– ಡಿಸಿಎಂಗೆ ತಿರುಗೇಟು ಕೊಟ್ಟ ಪ್ರತಾಪ್ ಸಿಂಹ
– ಕೋಟ್ಲರ್ ಪ್ರಶಸ್ತಿಗೆ ಪ್ರಧಾನಿ ಮೋದಿ ಅರ್ಹರೇ?
ಬೆಂಗಳೂರು: ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಅಂತಿಮ ದರ್ಶನ ಹಾಗೂ ಕ್ರಿಯಾ ವಿಧಿವಿಧಾನಕ್ಕೆ ಬಾರದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವೀಟ್ ಮೂಲಕ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ವ್ಯಂಗ್ಯವಾಡಿದ್ದಾರೆ.
ಟ್ವೀಟ್‍ನಲ್ಲಿ ಏನಿದೆ?:
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸಿದ್ಧ ವ್ಯಕ್ತಿಗಳ ಮದುವೆ ಸಮಾರಂಭ, ಸಿನಿಮಾ ಸಭೆಗಳಲ್ಲಿ ಭಾಗಿ ಆಗುತ್ತಾರೆ. ಆದರೆ ಅವರಿಗೆ ನಡೆದಾಡುವ ದೇವರು, ಬಡವರಿಗೆ ಶ್ರಮಿಸಿದ ಶ್ರೀ ಸಿದ್ದಗಂಗಾ ಸ್ವಾಮೀಜಿಗಳ ಕ್ರಿಯಾ ವಿಧಿವಿಧಾನಕ್ಕೆ ಬರಲು ಆಗಲಿಲ್ಲ. ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಪ್ರಧಾನಿಗಳ ಬಳಿ ಕೇಳಿಕೊಳ್ಳುವುದು ವ್ಯರ್ಥ ಎಂದು ವ್ಯಂಗ್ಯವಾಡಿದ್ದಾರೆ.
Advertisement
PM Modi attends celebrity weddings, meets movie stars but skips the funeral of our NaDedāDuva devaru, who dedicated his life to help the poor & the marginalised. Repeated requests to confer Bharat Ratna on him have gone in vain.
Truly well-deserved recipient of Kotler Award ????????
— Dr. G Parameshwara (@DrParameshwara) January 23, 2019
Advertisement
ಕೋಟ್ಲರ್ ಪ್ರಶಸ್ತಿಗೆ ನಿಜವಾದ ಅರ್ಹತೆ ಹೊಂದಿದವರು ಪ್ರಧಾನಿ ನರೇಂದ್ರ ಮೋದಿ ಅವರಾ ಎಂದು ಪರಮೇಶ್ವರ್ ಪ್ರಶ್ನಿಸಿ ಆಕ್ರೋಶ ಹೊರಹಾಕಿದ್ದಾರೆ.
Advertisement
ಡಿಸಿಎಂ ಜಿ.ಪರಮೇಶ್ವರ್ ಅವರ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿದ ಸಂಸದ ಪ್ರತಾಪ್ ಸಿಂಹ ಅವರು, ನಿಮ್ಮ ಪಕ್ಷದ ನಾಯಕಿ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಎಲ್ಲಿ ಹೋಗಿದ್ದರು? ದಯವಿಟ್ಟು ನನ್ನ ಪಶ್ನೆಗೆ ಉತ್ತರ ಕೊಡಿ ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.
Advertisement
Respected @DrParameshwara Sir, where were your SoniaG n RahulG? Did they turn up? Can u pls answer?! https://t.co/sN1UG1kRZC
— Pratap Simha (@mepratap) January 23, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv