ಬೆಂಗಳೂರು: ಸಿಎಂ ಬದಲಾವಣೆ ಮಾಡೋದು, ಮುಂದುವರೆಸೋದು ಹೈಕಮಾಂಡ್‌ಗೆ (Congress High Command) ಬಿಟ್ಟ ವಿಚಾರ ಎಂದು ಗೃಹ ಸಚಿವ ಪರಮೇಶ್ವರ್ (G. Parameshwara) ತಿಳಿಸಿದ್ದಾರೆ.
ಲೋಕಸಭೆಯಲ್ಲಿ (Loksabha Elections) ಹೆಚ್ಚು ಸ್ಥಾನ ಗೆದ್ದರೆ 5 ವರ್ಷ ಸಿದ್ದರಾಮಯ್ಯ (Siddaramaiah) ಸಿಎಂ ಆಗಿ ಇರುತ್ತಾರೆ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಲೋಕಸಭೆಯಲ್ಲಿ ಸಿದ್ದರಾಮಯ್ಯ ಒಬ್ಬರೇ ಅಲ್ಲ. ಕೆಪಿಸಿಸಿ ಅಧ್ಯಕ್ಷರು (KPCC President), ನಾವೆಲ್ಲರೂ ಇದ್ದೇವೆ. ನಾವೆಲ್ಲ ಸೇರಿ 28 ಕ್ಷೇತ್ರ ಗೆಲ್ಲಬೇಕು ಅಂತ ಪ್ರಯತ್ನ ಮಾಡ್ತೀವಿ. ಅಂತಿಮವಾಗಿ ಜನ ಹೇಗೆ ಸಹಕಾರ ಕೊಡ್ತಾರೆ, ಮತ ಹಾಕ್ತಾರೆ ಅನ್ನೋದು ಜನರಿಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.
Advertisement
Advertisement
ನಮಗೆ ವಿಶ್ವಾಸ ಇದೆ. ನಾವು ಕಾರ್ಯಕ್ರಮ ಕೊಟ್ಟಿದ್ದೇವೆ. ಗ್ಯಾರಂಟಿ ಅನುಷ್ಠಾನ ಮಾಡಿದ್ದೇವೆ. ಜನ ಸಮುದಾಯಕ್ಕೆ ಈ ಸರ್ಕಾರದ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ. ಹಾಗಾಗಿ ನಾವು ಹೆಚ್ಚು ಸ್ಥಾನ ಗೆಲ್ಲಬೇಕು ಅಂತ ಹೇಳಿ ನಾವೆಲ್ಲ ಸಂಕಲ್ಪ ಮಾಡಿದ್ದೇವೆ. ಹೈಕಮಾಂಡ್ ಕೂಡಾ ನಮಗೆ ಇದನ್ನೇ ಹೇಳಿದೆ ಎಂದರು. ಇದನ್ನೂ ಓದಿ: ವಿಮಾನದಲ್ಲಿ ಟಾಯ್ಲೆಟ್ ಡೋರ್ ಲಾಕ್ – ಮುಂಬೈನಿಂದ ಬೆಂಗ್ಳೂರಿಗೆ ವಿಮಾನದ ಟಾಯ್ಲೆಟ್‌ನಲ್ಲೇ ಕುಳಿತು ಪ್ರಯಾಣಿಸಿದ ವ್ಯಕ್ತಿ!
Advertisement
Advertisement
ಕ್ಷೇತ್ರ ಗೆದ್ದುಕೊಂಡು ಬರಬೇಕು!:
ಸಿಎಂ ಮುಂದುವರಿಸೋದು, ಬಿಡೋದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಆ ತೀರ್ಮಾನ ನಮ್ಮ ಹಂತದಲ್ಲಿ ಆಗೋದಿಲ್ಲ. ಅದನ್ನ ಹೈಕಮಾಂಡ್ ನವರು ತೀರ್ಮಾನ ಮಾಡ್ತಾರೆ ಎಂದರು. ಲೋಕಸಭೆ ಚುನಾವಣೆಗಾಗಿ 28 ಸಚಿವರ ಸಭೆಯನ್ನ ದೆಹಲಿಯಲ್ಲಿ ಮಾಡಿದ್ರು. ಒಂದೊಂದು ಕ್ಷೇತ್ರದ ಜವಾಬ್ದಾರಿ ಕೊಟ್ಟಿದ್ದಾರೆ. ನಾವು ಆ ಕ್ಷೇತ್ರ ಗೆದ್ದುಕೊಂಡು ಬರಬೇಕು ಎಂದರು.
ಯತೀಂದ್ರ ಅವರ ಹೇಳಿಕೆ ನಮಗೆ ಗೊತ್ತಿಲ್ಲ. ಅವರ ಹೇಳಿಕೆಯನ್ನು ನಾನು ಗಮನಿಸಿಲ್ಲ. ಆದರೆ ನಮಗೆ ಜವಾಬ್ದಾರಿ ಕೊಟ್ಟಿದ್ದಾರೆ. 28 ಕ್ಷೇತ್ರ ಗೆಲ್ಲಿಸೋದಕ್ಕೆ ಸೂಚನೆ ಕೊಟ್ಟಿದ್ದಾರೆ ಎಂದರು. ಇದನ್ನೂ ಓದಿ: ಮೈಸೂರಿನ ಶಿಲ್ಪಿ ಕೆತ್ತಿರುವ ರಾಮಲಲ್ಲಾ ಮೂರ್ತಿ ಇಂದು ರಾಮಮಂದಿರ ಪ್ರವೇಶ – ದೇವಾಲಯದ ಸುತ್ತ ಪ್ರದಕ್ಷಿಣೆ