– ಭ್ರಷ್ಟಾಚಾರದ ಬಗ್ಗೆ ಪಾಠ ಮಾಡುವ ಬಿಜೆಪಿ ಈಗ ಏಕೆ ಮೌನ?
ಬೆಂಗಳೂರು: ಸಿಎಂ ಸಿದ್ದರಾಮಯ್ಯ – ಕೇಂದ್ರ ಸಚಿವ ಕುಮಾರಸ್ವಾಮಿ ನಡುವಿನ ಜಟಾಪಟಿಯಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಸಿಎಂ ಸಿದ್ದರಾಮಯ್ಯ ನಿಲುವುಗಳನ್ನು ಗೃಹಸಚಿವ ಪರಮೇಶ್ವರ್ (G Parameshwar) ಸಮರ್ಥಿಸಿಕೊಂಡಿದ್ದಾರೆ.
ಸಿದ್ದರಾಮಯ್ಯ (Siddaramaiah) ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದ್ದಾರೆ. ಅವರ ಇಡೀ ಜೀವನ ಸಾಮಾಜಿಕ ನ್ಯಾಯದ ಸಿದ್ಧಾಂತದಡಿಯೇ ರಾಜಕಾರಣ ಮಾಡಿಕೊಂಡು ಬಂದಿರೋದು. ಅದರಲ್ಲಿ ಹೊಸದೇನೂ ಇಲ್ಲ. ಅವರ ರಾಜಕೀಯ ಅಡಿಪಾಯವೇ ಸಾಮಾಜಿಕ ನ್ಯಾಯ ಎಂದು ಸಿಎಂ ಪರ ಬ್ಯಾಟಿಂಗ್ ಮಾಡಿದ್ದಾರೆ. ಇದನ್ನೂ ಓದಿ: ರಸ್ತೆ ಅಪಘಾತದ ಸಂತ್ರಸ್ತರಿಗೆ ನಗದು ರಹಿತ ಚಿಕಿತ್ಸೆ – ಏನಿದು ʻಪಿಎಂ ರಾಹತ್ʼ ಯೋಜನೆ?

ಸಿದ್ದರಾಮಯ್ಯ ಮೊದಲು ಜೆಡಿಎಸ್‌ನಲ್ಲಿದ್ರು (JDS), ಅಧ್ಯಕ್ಷರಾಗಿದ್ರು. ನಂತರ ಅವರನ್ನ ಪಕ್ಷದಿಂದ ಹೊರಗೆ ಹಾಕಿದ್ರು. ಏನೆಲ್ಲ ವಿಚಾರಗಳು ಇರ್ತವೋ ನಮಗೆ ತಿಳಿದಿರಲ್ಲ. ಅವರಿಬ್ಬರ ವಾಕ್ಸಮರ ಬಗ್ಗೆ ನಾನು ಉತ್ತರ ಕೊಡಕ್ಕಾಗಲ್ಲ ಎಂದಿದ್ದಾರೆ.
