ಬೆಂಗಳೂರು: ದೇವರಾಜ ಅರಸರ (D. Devaraj Urs) ದಾಖಲೆ ಸರಿಗಟ್ಟಿದ ಸಿಎಂ ಸಿದ್ದರಾಮಯ್ಯ ಅವರಿಗೆ ಗೃಹ ಸಚಿವ ಪರಮೇಶ್ವರ್ (G.Parameshwar) ಅಭಿನಂದನೆ ತಿಳಿಸಿದ್ದಾರೆ. ಬೆಂಗಳೂರಲ್ಲಿ (Bengaluru) ಮಾತನಾಡಿದ ಅವರು, ಸಿದ್ದರಾಮಯ್ಯ (Siddaramaiah) ಜನಪ್ರಿಯ ಸಿಎಂ ಆಗಿದ್ದಾರೆ. ದೇವರಾಜ ಅರಸರ ದಾಖಲೆ ಮುರಿಯುತ್ತಿದ್ದಾರೆ. ನಾನು ಸಿಎಂ ಅವರನ್ನ ಅಭಿನಂದಿಸುತ್ತೇನೆ ಎಂದರು.
ಸೋನಿಯಾ, ರಾಹುಲ್, ಖರ್ಗೆ, ವೇಣುಗೋಪಾಲ್ ರೆಕಾರ್ಡ್ ಮಾಡಲು ಅವಕಾಶ ಕೊಟ್ಟಿದ್ದಾರೆ. ಅದಕ್ಕಾಗಿ ನಾನು ವರಿಷ್ಠರಿಗೂ ಅಭಿನಂದಿಸ್ತೇನೆ. ಕಾಂಗ್ರೆಸ್ ನಲ್ಲಿ ಮಾತ್ರ ಇಂತಹ ಅವಕಾಶ ಇದೆ. ದೇವರಾಜ ಅರಸರಿಗೆ ಅವಕಾಶ ಕೊಡಲಾಗಿತ್ತು. ಈಗ ಸಿದ್ದರಾಮಯ್ಯನವರಿಗೆ ಕೊಟ್ಟಿದ್ದಾರೆ. ಇಂತಹ ಬೆಳವಣಿಗೆ ಇಲ್ಲಿ ಮಾತ್ರ ಸಾಧ್ಯ. ಅಭಿವೃದ್ಧಿ, ಬಡವರ ಬಗ್ಗೆ ಪಕ್ಷಕ್ಕೆ ಬದ್ಧತೆ ಇದೆ, ಇಬ್ಬರು ನಾಯಕರು ಆ ಬದ್ಧತೆ ಇಟ್ಟುಕೊಂಡಿದ್ದರು. ಅದಕ್ಕೆ ಅವರು ದಾಖಲೆ ಮಾಡಿದ್ದಾರೆ ಎಂದರು.
ಪೂರ್ಣಾವಧಿ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವರು ಹೇಳಿದ ಮೇಲೆ ಇನ್ನೇನಿದೆ? ಅವರ ಮೇಲೆ ಅವರಿಗೆ ವಿಶ್ವಾಸವಿದೆ, ನಮಗೂ ಇದೆ ಎಂದು ಸ್ಪಷ್ಟಪಡಿಸಿದರು.

