದ್ದಾರೆ. ಸಂಪುಟ, ಡಿಕೆ ಶಿವಕುಮಾರ್ ನೇತೃತ್ವದಲ್ಲಿ ರೆಸೆಲ್ಯೂಷನ್ ಮಾಡಿ, ಶೋಕಾಸ್ ನೋಟಿಸ್ ವಾಪಾಸ್ ಪಡೆಯುವಂತೆ ಮನವಿ ಮಾಡಿದ್ದೇವೆ. ಅಡ್ವಸರಿ ರೂಪದಲ್ಲಿ ಮನವಿ ಮಾಡಿದ್ದೇವೆ. ಈ ಬಗ್ಗೆ ಹೈಕಮಾಂಡ್, ಸುರ್ಜೆವಾಲಾ, ಕೆ.ಸಿ ವೇಣುಗೋಪಾಲ್‌ರನ್ನ ಕಳಿಸ್ತಿದ್ದಾರೆ. ಇದರ ಬಗ್ಗೆ ಚರ್ಚೆ ಮಾಡಬಹುದು ಎಂದು ನುಡಿದಿದ್ದಾರೆ. ಇದನ್ನೂ ಓದಿ: Belagavi: ನಿಯಂತ್ರಣ ತಪ್ಪಿ ಮಾರ್ಕಂಡೇಯ ನದಿಗೆ ಬಿದ್ದ ಬೈಕ್ – ಓರ್ವನ ರಕ್ಷಣೆ ಮತ್ತೋರ್ವ ನಾಪತ್ತೆ