ಇದೇ ವೇಳೆ ಪವರ್ ಶೇರ್ ಗಲಾಟೆ ಗ್ಯಾಪ್‌ನಲ್ಲಿ ದಲಿತ ಸಿಎಂ (Dalit CM) ಕಾರ್ಡ್ ಪ್ಲೇ ಮಾಡಿದ ಸಿಎಂ ಆಪ್ತ ಸಚಿವ ಮಹದೇವಪ್ಪ ವಿರುದ್ಧ ಡಿಕೆ ಸುರೇಶ್ ಸೇರಿದಂತೆ ಡಿಕೆ ಆಪ್ತರೆಲ್ಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೃಹಸಚಿವ ಪರಮೇಶ್ವರ್, ದಲಿತರನ್ನು ಸಿಎಂ ಮಾಡೋದು ಕಾಂಗ್ರೆಸ್ ಪಕ್ಷನೇ, ಇನ್ಯಾರು ಮಾಡ್ತಾರೆ. ಯಾವಾಗ ದಲಿತ ಸಿಎಂ ಮಾಡಬೇಕು ಅಂತ ಹೈಕಮಾಂಡ್ ತೀರ್ಮಾನ ಮಾಡುತ್ತೆ. ವಿಪಕ್ಷಗಳಿಗೆ ತಮ್ಮ ಹುಳುಕು ಮುಚ್ಚಿಕೊಳ್ಳಲು ದಲಿತ ಸಿಎಂ ಕೂಗು ತಂದಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಬಿಜೆಪಿ ನಾಯಕರು ಮೌನವಾಗಿದ್ದಾರೆ
ಇನ್ನೂ ಬಿಜೆಪಿ ಶಾಸಕ ಚಂದ್ರು ಲಮಾಣಿ ಪ್ರಕರಣದಲ್ಲಿ ಷಡ್ಯಂತ್ರ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಲೋಕಾಯುಕ್ತದವ್ರು ಎಲ್ಲ ನೋಡಿಯೇ ಮಾಡಿರ್ತಾರೆ. ಪ್ರಕರಣದ ಹಿನ್ನೆಲೆ, ವಿದ್ಯಮಾನಗಳನ್ನ ನೋಡಿಯೇ ದಾಳಿ ಆಗಿದೆ. ಮುಂದೆ ಕಾನೂನು ಪ್ರಕಾರ ಕ್ರಮ ವಹಿಸ್ತಾರೆ. ಬಿಜೆಪಿಯವ್ರು ಭ್ರಷ್ಟಾಚಾರದ (Corruption) ಬಗ್ಗೆ ಯಾವಾಗಲೂ ಪಾಠ ಮಾಡ್ತಾರೆ, ಈಗ ಬಿಜೆಪಿ ನಾಯಕರು ಮೌನವಾಗಿದ್ದಾರೆ, ಯಾರೂ ಮಾತಾಡ್ತಿಲ್ಲ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ತಮಿಳುನಾಡು ಮಾದರಿ ಶಿಕ್ಷಕರ ನೇಮಕ ವ್ಯವಸ್ಥೆ ಬರಲಿ: ಬಸವರಾಜ ಬೊಮ್ಮಾಯಿ

ಶಾಲಾ ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್?
16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಶಾಲಾ, ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಬಗ್ಗೆ ಚಿಂತನೆ ನಡೆದಿದೆ. ಮಕ್ಕಳಿಗೆ ಮೊಬೈಲ್ ಕೊಟ್ರೆ ವಿದ್ಯಾಭ್ಯಾಸದ ಕಡೆ ಗಮನ ಕಡಿಮೆ ಆಗುತ್ತೆ. ಬಹಳ ದೇಶಗಳಲ್ಲಿ ಮೊಬೈಲ್ ಬ್ಯಾನ್ ನಿಯಮ ಇದೆ. ಆಸ್ಟ್ರೇಲಿಯಾ, ಯುರೋಪ್‌ನಲ್ಲಿ ಜಾರಿಯಲ್ಲಿದೆ. ನಾವೂ ಜಾರಿ ಮಾಡಲು ಚಿಂತನೆ ಮಾಡಿದ್ದೇವೆ, ಈಗಾಗಲೇ ಸಿಎಂ ಇದರ ಬಗ್ಗೆ ಮಾತಾಡಿದ್ದಾರೆ. ಸಾಧಕ ಬಾಧಕ ಅಧ್ಯಯನ ಮಾಡಿ ಕ್ರಮ ತಗೋತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಾಗಲಕೋಟೆ | ಕಲ್ಲು ತೂರಾಟ ನಡೆದ ಮಸೀದಿ ಎದುರೇ ಮತ್ತೆ ಶಿವಾಜಿ ಜಯಂತಿ ಆಚರಣೆಗೆ ನಿರ್ಧಾರ

