ಮಂಡ್ಯ: ಎರಡು ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ನೀಡದಿದ್ರೂ ಕೂಡ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಮಾತ್ರ ಬಹಿರಂಗ ಸಭೆಯಲ್ಲಿ ಸಾವಿರಾರು ಜನರೆದುರು ಸುಳ್ಳು ಹೇಳಿದ ಘಟನೆ ಮಂಡ್ಯದಲ್ಲಿ ನಡೆದಿದೆ.
ಜಿಲ್ಲೆಯ ಕೆಆರ್ ಪೇಟೆ ಪಟ್ಟಣದಲ್ಲಿ ನಡೆದ ಮನೆ ಮನೆಗೂ ಕಾಂಗ್ರೆಸ್ ಸಮಾವೇಶಲ್ಲಿ ಭಾಗವಹಿಸಿದ್ದ ಪರಮೇಶ್ ಅವರಿಗೆ ರೈತರ ಆತ್ಮಹತ್ಯೆ ಪರಿಹಾರ ಹಣವನ್ನು ನೀಡದಿರುವ ಕುರಿತು ಸಭೆಯಲ್ಲಿದ್ದ ಜನರು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಹಣ ನೀಡಿರುವುದಾಗಿ ಪರಮೇಶ್ವರ್ ಸುಳ್ಳು ಹೇಳಿಕೆ ನೀಡಿದ್ದಾರೆ. ಇದೇ ಸಮಯದಲ್ಲಿ ಸಭೆಯಲ್ಲಿದ್ದ ಜನರು ಒಂದೇ ಬಾರಿಗೆ ಪರಿಹಾರ ನೀಡಿಲ್ಲ ಎಂದು ಕೂಗಾಡಿದ ನಂತರ ಜನರನ್ನು ಸಮಾಧಾನಗೊಳಿಸಲು ಅಕೌಂಟ್ ಸಮಸ್ಯೆ ಇದೆ, ಶೀಘ್ರವೇ ನೀಡಲಾಗುವುದು ಎಂದು ಪರಮೇಶ್ವರ್ ಹೇಳಿದ್ರು.
Advertisement
Advertisement
Advertisement
ಎರಡು ವರ್ಷಗಳ ಹಿಂದೆ ಜಿಲ್ಲೆಯ ಪಾಂಡವಪುರ ತಾಲೂಕಿನ ಸಣಬದಕೊಪ್ಪಲು ಗ್ರಾಮದ ರೈತ ಲೋಕೇಶ್ ಸಾಲಬಾಧೆಯಿಂಧ ಆತ್ಮಹತ್ಯೆಗೆ ಶರಣಾಗಿದ್ದರು. ಆಗ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‍ಗಾಂಧಿಯವರೇ ಭೇಟಿ ನೀಡಿ ಲೋಕೇಶ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ರಾಜ್ಯ ಸರ್ಕಾರ ಒಂದು ಲಕ್ಷ ಪರಿಹಾರವನ್ನು 2 ಲಕ್ಷಕ್ಕೆ ಏರಿಸಿದೆ ಅಂತಾ ಹೇಳಿದ್ರು. ರಾಹುಲ್‍ಗಾಂಧಿ ಬಡ ಕುಟುಂಬಕ್ಕೆ ಕಷ್ಟ ಇದೆ. 5 ಲಕ್ಷ ರೂ ನೀಡಲು ಸೂಚಿಸಿದ್ದರು. ಆದರೆ ಇದುವರೆಗೂ 5 ಲಕ್ಷ ರೂ. ಪರಿಹಾರವನ್ನೇ ಕೊಟ್ಟಿಲ್ಲ. ಆದರೂ ಪರಮೇಶ್ವರ್ ಪರಿಹಾರ ಕೊಟ್ಟಿದ್ದೇವೆ ಅಂತಾ ಹೇಳಿದ್ದಾರೆ.
Advertisement
ಸತತ ಎರಡು ವರ್ಷಗಳಿಂದ ಪರಿಹಾರ ಹಣಕ್ಕಾಗಿ ಅಲೆದಾಡಿ ಸುತ್ತಾಗಿದ್ದ ಕುಟುಂಬಸ್ತರಿಗೆ 2 ಲಕ್ಷ ರೂ. ಪರಿಹಾರ ಹಣವನ್ನು ಮಾತ್ರ ನೀಡಲಾಗಿದೆ. ಈ ಕುರಿತು ಕಾರ್ಯಕ್ರಮ ಮುಕ್ತಾಯದ ನಂತರ ಮಾತನಾಡಿದ ಪರಮೇಶ್ವರ್, ಅಕೌಂಟ್ ಸಮಸ್ಯೆಯಿಂದ ಪರಿಹಾರ ನೀಡಲು ತಡವಾಗಿದೆ. ಶೀಘ್ರದಲ್ಲಿಯೇ ಹಣವನ್ನು ತಲುಪಿಸಲು ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಸೂಚಿಸುವುದಾಗಿ ಹೇಳಿದರು.